For Quick Alerts
ALLOW NOTIFICATIONS  
For Daily Alerts
 

Junior Asia Cup: ಅರ್ಜಿತ್‌ ಹ್ಯಾಟ್ರಿಕ್‌: ಪಾಕಿಸ್ತಾನ ಮಣಿಸಿದ ಭಾರತ ಚಾಪಿಯನ್‌

ಮಸ್ಕಟ್‌ನಲ್ಲಿ ನಡೆದ ಪುರಷರ ಜೂನಿಯರ್‌ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸಿತು. ಪ್ರಶಸ್ತಿ ಸುತ್ತಿನ ಕಾದಾಟದಲ್ಲಿ ಭಾರತ 5-3 ಗೋಲುಗಳಿಂದ ಪಾಕಿಸ್ತಾನ ತಂಡದ ವಿರುದ್ಧ ಭರ್ಜರಿ ಜಯದ ನಗೆ ಬೀರಿತು. ಭಾರತದ ಪರ ಅರ್ಜಿತ್ ಸಿಂಗ್ ಹ್ಯಾಟ್ರಿಕ್‌ ಗೋಲು ಬಾರಿಸಿ ಜಯದಲ್ಲಿ ಮಿಂಚಿದರು.

ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿತು. ಭಾರತದ ಪರ ಅರ್ಜಿತ್ ಸಿಂಗ್‌ ಹುಂದಾಲ್ (4, 18, 47, 54ನೇ ನಿಮಿಷ) ನಾಲ್ಕು ಗೋಲು, ಧೀರಜ್‌ ಸಿಂಗ್ (19ನೇ ನಿಮಿಷ) ಒಂದು ಗೋಲು ಬಾರಿಸಿ ಮಿಂಚಿದರು. ಪರಾಜಿತ ತಂಡದ ಪರ ಹನ್ನಾನ್ ಶಹೀದ್ (3ನೇ ನಿಮಿಷ), ಸುಫ್ಯಾನ್ ಖಾನ್ (30, 39ನೇ ನಿಮಿಷ) ಗೋಲು ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದವು.

India Defeats Pakistan 5-3 to Win Men s Junior Asia Cup with Arjit Singh s Stellar Hat-Trick

ಮೊದಲಾವಧಿಯಲ್ಲಿ ಭರ್ಜರಿ ಪ್ರದರ್ಶನ

ಮೊದಲಾವಧಿಯಲ್ಲಿ ಉಭಯ ತಂಡಗಳು ಅಮೋಘ ಆಟದ ಪ್ರದರ್ಶನ ನೀಡಿದವು. ಈ ಅವಧಿಯ ಮೊದಲಾವಧಿಯಲ್ಲಿ ಪಾಕ್‌ ಅಬ್ಬರದ ಆಟದ ಪ್ರದರ್ಶನ ನೀಡಿ ಮೊದಲ ಗೋಲಿನ ಖಾತೆ ಓಪನ್ ಮಾಡಿತು. ಈ ಮೂಲಕ ಪಾಕ್‌ ಆರಂಭದಲ್ಲಿ 1-0 ಮುನ್ನಡೆ ಸಾಧಿಸಿತು. ಈ ಗೆಲುವು ಹೆಚ್ಚು ಹೊತ್ತು ನಿಲ್ಲಲಿಲ್ಲ. ಪರಿಣಾಮ ಭಾರತ ಮುಂದಿನ ಒಂದು ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಚೆಂಡಿಗೆ ಗೋಲಿನ ದರ್ಶನ ಮಾಡಿಸಿತು.

ಜಿದ್ದಾಜಿದ್ದಿನ ಎರಡನೇ ಅವಧಿ

ಉಭಯ ತಂಡಗಳು ಮೊದಲಾವಧಿಯಲ್ಲಿ ತಲಾ ಒಂದೊಂದು ಗೋಲು ಬಾರಿಸಿದ್ದರಿಂದ ಎರಡನೇ ಅವಧಿಯ ಆಟ ರೋಚಕತೆ ಹುಟ್ಟಿಸಿತ್ತು. ಈ ಅವಧಿಯಲ್ಲಿ ಅಬ್ಬರದ ಆಟಕ್ಕೆ ಮಣೆ ಹಾಕಿತು. ಪರಿಣಾಮ ಪಂದ್ಯ ಆರಂಭದ ಮೂರೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಶೂಟೌಟ್ ಸಿಕ್ಕಿತು. ಈ ಅವಕಾಶವನ್ನು ಅರ್ಜಿತ್ ಬಳಸಿಕೊಂಡು, ತಮ್ಮ ಹಾಗೂ ತಂಡದ ಗೋಲಿನ ಸಂಖ್ಯೆಯನ್ನು ಹೆಚ್ಚಿಸಿಕೊಂಡರು. ಈ ಗೋಲು ದಾಖಲಾದ ಒಂದೇ ನಿಮಿಷದಲ್ಲಿ ಧೀರಜ್‌ ಸಿಂಗ್ 19ನೇ ನಿಮಿಷದಲ್ಲಿ ಫೀಲ್ಡ್‌ ಗೋಲು ಬಾರಿಸಿ ಮಿಂಚಿದರು.

ಈ ಅವಧಿಯ ಕೊನೆಯ ಕ್ಷಣದಲ್ಲಿ ಪಾಕ್‌ ಪರ ಪೆನಾಲ್ಟಿ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸಿತು. ಪರಿಣಾಮ ಭಾರತ 3-2 ಗೋಲುಗಳಿಂದ ಮುನ್ನಡೆ ಸಾಧಿಸಿತು.

ಭರ್ಜರಿ ಜಯ

ಮೂರನೇ ಅವಧಿಯ ಆರಂಭದಲ್ಲಿ ಪಾಕ್‌ ಒಂದು ಗೋಲು ಬಾರಿಸಿ ಅಂತರವನ್ನು ಕಡಿಮೆ ಮಾಡುವಲ್ಲಿ ಶ್ರಮಿಸಿತು. ಆದರೆ ಈ ಅವಧಿಯಲ್ಲಿ ಭಾರತ ಯಾವುದೇ ಗೋಲು ದಾಖಲಿಸಿಲಿಲ್ಲ.

ನಾಲ್ಕನೇ ಅವಧಿಯಲ್ಲಿ ಅರ್ಜಿತ್ ಸಿಂಗ್‌ 47ನೇ ನಿಮಿಷದಲ್ಲಿ ಭರ್ಜರಿ ಗೋಲು ಬಾರಿಸಿತು. ಅಲ್ಲದೆ ಪಾಕ್ ವಿಭಾಗದ ರಕ್ಷಣಾ ವಿಭಾಗವನ್ನು ವಂಚಿಸಿದ ಅರ್ಜಿತ್‌ ಫೀಲ್ಡ್‌ ಗೋಲು ಬಾರಿಸಿದರು. ಇದೇ ಅವಧಿಯ 54ನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಅರ್ಜಿತ್ ಇದನ್ನು ಬಳಸಿಕೊಂಡು ಗೋಲು ಬಾರಿಸಿ ಅಂತರವನ್ನು ಹೆಚ್ಚಿಸಿಕೊಂಡಿತು.

Story first published: Wednesday, December 4, 2024, 22:38 [IST]
Other articles published on Dec 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+