ಪಾಕ್ ವಿರುದ್ಧ ಭಾರತದ ಗೆಲುವಿಗೆ ಕಾರಣವಾದ 5 ಅಂಶಗಳು
ಭಾರತ ಹಾಗೂ ಪಾಕಿಸ್ತಾನ ನಡುವಣ ಹೈವೋಲ್ಟೇಜ್ ಪಂದ್ಯ ಭಾನುವಾರ ನಡೆಯಿತು. ಹೈಪ್ ನೀಡಿದಷ್ಟು ಪ್ರದರ್ಶನವನ್ನು ಪಾಕ್ ಆಟಗಾರರು ನೀಡಲಿಲ್ಲ. ಹೀಗಾಗಿ ಪಂದ್ಯ ಏಕಪಕ್ಷೀಯವಾದಂತೆ ಕಂಡು ಬಂದಿತು. ಟೀಮ್ ಇಂಡಿಯಾ ಸಂಘಟಿತ ಆಟದ ಪ್ರದರ್ಶನ ನೀಡಿ, ಟೂರ್ನಿಯಲ್ಲಿ ಹ್ಯಾಟ್ರಿಕ್ ಗೆಲುವಿನ ನಗೆ ಬೀರಿತು. ಅಲ್ಲದೆ ಸೂಪರ್ 8 ಹಂತಕ್ಕೆ ನೇರವಾಗಿ ಅರ್ಹತೆ ಪಡೆಯಿತು. ಭಾರತ ಈ ಪಂದ್ಯ ಗೆಲಲ್ಲು ಕಾರಣವಾದ 5 ಅಂಶಗಳ ಬಗ್ಗೆ ವರದಿ ಇಲ್ಲಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 175 ರನ್ ಸೇರಿಸಿತು. ಭಾರತದ ಪರ ಇಶಾನ್ ಕಿಶನ್ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಬ್ಯಾಟರ್‌ಗಳು ನೆಲಕಚ್ಚಿ ನಿಂತು ಬ್ಯಾಟ್ ಮಾಡುವಲ್ಲಿ ವಿಫಲರಾದರು. ಅಲ್ಲದೆ 18 ಓವರ್‌ಗಳಲ್ಲಿ 114 ರನ್ ಸೇರಿಸಿ ಸೋಲು ಕಂಡಿತು. ಈ ಸೋಲಿನ ಮುಖಾಂತರ ಪಾಕ್ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದಿದೆ. ಅಮೆರಿಕ, ಪಾಕ್‌ಗಿಂತ ಮೇಲಿದೆ.

ಇಶಾನ್ ಪವರ್ ಫುಲ್ ಆಟ
ಅಭಿಷೇಕ್ ಶರ್ಮಾ ಔಟ್ ಆದ ಬಳಿಕ ಟೀಮ್ ಇಂಡಿಯಾ ಒತ್ತಡದಲ್ಲಿತ್ತು. ಆಗ ಇಶಾನ್ ಕಿಶನ್ ನೈಜ ಆಟವನ್ನು ಆಡಿದರು. ಅಲ್ಲದೆ ಬೌಂಡರಿ ಸಿಕ್ಸರ್‌ಗಳ ಮೂಲಕ ರನ್‌ಗಳನ್ನು ಕಲೆ ಹಾಕಿ ತಂಡ, ಸ್ಪರ್ಧಾತ್ಮಕ ಮೊತ್ತ ಕಲೆ ಹಾಕಲು ಕಾರಣರಾದರು. ಇವರು ಬ್ಯಾಟಿಂಗ್ ಮಾಡುವಾಗ ಟೀಮ್ ಇಂಡಿಯಾ 200 ಗಡಿ ಮುಟ್ಟಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿತ್ತು. ಇಶಾನ್ ಟೂರ್ನಿಯಲ್ಲಿ ಸತತ ಎರಡನೇ ಅರ್ಧಶತಕ ಬಾರಿಸಿದರು. ಇವರು ಮಹತ್ವದ ಪಂದ್ಯದಲ್ಲಿ 10 ಬೌಂಡರಿ, 3 ಸಿಕ್ಸರ್ ಚಚ್ಚಿ 77 ರನ್ ಕಲೆ ಹಾಕಿದರು. ಇದರಿಂದ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಒತ್ತಡ ಬೀಳಲೇ ಇಲ್ಲ. ಇವರ ಅಬ್ಬರದ ಬ್ಯಾಟಿಂಗ್ ಪರಿಣಾಮ ಟೀಮ್ ಇಂಡಿಯಾ ಪವರ್ ಪ್ಲೇನಲ್ಲಿ 52 ರನ್ ಸೇರಿಸಿತು. ಇವರ ಅಮೋಘ ಆಟದ ಫಲವಾಗಿ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.
ಎಚ್ಚರಿಕೆಯ ಬ್ಯಾಟಿಂಗ್
ಟೀಮ್ ಇಂಡಿಯಾ ನಿಜಕ್ಕೂ ಮಿಡ್ಲ್ ಓವರ್‌ನಲ್ಲಿ ಎಚ್ಚರಿಕೆ ಬ್ಯಾಟಿಂಗ್ ನಡೆಸಿತು. ಮಿಸ್ಟರಿ ಸ್ಪಿನ್ ಬೌಲರ್ ಎಂದು ಕರೆಯಲಾಗುತ್ತಿರುವ ಉಸ್ಮಾನ್ ತಾರೀಕ್ ಅವರಿಗೆ ವಿಕೆಟ್ ನೀಡದಂತೆ ಕಾಯ್ದುಕೊಂಡು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಆಟಗಾರರು ರನ್ ವೇಗ ಕುಸಿಯದಂತೆ ನೋಡಿಕೊಂಡರು. ಇವರು ಮಹತ್ವದ ಪಂದ್ಯದಲ್ಲಿ ದೊಡ್ಡ ಪರಿಣಾಮ ಬೀರದೇ ಇದ್ದರೂ ಸಹ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ಮಾಡಿದರು. ತಾರೀಕ್‌ಗೆ ಸೂರ್ಯ ವಿಕೆಟ್ ಒಪ್ಪಿಸಿದರು.
ಪಾಕ್ ಬೌಲರ್‌ಗೆ ಕಾಟ
ಪಾಕಿಸ್ತಾನ ಈ ಪಂದ್ಯದಲ್ಲಿ ಒಟ್ಟು ಏಳು ಜನ ಬೌಲರ್‌ಗಳಿಂದ ಬೌಲ್ ಮಾಡಿಸಿತು. ಈ ವೇಳೆ ಮೂವರು ಬೌಲರ್‌ಗಳು ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡರು. ಅದರಲ್ಲಿ ಶಾಹೀನ್ ಶಾ ಅಫ್ರಿಧಿ 31 ರನ್, ಅಬ್ರಾರ್ ಅಹ್ಮದ್ 38, ಶಾದಾಬ್ ಖಾನ್ 17 ರನ್ ನೀಡಿ ಪಾಕ್ ಯೋಜನೆ ಬುಡಮೇಲು ಮಾಡಿದರು. ಭಾರತೀಯ ಬ್ಯಾಟರ್‌ಗಳು ನುರಿತ ಸ್ಪಿನ್ ಬೌಲರ್‌ನನ್ನು ಗೌರವಿಸುತ್ತಾ, ಉಳಿದ ಬೌಲರ್‌ಗಳನ್ನು ಟಾರ್ಗೆಟ್ ಮಾಡಿತು.
ಬ್ಯಾಟಿಂಗ್ ಪವರ್ ಕಟ್
ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡದ ಬ್ಯಾಟಿಂಗ್ ಪವರ್ ಕಟ್ಟನ್ನು ಟೀಮ್ ಇಂಡಿಯಾ ಕಟ್ ಮಾಡಿ ಅಬ್ಬರಿಸಿತು. ಪಾಕಿಸ್ತಾನ ತಂಡದ ಟಾಪ್ ಆರ್ಡರ್ ಸಾಹಿಬ್‌ಜಾದಾ ಫರ್ಹಾನ್ (0), ಸೈಮ್ ಅಯೂಬ್ (6), ಸಲ್ಮಾನ್ ಅಘಾ (4), ಸ್ಟಾರ್ ಆಟಗಾರ ಬಾಬರ್ ಅಜಮ್ (5) ರನ್ ಕಲೆ ಹಾಕುವಲ್ಲಿ ವಿಫಲರಾದರು. ಪವರ್ ಪ್ಲೇನಲ್ಲಿ ಜಸ್ಪ್ರೀತ್ ಬುಮ್ರಾ 2, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು, ಪಾಕ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು.
ಬುಮ್ರಾ ಮ್ಯಾಜಿಕ್
ಯಾರ್ಕರ್ ಸ್ಪೇಷಲಿಸ್ಟ್ ಜಸ್ಪ್ರೀತ್ ಬುಮ್ರಾ ಅವರು ಪವರ್ ಪ್ಲೇ ಆದ ಮೇಲೆ ಬೌಲಿಂಗ್ ಹಾಕಬಹುದು. ಸ್ಪಿನ್ ಬೌಲರ್‌ಗಳೊಂದಿಗೆ ಟೀಮ್ ಇಂಡಿಯಾ ಇನಿಂಗ್ಸ್ ಆರಂಭಿಸಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಜಸ್ಪ್ರೀತ್ ಬುಮ್ರಾ ಇನಿಂಗ್ಸ್ ಎರಡನೇ ಓವರ್ ಬೌಲ್ ಮಾಡಿದರು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದರು, ನಂತರದ ಎಸೆತದಲ್ಲಿ ಪರ್ಫೆಕ್ಟ್ ಯಾರ್ಕರ್ ಹಾಕಿ ಸೈಮ್ ಅಯೂಬ್ ಅವರಿಗೆ ಖೆಡ್ಡಾ ತೋಡಿದರು. ಐದನೇ ಎಸೆತದಲ್ಲಿ ಬೌಂಡರಿ ಕೊಟ್ಟರೂ, ಆರನೇ ಎಸೆತದಲ್ಲಿ ಸಲ್ಮಾನ್ ಅಲಿ ಆಘಾ ಅವರಿಗೆ ಪೆವೆಲಿಯನ್ ಹಾದಿ ತೋರಿಸಿದರು. ಪರಿಣಾಮ ಭಾರತ ಆರಂಭದಲ್ಲಿ ಮೇಲುಗೈ ಸಾಧಿಸಲು ಕಾರಣವಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications