For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್ ಟೆಸ್ಟ್ : ಆಂಡರ್ಸನ್ ನಿಂದ ದಾಖಲೆಗಳ ಧೂಳಿಪಟ!

By Mahesh
Indvs Eng test : Anderson test records surpasses Anil Kumble

ಲಂಡನ್, ಆಗಸ್ಟ್ 12: ಇಂಗ್ಲೆಂಡ್ ತಂಡದ ಅಗ್ರಗಣ್ಯ ವೇಗಿ ಜೇಮ್ಸ್ ಆಂಡರ್ಸನ್ ಅವರು ಲಾರ್ಡ್ಸ್ ಟೆಸ್ಟ್ ಪಂದ್ಯದ ಮೊದಲ ದಿನವೇ ಹಲವು ದಾಖಲೆಗಳನ್ನು ಮುರಿದಿದ್ದಾರೆ.

ಕೇವಲ 20 ರನ್ ನೀಡಿ 5 ವಿಕೆಟ್ ಪಡೆದು ಭಾರತ ತಂಡದ ಮೇಲೆ ಸವಾರಿ ನಡೆಸಿದ ಆಂಡರ್ಸನ್ ಮುರಿದ ದಾಖಲೆಗಳು ಹಾಗೂ ಯಾವೆಲ್ಲ ದಾಖಲೆಗಳ ಸಮೀಪಕ್ಕೆ ಬಂದಿದ್ದಾರೆ ಎಂಬುದರ ಬಗ್ಗೆ ಒಂದು ನೋಟ ಇಲ್ಲಿದೆ.

ಸ್ಕೋರ್ ಕಾರ್ಡ್

ಅತಿಥೇಯ ಇಂಗ್ಲೆಂಡ್​ ಮತ್ತು ಪ್ರವಾಸಿ ಭಾರತದ ನಡುವಿನ 2ನೇ ಟೆಸ್ಟ್ ಪಂದ್ಯದಲ್ಲಿ 5ವಿಕೆಟ್ ಪಡೆಯುವ ಮೂಲಕ ಕನ್ನಡಿಗ ಅನಿಲ್​ ಕುಂಬ್ಳೆ ಅವರ ದಾಖಲೆಯೊಂದು ಆಂಡರ್ಸನ್ ಮುರಿದಿದ್ದಾರೆ.

ಮುರಳಿ ವಿಜಯ್ (0), ಕೆಎಲ್ ರಾಹುಲ್ (8), ಅಜಿಂಕ್ಯ ರಹಾನೆ (18), ಕುಲದೀಪ್ ಯಾದವ್(0) ಹಾಗೂ ಇಶಾಂತ್ ಶರ್ಮ(0) ವಿಕೆಟ್ ಗಳನ್ನು ಆಂಡರ್ಸನ್ ಉದುರಿಸಿದರು. ಈ ಮೂಲಕ ಭಾರತ 35.2 ಓವರ್ ಗಳಲ್ಲಿ 107 ಸ್ಕೋರ್ ಗೆ ಅಲೌಟ್ ಆಯಿತು. ಕ್ರಿಸ್ ವೋಕ್ಸ್ 2 ಹಾಗೂ ಸ್ಟುವರ್ಟ್ ಬ್ರಾಡ್ ಹಾಗೂ ಕುರನ್ ತಲಾ 1 ವಿಕೆಟ್ ಗಳಿಸಿ ಉತ್ತಮ ಸಾಥ್ ನೀಡಿದರು. ಆಂಡರ್ಸನ್ ನಿಂದ ದಾಖಲೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದಿದೆ...

ತವರು ನೆಲದಲ್ಲಿ ಹೆಚ್ಚು ವಿಕೆಟ್ ಗಳಿಕೆ

ತವರು ನೆಲದಲ್ಲಿ ಹೆಚ್ಚು ವಿಕೆಟ್ ಗಳಿಕೆ

ತವರು ನೆಲದಲ್ಲಿ ಹೆಚ್ಚು ವಿಕೆಟ್ ಗಳಿಸಿದ ದಾಖಲೆ ಭಾರತದ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಹೆಸರಿನಲ್ಲಿತ್ತು. ಸ್ಪಿನ್ ದಿಗ್ಗಜ ಕುಂಬ್ಳೆ ಅವರು 350 ವಿಕೆಟ್ ಗಳನ್ನು ಭಾರತದ ನೆಲದಲ್ಲಿ ಗಳಿಸಿದ್ದಾರೆ. ಈಗ ಜೇಮ್ಸ್ ಆಂಡರ್ಸನ್ ಅವರು ಇಂಗ್ಲೆಂಡಿನಲ್ಲಿ 353 ವಿಕೆಟ್ ಗಳಿಸಿ ಈ ದಾಖಲೆ ಮುರಿದಿದ್ದಾರೆ.

ಶ್ರೀಲಂಕಾದ ಸ್ಪಿನ್ನರ್​ ಮುತ್ತಯ್ಯ ಮುರಳಿಧರನ್​ ಅವರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಶ್ರೀಲಂಕಾದ ನೆಲದಲ್ಲಿ ಒಟ್ಟಾರೆ 493 ವಿಕೆಟ್​ಗಳನ್ನು ಉರುಳಿಸಿದ್ದಾರೆ.

ಅತಿ ಹೆಚ್ಚು 5 ವಿಕೆಟ್ ಗಳಿಕೆ

ಅತಿ ಹೆಚ್ಚು 5 ವಿಕೆಟ್ ಗಳಿಕೆ

ಇದು ಜೇಮ್ಸ್ ಆಂಡರ್ಸನ್ ಅವರ 26ನೇ ಐದು ವಿಕೆಟ್ ಗಳಿಕೆಯಾಗಿದ್ದು, ದಕ್ಷಿಣ ಆಫ್ರಿಕಾದ ಡೇಲ್ ಸ್ಟೇನ್ ಸಮಕ್ಕೆ ನಿಂತಿದ್ದಾರೆ. ಹಾಲಿ ಟೆಸ್ಟ್ ಕ್ರಿಕೆಟ್ ಆಟಗಾರರ ಪೈಕಿ ಇವರಿಬ್ಬರ ನಂತರದ ಸ್ಥಾನದಲ್ಲಿ ಇಂಗ್ಲೆಂಡಿನ ಸ್ಟುವರ್ಟ್ ಬ್ರಾಡ್ (16) ಇದ್ದಾರೆ.

ಮೈದಾನವೊಂದರಲ್ಲಿ ಅತ್ಯಧಿಕ ವಿಕೆಟ್ ಕಿತ್ತವರು

ಮೈದಾನವೊಂದರಲ್ಲಿ ಅತ್ಯಧಿಕ ವಿಕೆಟ್ ಕಿತ್ತವರು

166- ಮುತ್ತಯ್ಯ ಮುರಳೀಧರನ್, ಕೊಲಂಬೋ
117- ಮುತ್ತಯ್ಯ ಮುರಳೀಧರನ್, ಕ್ಯಾಂಡಿ
111- ಮುತ್ತಯ್ಯ ಮುರಳೀಧರನ್, ಗಾಲೆ
101*- ಜೇಮ್ಸ್ ಆಂಡರ್ಸನ್, ಲಾರ್ಡ್ಸ್(ಪಂದ್ಯ ಜಾರಿಯಲ್ಲಿದೆ, ಭಾನುವಾರ ಸಂಜೆ 6.30ರ ಸಮಯಕ್ಕೆ)
99- ರಂಗನಾ ಹೆರಾತ್, ಗಾಲೆ

ಭಾರತದ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ವೇಗಿಗಳು

ಭಾರತದ ವಿರುದ್ಧ ಅತ್ಯಧಿಕ ವಿಕೆಟ್ ಕಿತ್ತ ವೇಗಿಗಳು

101- ಜೇಮ್ಸ್ ಆಂಡರ್ಸನ್(ಪಂದ್ಯ ಜಾರಿಯಲ್ಲಿದೆ, ಇದು ಭಾನುವಾರ 6.30ರ ಸಮಯದ ಅಪ್ಡೇಟ್)
94- ಇಮ್ರಾನ್ ಖಾನ್
76- ಮಾಲ್ಕಂ ಮಾರ್ಷಲ್
67- ಆಂಡ್ರೂ ರಾಬರ್ಟ್ಸ್
65- ವೆಸ್ ಹಾಲ್/ರಿಚರ್ಡ್ ಹ್ಯಾಡ್ಲಿ/ಕರ್ಟ್ನಿ ವಾಲ್ಶ್/ಡೇಲ್ ಸ್ಟೇಯ್ನ್

Story first published: Sunday, August 12, 2018, 18:38 [IST]
Other articles published on Aug 12, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+