Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಮೆಲ್ಬೋರ್ನ್ ಟೆಸ್ಟ್ : ಕೊಹ್ಲಿ, ರಹಾನೆ ಶತಕ, ಭಾರತ 462ಕ್ಕೆ 8

ಮೆಲ್ಬರ್ನ್, ಡಿ. 28 : ಬಾರ್ಡರ್‌ -ಗವಾಸ್ಕರ್‌ ಸರಣಿಯಲ್ಲಿ 2-0 ಹಿನ್ನಡೆಯಲ್ಲಿರುವ ಭಾರತವು ಮೂರನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟ ಅಂತ್ಯಕ್ಕೆ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಶತಕಗಳ ನೆರವಿನಿಂದ 462 ರನ್‌ಗಳಿಸಿ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ.

ಅಜಿಂಕ್ಯ ರಹಾನೆ ಮತ್ತು ವಿರಾಟ್ ಕೊಹ್ಲಿ ಸ್ಫೋಟಕ ಆಟಕ್ಕೆ ಬ್ರೇಕ್ ಹಾಕಲು ಸ್ಮಿತ್ ಬಳಗ ಬಳಸಿದ ಎಲ್ಲ ತಂತ್ರಗಳು ಭಾನುವಾರ ವಿಫಲವಾದವು. ಕೊಹ್ಲಿ (169) ಮತ್ತು ರಹಾನೆ (147) ರನ್ ಗಳಿಸಿ ತಂಡ ಉತ್ತಮ ಮೊತ್ತಗಳಿಸಲು ನೆರವಾದರು. 462ರನ್‌ಗಳನ್ನು ಗಳಿಸಿರುವ ಭಾರತ ಪ್ರಥಮ ಇನ್ನಿಂಗ್ಸ್‌ನಲ್ಲಿ 68 ರನ್‌ಗಳ ಹಿನ್ನಡೆ ಅನುಭವಿಸಿದೆ.

Australia

ಎರಡನೇ ದಿನದ ಅಂತ್ಯಕ್ಕೆ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದ ಮುರಳಿ ವಿಜಯ್ ಹಾಗೂ ಚೇತೇಶ್ವರ್ ಪೂಜಾರ ಭಾನುವಾರ ಆಟ ಆರಂಭಿಸಿದರು. ಪೂಜಾರ ಹ್ಯಾರಿಸ್‌ಗೆ ವಿಕೆಟ್ ಒಪ್ಪಿಸಿದರೆ, 68 ರನ್‌ಗಳಿಸಿದ್ದ ಮುರಳಿ ವಿಜಯ್ ವಾಟ್ಸನ್ ಎಸೆತದಲ್ಲಿ ಮಾರ್ಷಲ್‌ಗೆ ಕ್ಯಾಚ್ ನೀಡಿದರು.[ಸ್ಕೋರ್ ಕಾರ್ಡ್ ನೋಡಿ]

ನಂತರ ಒಂದಾದ ಉಪನಾಯಕ ವಿರಾಟ್ ಕೊಹ್ಲಿ ಮತ್ತು ರಹಾನೆ ಸ್ಟೀವನ್ ಸ್ಮಿತ್‌ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಶತಕ ಬಾರಿಸಿದರು. ರಹಾನೆ (147) ಔಟಾದ ನಂತರ ಮೈದಾನಕ್ಕಿಳಿದ ಕನ್ನಡಿಗೆ ರಾಹುಲ್ ಅವರು 3 ರನ್ ಗಳಿಸಿ ಔಟಾದರು.

ನಾಯಕ ಮಹೇಂದ್ರಸಿಂಗ್ ಧೋನಿ ಕೂಡ ಹ್ಯಾರಿಸ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್‌ಗೆ ಕ್ಯಾಚ್ ನೀಡಿದರು. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ 462 ರನ್‌ಗಳಿಸಿ 8 ವಿಕೆಟ್‌ಗಳನ್ನು ಕಳೆದುಕೊಂಡಿದೆ. ಪ್ರಥಮ ಇನ್ನಿಂಗ್ಸ್‌ನಲ್ಲಿ 68 ರನ್‌ಗಳ ಹಿನ್ನಡೆ ಉಂಟಾಗಿದೆ.

ಸ್ಕೋರ್ ವಿವರ
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 530
ಭಾರತ ಮೊದಲ ಇನ್ನಿಂಗ್ಸ್ 8 ವಿಕೆಟ್‌ಗೆ 462 ರನ್
ವಿರಾಟ್ ಕೊಹ್ಲಿ - 169
ರಹಾನೆ - 147
ಮುರಳಿ ವಿಜಯ್ - 68
ಪೂಜಾರ - 25
ಧೋನಿ - 11

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+