IND vs PAK: ದುಬೈನಲ್ಲಿ ಭಾರತದ ವಿರಾಟ ರೂಪ ದರ್ಶನ: ಪಾಕ್‌ಗೆ ಬಿಗ್ ಶಾಕ್
ಟೀಮ್ ಇಂಡಿಯಾ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಬ್ಬರದ ಪ್ರದರ್ಶನವನ್ನು ಮುಂದುವರೆಸಿದೆ. ಚಾಂಪಿಯನ್ಸ್ ಟ್ರೋಫಿಯ "ಎ" ಗುಂಪಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಆರು ವಿಕೆಟ್‌ಗಳಿಂದ ಪಾಕಿಸ್ತಾನ ತಂಡವನ್ನು ಮಣಿಸಿ, ಲೀಗ್ ಹಂತದಲ್ಲಿ ಎರಡನೇ ಜಯ ದಾಖಲಿಸಿತು. ಅಲ್ಲದೆ ಸೆಮಿಫೈನಲ್‌ಗೆ ಹತ್ತಿರವಾಗಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸೋಲನ್ನು ಕಂಡ ಪಾಕಿಸ್ತಾನ ಪ್ರಸಕ್ತ ಟೂರ್ನಿಯಲ್ಲಿ ಲೀಗ್ ಹಂತದಲ್ಲೇ ಟೂರ್ನಿಗೆ ಗುಡ್ ಬಾಯ್ ಹೇಳುವುದು ಬಹುತೇಕ ಖಚಿತ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ತಂಡ 49.4 ಓವರ್‌ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 42.3 ಓವರ್‌ಗಳಲ್ಲಿ 4 ವಿಕೆಟ್‌ಗೆ 244 ರನ್ ಸೇರಿಸಿ ಭರ್ಜರಿ ಜಯ ಸಾಧಿಸಿತು.

ಕಳೆದ ಕೆಲವು ತಿಂಗಳಿನಿಂದ ಲಯಕ್ಕಾಗಿ ಪರದಾಟ ನಡೆಸುತ್ತಿದ್ದ ವಿರಾಟ್ ಕೊಹ್ಲಿ ಬಿಗ್ ಮ್ಯಾಚ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದರು. ಈ ಮೂಲಕ ಬಿಗ್ ಮ್ಯಾಚ್ ಪ್ಲೇಯರ್ ಎಂಬುದನ್ನು ವಿರಾಟ್ ಕೊಹ್ಲಿ ಮತ್ತೊಮ್ಮೆ ಸಾಬೀತು ಪಡಿಸಿದರು. ಇವರು ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಬಾರಿಸಿ ಭರವಸೆ ಮೂಡಿಸಿದ್ದರು. ಆದರೆ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ರನ್ ಕಲೆ ಹಾಕುವಲ್ಲಿ ನಿರಾಸೆ ಅನುಭವಿಸಿದ್ದರು. ಆದರೆ ಪಾಕ್ ವಿರುದ್ಧ ವಿರಾಟ್ ತಮ್ಮ ನೈಜ್ಯ ಆಟವನ್ನು ಆಡಿ.
ವಿರಾಟ್ ಶತಕ
ವಿರಾಟ್ ಕೊಹ್ಲಿ ಐಸಿಸಿ ಟೂರ್ನಿಗಳಲ್ಲಿ ಪಾಕ್ ತಂಡಕ್ಕೆ ಬಹುವಾಗಿ ಕಾಡಿದ್ದಾರೆ. ಇದೇ ಲಯವನ್ನು ಭಾನುವಾರದ ಪಂದ್ಯದಲ್ಲೂ ಮುಂದುವರೆಸಿದರು. ಐದನೇ ಓವರ್‌ನಲ್ಲಿ ವಿರಾಟ್ ಬ್ಯಾಟ್ ಮಾಡಲು ಬಂದ ವಿರಾಟ್ ಪಾಸಿಟಿವ್ ಇಂಟೇಂಟ್‌ನಿಂದ ಅಂಗಳಕ್ಕೆ ಇಳಿದಿದ್ದ ವಿರಾಟ್ ಕ್ಲಾಸಿಕ್ ಬ್ಯಾಟಿಂಗ್ ನಡೆಸಿದರು. ವಿರಾಟ್ 111 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ ಅಜೇಯ 100 ರನ್ ಸಿಡಿಸಿ ಗೆಲುವಿನಲ್ಲಿ ಮಿಂಚಿದರು.

ಪಾಕ್ ನೀಡಿದ ಸಾಧಾರಣ ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಸಾಧರಣವಾಗಿತ್ತು. ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ಜೋಡಿ ಮೊದಲ ವಿಕೆಟ್‌ಗೆ 31 ರನ್‌ಗಳ ಜೊತೆಯಾಟವನ್ನು ನೀಡಿತು. ಈ ವೇಳೆ ರೋಹಿತ್ ಶರ್ಮಾ 20 ರನ್ ಸಿಡಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ಶುಭಮನ್ ಗಿಲ್ ಹಾಗೂ ವಿರಾಟ್ ಕೊಹ್ಲಿ ಜೊತೆಗೂಡಿ ಉತ್ತಮ ಆಟವನ್ನು ಆಡಿದರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ವಿಫಲರಾದರು. ಈ ಜೋಡಿ 75 ಎಸೆತಗಳಲ್ಲಿ 69 ರನ್ ಸೇರಿಸಿ ತಂಡದ ಗೆಲುವಿನಲ್ಲಿ ಮಿಂಚಿದರು.
ಶತಕದ ಜೊತೆಯಾಟ
ಮೂರನೇ ವಿಕೆಟ್‌ಗೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಜೋಡಿ ಸಹ ಉತ್ತಮ ಜೊತೆಯಾಟ ನೀಡಿತು. ಈ ಜೋಡಿ 128 ಎಸೆತಗಳಲ್ಲಿ 114 ರನ್ ಸೇರಿಸಿ ಆರ್ಭಟಿಸಿತು. ಶ್ರೇಯಸ್ ಅಯ್ಯರ್ 67 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 56 ರನ್ ಸಿಡಿಸಿ ಆರ್ಭಟಿಸಿದರು.
ಹಾರ್ದಿಕ್ ಪಾಂಡ್ಯ 8 ರನ್ ಬಾರಿಸಿ ಔಟ್ ಆದರು. ಅಕ್ಷರ್ ಪಟೇಲ್ ಅಜೇಯ 3 ವಿಕೆಟ್ ಪಡೆದರು.
ಪಾಕ್ ಸಾಧಾರಣ ಮೊತ್ತ
ಮೊದಲು ಬ್ಯಾಟ್ ಮಾಡಿದ ಪಾಕ್ ತಂಡದ ಪರ ಬಾಬರ್ ಅಜಮ್ 23, ಸೌದ್ ಶಕೀಲ್ 62, ನಾಯಕ ಮೊಹಮ್ಮದ್ ರಿಜ್ವಾನ್ 46, ಖುಷ್ದಿಲ್ ಶಾ 38, ನಾಸೀಮ್ ಶಾ 14 ರನ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಭಾರತದ ಪರ ಕುಲ್‌ದೀಪ್ ಯಾದವ್ 3, ಹಾರ್ದಿಕ್ ಪಾಂಡ್ಯ 2 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications