ಇಂಗ್ಲೆಂಡ್ ವಿರುದ್ಧ ಭಾರತ ಉದ್ದೇಶಪೂರ್ವಕವಾಗಿ ಸೋತಿತ್ತು: ಅಬ್ದುಲ್ ರಜಾಕ್

2019ರ ವಿಶ್ವಕಪ್‌ನಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಉದ್ದೇಶಪೂರ್ವಕವಾಗಿ ಸೋಲನ್ನು ಕಂಡಿತ್ತು ಎಂದು ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಬ್ದುಲ್ ರಜಾಕ್ ಆರೋಪವನ್ನು ಮಾಡಿದ್ದಾರೆ. ಟೂರ್ನಿಯಲ್ಲಿ ಪಾಕಿಸ್ತಾನ ಮುಂದುವರಿಯಬೇಕಾದರೆ ಭಾರತ ಇಂಗ್ಲೆಂಡ್ ತಂಡವನ್ನು ಸೋಲಿಸಬೇಕಾಗಿತ್ತು. ಇದನ್ನು ಇಷ್ಟ ಪಡದ ಭಾರತ ತಂಡ ಇಂಗ್ಲೆಂಡ್‌ಗೆ ಶರಣಾಗಿತ್ತು ಎಂದು ಹೇಳಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್‌ಸ್ಟ್ರೋಕ್ಸ್ ಇಂಗ್ಲೆಂಡ್ ವಿರುದ್ಧ ಟಿಮ್ ಇಂಡಿಯಾದ ಧೋನಿ ಗೆಲ್ಲಲು ಪ್ರಯತ್ನವನ್ನೂ ನಡೆಸಿದಂತೆ ಕಂಡು ಬಂದಿರಲಿಲ್ಲ ಎಂಬ ಮಾತು ಚರ್ಚೆಗೆ ಕಾರಣವಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಭಾರತ ಉದ್ದೇಶ ಪೂರ್ವಕವಾಗಿ ಸೋತಿತು ಎಂಬುದು ನನ್ನ ಮಾತಿನ ಅರ್ಥವಲ್ಲ ಎಂದು ಸ್ಟ್ರೋಕ್ಸ್ ಸ್ಪಷ್ಟಪಡಿಸಿದ್ದಾರೆ. ಆದರೆ ಸ್ಟ್ರೋಕ್ಸ್ ಮಾತಿಗೆ ಪಾಕ್ ಕ್ರಿಕೆಟಿಗರು ಪ್ರತಿಕ್ರಿಯಿಸಲು ಆರಂಭಿಸಿದ್ದಾರೆ.

ಉದ್ದೇಶ ಪೂರ್ವಕವಾಗಿ ಸೋತರೆ ಶಿಕ್ಷೆಯಾಗಬೇಕು
ಆದರೆ ಪಾಕಿಸ್ತಾನ ಕ್ರಿಕೆಟರ್‌ಗಳು ಈ ವಿಚಾರವಾಗಿ ತಮ್ಮ ಪ್ರತಿಕ್ರಿಯೆ ನೀಡುತ್ತಿದ್ದಾರೆ. "ಟಿವಿ ವೀಕ್ಷಕವಿವರಣೆಕಾರರಾಗಿದ್ದ ನಾವು ಅಂದು ಅದೇ ರೀತಿ ಭಾವನೆ ಬಂದಿತ್ತು. ನಾನು ಐಸಿಸಿ ಬಳಿ ಮನವಿಯನ್ನು ಮಾಡಿಕೊಂಡಿದ್ದೆ. ಮ್ಯಾಚ್ ಫಿಕ್ಸ್ ಅಥವಾ ಸ್ಪಾಟ್ ಫಿಕ್ಸಿಂಗ್ ನಂತಾ ಪ್ರಕರಣಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಅದೇ ರೀತಿ ಉದ್ದೇಶಪೂರ್ವಕವಾಗಿ ತಂಡ ಸೋತರೆ ಅದಕ್ಕೂ ಶಿಕ್ಷೆಯಾಗಬೇಕು ಎಂದು ವಿನಂತಿಸಿದ್ದೇನೆ ಎಂದು ಅಬ್ದುಲ್ ರಜಾಕ್ ಹೇಳಿದ್ದಾರೆ.

ಐಸಿಸಿ ನಿಯಮಗಳನ್ನು ರೂಪಿಸಲಿ
ಐಸಿಸಿ ಉದ್ದೇಶಪೂರ್ವಕವಾಗ ಸೋಲುವುದರ ವಿರುದ್ಧವೂ ನಿಯಮಗಳನ್ನು ರೂಪಿಸಬೇಕು. ಅದರ ವಿರುದ್ಧವೂ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಐಸಿಸಿಗೆ ಒತ್ತಾಯಮಾಡಿದ್ದಾರೆ. ಇದೇ ಸಂದರ್ಭದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಉದ್ದೇಶಪೂರ್ವಕವಾಗಿ ಸೋತಿರುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಪುನರುಚ್ಚರಿಸಿದ್ದಾರೆ.

ಎಲ್ಲಾ ಕ್ರಿಕೆಟಿಗರಿಗೂ ಈ ಅನುಮಾನ ಬಂದಿತ್ತು
"ಇದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ. ನಾನು ಇದನ್ನು ಮೊದಲೇ ಹೇಳಿದ್ದೇನೆ ಮತ್ತು ಎಲ್ಲಾ ಕ್ರಿಕೆಟಿಗರು ಇದನ್ನು ಹೇಳುತ್ತಿದ್ದಾರೆ. ಆಟದ ಸಂದರ್ಭದಲ್ಲಿ ನೀವು ಸ್ಪಷ್ಟವಾಗಿ ಗಮನಿಸಿರಬಹುದು. ಭಾರತ ಅಂದು ಇದ್ದ ಪರಿಸ್ಥಿತಿಯಲ್ಲಿ ಬ್ಯಾಟ್ಸ್‌ಮನ್ ಸಿಕ್ಸರ್ ಸಿಡಿಸಬಹುದಾಗಿತ್ತು. ಆದರೆ ಅದರ ಬದಲಾಗಿ ಬೌಂಡರಿ ಬಾರಿಸಿ ಅಥವಾ ಚೆಂಡನ್ನು ಬ್ಲಾಕ್ ಮಾಡುತ್ತಾ ಇದ್ದಿದ್ದು ಸುಲಭವಾಗಿ ಕಾಣಿಸಿತ್ತು ಎಂದು ತಮ್ಮ ಮಾತನ್ನು ಸಮರ್ಥಿಸಲು ಉದಾಹರಿಸಿದ್ದಾರೆ.

ಬೃಹತ್ ಟಾರ್ಗೆಟ್ ಬೆನ್ನತ್ತಿತ್ತು ಭಾರತ
ಇಂಗ್ಲೆಂಡ್ ವಿರುದ್ಧ 338 ರನ್‌ಗಳ ಗುರಿಯನ್ನು ಪಡೆದಿದ್ದ ಭಾರತ ಕೊನರಯ ಐದು ಓವರ್‌ಗಳಲ್ಲಿ 71 ರನ್‌ಗಳಿಸುವ ಕಠಿಣ ಗುರಿಯನ್ನು ಹೊಂದಿತ್ತು. ಕ್ರೀಸ್‌ನಲ್ಲಿ ಧೋನಿ ಮತ್ತು ಕೇಧಾರ್ ಜಾಧವ್ ಇದ್ದರು. ಆದರೆ ಈ ಬೃಹತ್ ಗುರಿಯನ್ನು ತಲುಪಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಟೀಮ್ ಇಂಡಿಯಾ 50 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 306 ರನ್ ಕಲೆಹಾಕಿ ಇಂಗ್ಲೆಂಡ್‌ಗೆ ಶರಣಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications