Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

2036 ಒಲಿಂಪಿಕ್ಸ್‌ ಆತಿಥ್ಯಕ್ಕೆ ಭಾರತ ಅರ್ಹ: ಅಮಿತ್ ಶಾ

ಭಾರತ ಕ್ರೀಡಾ ಕ್ಷೇತ್ರದಲ್ಲಿ ದೊಡ್ಡ ಹೆಜ್ಜೆಗಳನ್ನು ಇಡುತ್ತಿದೆ. ಇತ್ತೀಚೆಗೆ ಬಂದಿದ್ದ ಒಂದು ಸುದ್ದಿ ಭಾರತೀಯ ಕ್ರೀಡಾಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಭಾರತ 2030 ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆತಿಥ್ಯ ನೀಡಲಿದೆ. ಈ ಆತಿಥ್ಯಕ್ಕಾಗಿ ಗುಜರಾತ್‌ನ ಅಹಮದಾಬಾದ್‌ ನಗರವನ್ನು ಆಯ್ಕೆ ಮಾಡಲಾಗಿದೆ. ಈಗ ಮತ್ತೊಂದು ದೊಡ್ಡ ಕ್ರೀಡಾಕೂಟಕ್ಕೆ ಸಿದ್ಧರಾಗಿ ಎಂದು ಕೇಂದ್ರ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ನಡೆದ ಸಂಸದ್ ಖೇಲ್ ಮಹೋತ್ಸವದಲ್ಲಿ ಗೃಹ ಸಚಿವ ಅಮಿತ್ ಶಾ ಭಾರತವು 2036 ರ ಒಲಿಂಪಿಕ್ಸ್ ಅನ್ನು ಆಯೋಜಿಸಲು ಅರ್ಹವಾಗಿದೆ ಎಂದು ಹೇಳಿದ್ದಾರೆ. ಭಾರತ ವಾಸಿಗಳು ಮತ್ತೊಂದು ದೊಡ್ಡ ಕಾರ್ಯಕ್ರಮಕ್ಕೆ ಸಿದ್ಧರಾಗುವಂತೆ ತಿಳಿಸಿದ್ದಾರೆ.

India eyes 2036 Olympics bid Amit Shah says Ahmedabad ready for global sports events

ನೀವೆಲ್ಲರೂ ಇತ್ತೀಚೆಗೆ ಕಾಮನ್‌ವೆಲ್ತ್ ಕ್ರೀಡಾಕೂಟದ ಆತಿಥ್ಯವನ್ನು ಪಡೆದಿದೆ. ಈ ದೊಡ್ಡ ಕ್ರೀಡೆಗೆ ಅಹಮದಾಬಾದ್‌ನ ವಾಸಿಗಳು ಸಿದ್ಧರಾಗಿದ್ದಾರೆ. ಇದೇ ನಗರಕ್ಕೆ ಮತ್ತೊಂದು ದೊಡ್ಡ ಕ್ರೀಡಾ ಜಾತ್ರೆ ನಗರಕ್ಕೆ ಬರಲಿದೆ ಎಂದು ಅಮಿತ್‌ ಶಾ ಹೇಳಿದರು. ಸಂಸದ್ ಖೇಲ್ ಮಹೋತ್ಸವ ನಾರಣಪುರದಲ್ಲಿ ನಡೆಯಿತು. ಅಮಿತ್ ಶಾ ನೂತನವಾಗಿ ನಿರ್ಮಿಸಲಾಗಿದ್ದ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣಕ್ಕೆ ಆಗಮಿಸಿದರು. ಗೃಹ ಸಚಿವರು ಮೂರು ದಿನಗಳ ಭೇಟಿಗಾಗಿ ತವರಿಗೆ ಆಗಮಿಸಿದ್ದಾರೆ.

ಸಚಿವರು ಹೇಳಿದ್ದೇನು?

ಅಹಮದಾಬಾದ್‌ ನಗರವು 2036ಕ್ಕೂ ಮೊದಲು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಆತಿಥ್ಯ ನೀಡಲಿದೆ. ಒಲಿಂಪಿಕ್ಸ್‌ನಂತಹ ದೊಡ್ಡ ಕಾರ್ಯಕ್ರಮಕ್ಕೆ ವೇದಿಕೆ ನಿರ್ಮಿಸುವುದು, ಮೂಲ ಸೌಕರ್ಯ ಸೃಷ್ಟಿಸುವುದು ನಮ್ಮ ಗುರಿ ಎಂದು ತಮ್ಮ ಸರ್ಕಾರದ ಉದ್ದೇಶವನ್ನು ಅಮಿತ್ ಶಾ ಸ್ಪಷ್ಟ ಪಡಿಸಿದ್ದಾರೆ. ಇನ್ನು ಇದೇ ವೇಳೆ 800 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ವೀರ್ ಸಾವರ್ಕರ್ ಸಂಕೀರ್ಣದ ಬಗ್ಗೆ ಸಚಿವರು ತಿಳಿಸಿದರು. ಇನ್ನು ಮೊಟೆರಾದಲ್ಲಿರುವ ಸರ್ದಾರ್ ವಲ್ಲಭಭಾಯಿ ಪಟೇಲ್ ಸ್ಪೋರ್ಟ್ಸ್ ಎನ್‌ಕ್ಲೇವ್ ಅನ್ನು ಸಹ ದೊಡ್ಡ ಕ್ರೀಡಾಕೂಟವನ್ನು ಆಯೋಜಿಸಬಹುದು ಎಂದು ತಿಳಿಸಿದರು. ಭಾರತವು ಒಲಿಂಪಿಕ್ಸ್‌ ಆಯೋಜಿಸಿದಾಗ ಪದಕಗಳ ಅಂಕ ಪಟ್ಟಿಯಲ್ಲಿ ಟಾಪ್‌ 5ರಲ್ಲಿ ಸ್ಥಾನಪಡೆಯಲಿದೆ ಎಂಬ ವಿಶ್ವಾಸವನ್ನು ಅಮಿತ್ ಶಾ ಹೇಳಿದರು.

ಭಾರತ 2036ರ ಓಲಿಂಪಿಕ್ಸ್‌ನ ಅತಿಥ್ಯದ ಕನಸು ಕಾಣುತ್ತಿದೆ. ಇದಕ್ಕಾಗಿ ಬೇಕಾಗಿರುವ ತಯಾರಿಗಳನ್ನು ಭಾರತ ಮಾಡಿಕೊಳ್ಳುತ್ತಿದೆ. ಭಾರತಕ್ಕೆ ಒಲಿಂಪಿಕ್ಸ್‌ ಆತಿಥ್ಯ ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ. ಇದರಲ್ಲಿ ದೇಶ ಸಫಲವಾಗುತ್ತದಾ ಎಂಬುದೇ ದೊಡ್ಡ ಪ್ರಶ್ನೆಯಾಗಿದೆ.

Story first published: Saturday, December 6, 2025, 10:24 [IST]
Other articles published on Dec 6, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+