For Quick Alerts
ALLOW NOTIFICATIONS  
For Daily Alerts
 

ಕುಲದೀಪ್ ಯಾದವ್ ಸ್ಪಿನ್ ಮೋಡಿಗೆ ಟ್ವಿಟ್ಟರಿಗರ ಗುಣಗಾನ

india england 1st odi kuldeep yadav twitter hails

ಬೆಂಗಳೂರು, ಜುಲೈ 13: ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಅವರ ಸ್ಪಿನ್ ಮೋಡಿಗೆ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಮತ್ತೆ ತತ್ತರಿಸಿದ್ದಾರೆ.

ಮೊದಲ ಟಿ 20ಯಲ್ಲಿ ಕುಲದೀಪ್ ಅವರ ಮಣಿಕಟ್ಟಿನ ಸ್ಪಿನ್ ದಾಳಿಗೆ ಬೆದರಿದ್ದ ಇಂಗ್ಲೆಂಡ್, ಎರಡನೆಯ ಪಂದ್ಯದಲ್ಲಿ ಅವರನ್ನು ಯಶಸ್ವಿಯಾಗಿ ಎದುರಿಸಿತ್ತು.

'ಮೆರ್ಲಿನ್' ಎಂಬ ಸ್ಪಿನ್ ಯಂತ್ರದ ಮೂಲಕ ಕುಲದೀಪ್ ಯಾದವ್ ಬೌಲಿಂಗ್‌ಅನ್ನು ಎದುರಿಸುವ ಕಲೆಯನ್ನು ಅಭ್ಯಾಸ ಮಾಡಿದ್ದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳು ಅದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಭಾವಿಸಲಾಗಿತ್ತು.

ಆದರೆ, ಅದು ಸುಳ್ಳು ಎನ್ನುವುದನ್ನು ಮೊದಲ ಏಕದಿನ ಪಂದ್ಯದಲ್ಲಿ ರುಜುವಾತಾಗಿದೆ. ಕುಲದೀಪ್ ಸ್ಪಿನ್‌ ತಂತ್ರವನ್ನು ಅರಿಯಲಾಗದೆ ಕಂಗಾಲಾದ ಆಂಗ್ಲರು ರನ್ ಗಳಿಸಲಾಗದೆ ತಡಬಡಾಯಿಸಿ ವಿಕೆಟ್ ಒಪ್ಪಿಸಿದ್ದಾರೆ.

ಸ್ಕೋರ್ ಕಾರ್ಡ್

ಕುಲದೀಪ್ ಅವರ ಬೌಲಿಂಗ್ ಕರಾಮತ್ತನ್ನು ಇಡೀ ಕ್ರಿಕೆಟ್ ಜಗತ್ತು ಕೊಂಡಾಡುತ್ತಿದೆ. ಪ್ರಮುಖ ಕ್ರಿಕೆಟಿಗರ ಟ್ವೀಟ್‌ಗಳಲ್ಲಿ ಏನಿದೆ ನೋಡೋಣ..

ವಿಭಿನ್ನ ಸಿಕ್ಸರ್

ಇಂದು ಕುಲದೀಪ್ ಯಾದವ್ ಅವರಿಂದ ವಿಭಿನ್ನವಾದ ಸಿಕ್ಸರ್. ಅದ್ಭುತವಾದ ಬೌಲಿಂಗ್ ಎಂದು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ.

ಕಟ್ಟಪ್ಪ-ಬಾಹುಬಲಿ ಕಥೆ

ಅತ್ಯುತ್ಕೃಷ್ಟ ಗುಣಮಟ್ಟದ ಬೌಲಿಂಗ್. ಅವರ ಟಾಪ್ 5 ಏಕದಿನ ಶ್ರೇಷ್ಠ ಸಾಧನೆಗಳೆಲ್ಲವೂ ವಿದೇಶಿ ನೆಲದಲ್ಲಿಯೇ ಬಂದಿದೆ.

ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎನ್ನುವುದು ಗೊತ್ತಾಯಿತು. ಆದರೆ, ಕುಲದೀಪ್ ಬೌಲಿಂಗ್‌ನಲ್ಲಿ ಹೇಗೆ ಆಡುವುದು ಎಂದು ಇಂಗ್ಲೆಂಡ್‌ಗೆ ಈಗಲೂ ಗೊತ್ತಾಗಿಲ್ಲ ಎಂದು ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಸೂಪರ್ ಸ್ಟಾರ್ ಆಗ್ತಾರೆ

6-25 @imkuldeep18 !!! ಈ ತರುಣ ಎಲ್ಲ ಫಾರ್ಮ್ಯಾಟ್‌ಗಳಲ್ಲಿಯೂ ಸೂಪರ್ ಸ್ಟಾರ್ ಆಗಲಿದ್ದಾರೆ ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.

ಫಾರ್ಮುಲಾ ವಿಫಲವಾದದ್ದಿಲ್ಲ

ಮೊದಲ 5 ಓವರ್‌ಗಳಲ್ಲಿ ಇಂಗ್ಲೆಂಡ್ 26/0, ಮುಂದಿನ 5 ಓವರ್‌ಗಳಲ್ಲಿ 45/0 ಸ್ಕೋರ್ ಮಾಡಿತು. ಆದರೆ ಅದರ ನಂತರದ 5 ಓವರ್‌ಗಳಲ್ಲಿ ಆಗಿದ್ದು 12/3.

ಅದ್ಭುತ್ ಸ್ಪೆಲ್

ಅದ್ಭುತ ಸ್ಪೆಲ್ ಯಂಗ್ ಮ್ಯಾನ್ @imkuldeep18 25ಕ್ಕೆ 6. ಅದ್ಭುತ ಬೌಲಿಂಗ್. ನಿಮ್ಮ ಶಕ್ತಿ ಮತ್ತಷ್ಟು ಹೆಚ್ಚಿದೆ ಎಂದು ಭಾರತದ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರಾದ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಭಾರತ ತಂಡದ ಎಕ್ಸ್-ಫ್ಯಾಕ್ಟರ್

ಕುಲದೀಪ್ ಯಾದವ್ ಭಾರತ ತಂಡದ ಎಕ್ಸ್ ಫ್ಯಾಕ್ಟರ್ ಎಂದು ಕ್ರಿಕೆಟಿಗ ಯೂಸುಫ್ ಪಠಾಣ್ ಹೊಗಳಿದ್ದಾರೆ. ಈ ಬೌಲರ್‌ ವೆರಿ ವೆರಿ ಸ್ಪೆಷಲ್. ಏನಂತೀರಿ? ಎಂದು ವೆರಿ ವೆರಿ ಸ್ಪೆಷಲ್ ಎಂಬ ಬಿರುದು ಪಡೆದಿರುವ ವಿವಿಎಸ್ ಲಕ್ಷ್ಮಣ್ ಅವರನ್ನು ಯೂಸುಫ್ ಪಠಾಣ್ ಕೇಳಿದ್ದಾರೆ.

ಬೆಸ್ಟ್ ಫಿಗರ್ಸ್...

ಕುಲದೀಪ್ ಯಾದವ್ ಅವರ ಇಂದಿನ 6/25ರ ವಿಶೇಷ
ಏಕದಿನದಲ್ಲಿ ಎಡಗೈ ಸ್ಪಿನ್ನರ್‌ನ ಅತ್ಯುತ್ತಮ ಸಾಧನೆ
ಭಾರತದ ಆಚೆ ಭಾರತದ ಸ್ಪಿನ್ನರ್‌ನ ಅತ್ಯುತ್ತಮ ಸಾಧನೆ
ಇಂಗ್ಲೆಂಡ್ ವಿರುದ್ಧ ಸ್ಪಿನ್ನರ್‌ ಒಬ್ಬರ ಅತ್ಯುತ್ತಮ ಸಾಧನೆ
ಇಂಗ್ಲೆಂಡ್‌ನಲ್ಲಿ ಸ್ಪಿನ್ನರ್‌ನ ಅತ್ಯುತ್ತಮ ಸಾಧನೆ ಎಂದು ಕ್ರಿಕೆಟ್ ಅಂಕಿ ಅಂಶ ತಜ್ಞ ರಜನೀಶ್ ಗುಪ್ತಾ ಮಾಹಿತಿ ನೀಡಿದ್ದಾರೆ.

ಗುಣಮಟ್ಟದ ಬ್ಯಾಟ್ಸ್‌ಮನ್‌ಗಳು

ಕುಲದೀಪ್ ಯಾದವ್ ಅವರ ಇದುವರೆಗಿನ ಸಾಧನೆಯ ವಿಶೇಷ ಅಂಶವೆಂದರೆ, ಗುಣಮಟ್ಟದ ಬ್ಯಾಟ್ಸ್‌ಮನ್‌ಗಳು ರಕ್ಷಣಾತ್ಮಕ ಆಟಕ್ಕೆ ಮುಂದಾದಾಗ ವಿಕೆಟ್ ಪಡೆಯುತ್ತಿರುವುದು ಎಂದು ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಹೇಳಿದ್ದಾರೆ.

ಪತ್ರಿಕೆಗಳ ಶೀರ್ಷಿಕೆ

ಇಂಗ್ಲೆಂಡ್ ಸ್ಟನ್ನಡ್-ಕುಲದೀಪ್ ಸ್ಟನ್ನಿಂಗ್. ಇದು ಸುದ್ದಿಪತ್ರಿಕೆಗಳ ಶೀರ್ಷಿಕೆಗೆ ಸೂಕ್ತವಾಗಿದೆ ಎಂದು ಮಾಜಿ ಕ್ರಿಕೆಟಿಗ ಹೇಮಂಗ್ ಬದಾನಿ ಕುಲದೀಪ್ ಯಾದವ್ ಅವರ ಬೌಲಿಂಗ್ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತಿಹಾಸದಲ್ಲಿ ದಾಖಲೆ

ಕುಲದೀಪ್ ಯಾದವ್ ಏಕದಿನ ಕ್ರಿಕೆಟ್‌ನಲ್ಲಿ ಆರು ವಿಕೆಟ್ ಪಡೆದ ಮೊದಲ ಎಡಗೈ ರಿಸ್ಟ್ ಸ್ಪಿನ್ನರ್ ಎಂದೆನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿಯೇ ಎಡಗೈ ಸ್ಪಿನ್ನರ್‌ನ ಶ್ರೇಷ್ಠ ಸಾಧನೆಯಿದು ಎಂದು ಅಂಕಿ ಅಂಶ ತಜ್ಞ ಭರತ್ ಸೀರ್ವಿ ಹೇಳಿದ್ದಾರೆ.

Story first published: Friday, July 13, 2018, 11:15 [IST]
Other articles published on Jul 13, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+