Under-19s Asia Cup: ಪಾಕ್ ವಿರುದ್ಧ ಭಾರತಕ್ಕೆ 43 ರನ್ ಸೋಲು
ಅಂಡರ್ 19 ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯಲ್ಲಿ ಭಾರತ ತಂಡ ನಿರಾಸೆ ಅನುಭವಿಸಿದೆ. ಶನಿವಾರ ನಡೆದ ಪಂದ್ಯದಲ್ಲಿ ಭಾರತ 43 ರನ್‌ಗಳಿಂದ ಪಾಕಿಸ್ತಾನ ವಿರುದ್ಧ ಸೋಲು ಕಂಡಿದೆ. ಈ ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಪಾಕಿಸ್ತಾನ ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ಜಯದಲ್ಲಿ ಮಿಂಚಿದರು. ಭಾರತ ಮುಂದಿನ ಪಂದ್ಯದಲ್ಲಿ ಜಪಾನ್ ವಿರುದ್ಧ ಡಿಸೆಂಬರ್ ೨ ರಂದು ಕಾದಾಟ ನಡೆಸಲಿದೆ.
ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 281 ರನ್ ಸೇರಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 47.1 ಓಔರ್‌ಗಳಲ್ಲಿ 238 ರನ್‌ಗಳಿಗೆ ಆಲೌಟ್ ಆಯಿತು.

ಪಾಕಿಸ್ತಾನ ಪರ ಇನಿಂಗ್ಸ್ ಆರಂಭಿಸಿದ ಉಸ್ಮಾನ್ ಖಾನ್ ಹಾಗೂ ಶಹಜೈಬ್ ಖಾನ್ ಮೊದಲ ವಿಕೆಟ್‌ಗೆ ಅಮೋಘ ಜೊತೆಯಾಟದ ಕಾಣಿಕೆ ನೀಡಿದರು. ಈ ವೇಳೆ ಈ ಜೋಡಿ 30.4 ಓವರ್‌ಗಳಲ್ಲಿ 160 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ಉಸ್ಮಾನ್ ಖಾನ್ 6 ಬೌಂಡರಿ ಸಹಾಯದಿಂದ 60 ರನ್ ಸಿಡಿಸಿ ಔಟ್ ಆದರು. ಮಧ್ಯಮ ಕ್ರಮಾಂಕದಲ್ಲಿ ಹರೂನ್ ಅರ್ಷದ್ (3) ರನ್ ಕಲೆ ಹಾಕುವಲ್ಲಿ ವಿಫಲರಾದರು. ಇನ್ನು ಮಧ್ಯಮ ಕ್ರಮಾಂಕದ ಮುಹಮ್ಮದ್ ರಿಯಾಜುಲ್ಲಾ 2 ಬೌಂಡರಿ, 1 ಸಿಕ್ಸರ್ ಸಹಾಯದಿಂದ 27 ರನ್ ಸಿಡಿಸಿ ಔಟ್ ಆದರು.
ಶಹಜೈಬ್ ಖಾನ್ ಶತಕ
ಪಾಕಿಸ್ತಾನದ ಪರ ಆರಂಭಿಕ ಆಟಗಾರ ಶಹಜೈಬ್ ಖಾನ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು 147 ಎಸೆತಗಳಲ್ಲಿ 5 ಬೌಂಡರಿ, 10 ಸಿಕ್ಸರ್ ಸಹಾಯದಿಂದ 159 ರನ್ ಬಾರಿಸಿ ಅಬ್ಬರಿಸಿದರು.
ಭಾರತದ ಪರ ಸಮರ್ಥ್ ನಾಗರಾಜ್ 3, ಆಯುಷ್ ಮಾತ್ರೆ 2 ವಿಕೆಟ್ ಕಬಳಿಸಿದರು.

ಭಾರತದ ಕಳಪೆ ಆರಂಭ
ಗುರಿಯನ್ನು ಬೆನ್ನಟ್ಟಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಆಯುಷ್ ಮಾತ್ರೆ ಹಾಗೂ ವೈಭವ್ ಸೂರ್ಯವಂಶಿ ದೊಡ್ಡ ಜೊತೆಯಾಟದ ಕಾಣಿಕೆ ನೀಡಲಿಲ್ಲ. ಈ ಇಬ್ಬರೂ ಆಟಗಾರರು ತಂಡದ ಮೊತ್ತ 28 ಆಗಿದ್ದಾಗ ಪೆವಿಲಿಯನ್ ಸೇರಿದರು. ಭಾರತದ ನಾಲ್ಕು ವಿಕೆಟ್‌ಗಳು ಪಟ ಪಟನೇ ಬಿದ್ದವು. ಆದರೆ ಐದನೇ ವಿಕೆಟ್‌ಗೆ ಕಿರಣ್ ಚೋರ್ಮಲೆ, ನಿಖಿಲ್ ಕುಮಾರ್ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು.
ಈ ಜೊಡಿ 59 ಎಸೆತಗಳಲ್ಲಿ 53 ರನ್ ಸಿಡಿಸಿ ತಂಡಕ್ಕೆ ಆಧಾರವಾದರು. ಮಧ್ಯಮ ಕ್ರಮಾಂಕದ ನಿಖಿಲ್ ಕುಮಾರ್ 67 ರನ್ ಸಿಡಿಸಿ ತಂಡಕ್ಕೆ ನೆರವಾದರು. ಕಿರಣ್ ಚೋರ್ಮಲೆ, ಹರ್ವಂಶ ಪಂಗಾಲಿಯಾ, ಹಾರ್ದಿಕ್ ರಾಜ್, ಮೊಹಮ್ಮದ್ ಏನನ್ ಮಾತ್ರ ಡಬಲ್ ಡಿಜಿಟ್ ಮುಟ್ಟಿದರು. ಆದರೆ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ.
ಪಾಕ್ ಪರ ಅಲಿ ರಾಜ್ 3, ಅಬ್ದುಲ್ ಶುಭಾನ್, ಫಹಾಮ್ ಉಲ್ ಹಕ್ ತಲಾ ಎರಡು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications