Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕ್ರಿಕೆಟ್ ಟೆಸ್ಟ್ ಟ್ವಿಟ್ಟರ್ ತಮಾಷೆ: ಧೈರ್ಯವಿದ್ದರೆ ಭಾರತಕ್ಕೆ ಬಂದು ಆಡಿ!

ಲಾರ್ಡ್ಸ್, ಆಗಸ್ಟ್ 13: ಇಂಗ್ಲೆಂಡ್‌ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಹೀನಾಯ ಇನ್ನಿಂಗ್ಸ್ ಸೋಲು ಅನುಭವಿಸುವ ಮೂಲಕ ಭಾರತ ಆಂಗ್ಲರ ನಾಡಲ್ಲಿ ತಾನೆಷ್ಟು ದುರ್ಬಲ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.

ಇಂಗ್ಲೆಂಡ್‌ ತಂಡದ ಕೊನೆಯ ಬ್ಯಾಟ್ಸ್‌ಮನ್‌ಗಳು ತೋರಿದ ಪ್ರದರ್ಶನಕ್ಕೆ ಕೂಡ ಸರಿಸಮನಾದ ಆಟ ಪ್ರದರ್ಶಿಸಲು ಭಾರತದ ಮೇಲಿನ ಕ್ರಮಾಂಕದ ಆಟಗಾರರು ಮತ್ತೆ ವಿಫಲರಾದರು.

ಭಾರತದ ಕಳಪೆ ಪ್ರದರ್ಶನವನ್ನು ಟೀಕಿಸಿ ಮತ್ತು ಇಂಗ್ಲೆಂಡ್‌ನ ಸಾಂಘಿಕ ಆಟವನ್ನು ಶ್ಲಾಘಿಸಿ ಟ್ವಿಟ್ಟರ್‌ನಲ್ಲಿ ಕ್ರೀಡಾಪ್ರೇಮಿಗಳ ಟ್ವೀಟ್ ಪ್ರವಾಹ ಹರಿದಿವೆ. ಕೆಲವು ಟ್ವೀಟ್‌ಗಳು ಭಾರತದ ಸೋಲಿನ ಬೇಸರದಲ್ಲಿಯೂ ನಗು ಮೂಡಿಸುತ್ತವೆ. ಇಂತಹ ಟ್ವಿಟ್ಟರ್ ಪ್ರತಿಕ್ರಿಯೆಗಳಲ್ಲಿ ಆಯ್ದ ಕೆಲವು ಟ್ವೀಟ್‌ಗಳು ಇಲ್ಲಿವೆ.

ಲಾರ್ಡ್ಸ್ ಟೆಸ್ಟ್ ಕೆಲಸದ ಅವಧಿ

ಲಾರ್ಡ್ಸ್ ಟೆಸ್ಟ್ ಮೊದಲ ದಿನ ವರ್ಕ್ ಫ್ರಂ ಹೋಮ್. ಎರಡನೆಯ ದಿನ ಹಾಫ್ ಡೇ ಕೆಲಸ. ಮೂರನೆಯ ದಿನ ಇಡೀ ದಿನ ಕೆಲಸ. ನಾಲ್ಕನೆಯ ದಿನ ಮತ್ತೆ ಹಾಫ್ ಡೇ. ಐದನೇ ದಿನ ರಜೆ. ಅದೂ ಕೆಲಸದ ಸ್ಥಳದಲ್ಲಿಯೇ. ಕೆಲಸ ಮತ್ತು ಜೀವನದ ಸಮತೋಲನ ಸಾಧಿಸುವ ವಿಚಾರವನ್ನು ಭಾರತ ತಂಡ ನಂಬಿಕೊಂಡಿದೆ. ನಿಜಕ್ಕೂ ಇದು ಸ್ಫೂರ್ತಿದಾಯಕ ಎಂದು ತಂಡದ ಕಳಪೆ ಆಟವನ್ನು ಸಿದ್ಧಾರ್ಥ್ ಪಾಂಡೆ ತಮಾಷೆ ಮಾಡಿದ್ದಾರೆ.

ಲಾರ್ಡ್ಸ್ ಟೆಸ್ಟ್ : ಆಂಡರ್ಸನ್ ನಿಂದ ದಾಖಲೆಗಳ ಧೂಳಿಪಟ!

ಹನ್ನೊಂದು ಮಂದಿಯನ್ನು ರಕ್ಷಿಸಿ

ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ನನ್ನ ಕಳಕಳಿಯ ಮನವಿ. ಇಂಗ್ಲೆಂಡ್‌ನಲ್ಲಿ ಸಿಲುಕಿರುವ 11 ಮಂದಿಯನ್ನು ಉಳಿಸಿ. ಅವರಿಗೆ ಉಳಿಯಲು ಯಾವ ಸುಳಿವೂ ಸಿಗುತ್ತಿಲ್ಲ ಎಂದು ಪ್ರಶಾಂತ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಯಾರನ್ನು ದೂರುವುದು?

ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಇದು ಕಷ್ಟದ ನಿರ್ಧಾರ ಎಂದು ಜಿತೇಂದರ್ ಗೋಡರಾ ಎಂಬುವವರು ಟ್ವೀಟ್ ಮಾಡಿದ್ದಾರೆ. ಹಿಂದೆ ಎಲ್ಲ ಸೋಲುಗಳಿಗೂ ಎಂ.ಎಸ್. ಧೋನಿ ಮೇಲೆ ಅಪವಾದ ಹೊರಿಸಲಾಗುತ್ತಿತ್ತು. ಆದರೆ, ಈ ಸೋಲಿಗೆ ಯಾರನ್ನು ದೂರುವುದು ಎನ್ನುವುದು ಅಭಿಮಾನಿಗಳಿಗೆ ಕಷ್ಟವಾಗುತ್ತಿದೆ. ಏಕೆಂದರೆ ಈ ಬಾರಿ ಅಲ್ಲಿ ಧೋನಿ ಇಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಧೈರ್ಯ ಇದ್ದರೆ ಇಲ್ಲಿ ಬಂದು ಆಡಿ

ಭಾರತ ತವರಿನ ನೆಲದಲ್ಲಿ ಹುಲಿ ಎನ್ನುವುದನ್ನು ಯಾವಾಗಲೂ ಸಾಬೀತುಪಡಿಸುತ್ತಿರುತ್ತದೆ. ಟೆಸ್ಟ್ ಶ್ರೇಯಾಂಕದಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಭಾರತ ತಂಡದ ನಿಜವಾದ ಸಾಮರ್ಥ್ಯ ಏನು ಎನ್ನುವುದು ಇಂಗ್ಲೆಂಡ್ ನೆಲದಲ್ಲಿ ಸಾಬೀತಾಗುತ್ತಿದೆ.

ಇದನ್ನು ಕಾಮಿಡಿಯನ್ ಪ್ರವೀಣ್ ವ್ಯಂಗ್ಯವಾಗಿ ಬಳಸಿಕೊಂಡಿದ್ದಾರೆ. ಇಂಗ್ಲೆಂಡ್ ತಂಡವೇ, ನಿಮಗೆ ಧೈರ್ಯ ಇದ್ದರೆ ಉಳಿದ ಮೂರು ಪಂದ್ಯಗಳನ್ನು ಭಾರತಕ್ಕೆ ಬಂದು ಆಡಿ ಎಂದಿದ್ದಾರೆ.

ಮುಂದಿನ ಸರಣಿ ಶ್ರೀಲಂಕಾ ಜತೆ

ಇಂಗ್ಲೆಂಡ್ ವಿರುದ್ಧ ಸೋತಿದ್ದಕ್ಕೆ ಬೇಸರಪಟ್ಟುಕೊಳ್ಳಬೇಡಿ. ಮುಂದಿನ ಸರಣಿಯಲ್ಲಿ ಭಾರತವು ಶ್ರೀಲಂಕಾ ವಿರುದ್ಧ ವಿರುದ್ಧ ಆಡಲಿದೆ ಎಂದು ಅಭಿಜಿತ್ ಟ್ವಿಟ್ಟರ್‌ನಲ್ಲಿ ಲೇವಡಿ ಮಾಡಿದ್ದಾರೆ. ಭಾರತವು ಪದೇ ಪದೇ ಶ್ರೀಲಂಕಾ ವಿರುದ್ಧ ಸರಣಿಗಳನ್ನು ಆಡಿ ಗೆದ್ದುಕೊಂಡಿತ್ತು. ಈಗ ಇಂಗ್ಲೆಂಡ್ ವಿರುದ್ಧದ ಸೋಲನ್ನು ಮರೆಮಾಚಲು ಮತ್ತೆ ಶ್ರೀಲಂಕಾ ವಿರುದ್ಧ ಆಡಲಿದೆ ಎಂದು ಅವರು ತೀಕ್ಷ್ಣವಾಗಿ ಹೇಳಿದ್ದಾರೆ.

ಇದು ಮ್ಯಾಚ್ ಫಿಕ್ಸಿಂಗ್!

ಭಾರತ-ಇಂಗ್ಲೆಂಡ್ ಪಂದ್ಯ ಫಿಕ್ಸ್ ಆಗಿತ್ತೇ? ಹೌದು. ಭಾರತ ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಮೋಡ ಆವರಿಸುವಂತೆ ಇಸಿಬಿ ಮೋಡ ಬಿತ್ತನೆ ಮಾಡಿತ್ತು. ಪುರಾವೆಗೆ ಬೇಕಾದರೆ ನೋಡಿ ಎಂದು ಶ್ರೀಕಾಂತ್ ವಾಸುದೇವರಾವ್ ಎಂಬುವವರು ಭಾರತದ ಬ್ಯಾಟಿಂಗ್ ಸಂದರ್ಭದ ವಾತಾವರಣ ಮತ್ತು ಇಂಗ್ಲೆಂಡ್ ಬ್ಯಾಟಿಂಗ್ ಮಾಡುವ ವೇಳೆಯ ವಾತಾವರಣದ ಚಿತ್ರವನ್ನು ಹಾಕಿ ತಮಾಷೆ ಮಾಡಿದ್ದಾರೆ.

ವಿ ಮಿಸ್ ಯೂ ಕುಂಬ್ಳೆ

ಭಾರತ ತಂಡದ ಕಳಪೆ ಪ್ರದರ್ಶನದಂತೆಯೇ ಕೋಚ್ ರವಿಶಾಸ್ತ್ರಿ ವಿರುದ್ಧವೂ ಟೀಕೆ ವ್ಯಕ್ತವಾಗಿದೆ. ತಂಡದ ಸೋಲಿಗೆ ರವಿಶಾಸ್ತ್ರಿ ಅವರ ನೀತಿಗಳೂ ಕಾರಣವಾಗಿವೆ. ಹೀಗಾಗು ಅವರ ತಲೆದಂಡ ಆಗಬೇಕು ಎನ್ನುವುದು ಕ್ರೀಡಾಪ್ರೇಮಿಗಳ ಒತ್ತಾಯ.

ಕುಂಬ್ಳೆ ಕಠಿಣ ನೀತಿ ಅನುಸರಿಸುತ್ತಿದ್ದರು. ಹೀಗಾಗಿ ಕೊಹ್ಲಿ ಅವರನ್ನು ಕೋಚ್ ಹುದ್ದೆಯಿಂದ ಕೆಳಕ್ಕಿಳಿಯುವಂತೆ ಮಾಡಿದರು. ರವಿಶಾಸ್ತ್ರಿಗೆ ತಂಡದ ಮೇಲೆ ಯಾವುದೇ ಹಿಡಿತವಿಲ್ಲ ಎಂದು ಆರೋಪಿಸಿದ್ದಾರೆ. ಎರಡು ಟೆಸ್ಟ್‌ನಲ್ಲಿ ವಿಫಲವಾಗಿದ್ದಕ್ಕೆ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟರು. ಈಗ ಎರಡು ಸೋಲಿಗೆ ರವಿಶಾಸ್ತ್ರಿಯನ್ನು ಕೈಬಿಡುವುದನ್ನು ಕಾಯುತ್ತಿದ್ದೇವೆ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.

ತಂಡದಿಂದ ಯಾರನ್ನಾದರೂ ತೆಗೆದುಹಾಕಬೇಕು ಎಂದಿದ್ದರೆ ಅದು ಕೋಚ್ ರವಿಶಾಸ್ತ್ರಿ ಆಗಿರಲಿ. ವಿ ಮಿಸ್ ಯೂ ಅನಿಲ್ ಕುಂಬ್ಳೆ ಎಂದು ಸರ್ ರವೀಂದ್ರ ಜಡೇಜಾ ಎಂಬ ಹೆಸರಿನ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

Story first published: Monday, August 13, 2018, 11:06 [IST]
Other articles published on Aug 13, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+