For Quick Alerts
ALLOW NOTIFICATIONS  
For Daily Alerts
 

5ನೇ ಟೆಸ್ಟ್‌ ಬದಲು ಹೆಚ್ಚುವರಿ ಟಿ20 ಆಡುವಂತೆ ಭಾರತದಿಂದ ಇಂಗ್ಲೆಂಡ್‌ಗೆ ಆಫರ್?!

India have offered to the ECB to play two extra T20 is next year in England

ನವದೆಹಲಿ: ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ರದ್ದಾಗಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್‌ ಪಂದ್ಯಕ್ಕೆ ಬದಲಾಗಿ ಮುಂದಿನ ವರ್ಷ ಎರಡು ಹೆಚ್ಚುವರಿ ಟಿ20ಐ ಪಂದ್ಯಗಳನ್ನು ಆಡುವಂತೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಇಂಗ್ಲೆಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ)ಗೆ ಆಫರ್ ನೀಡಿರುವುದಾಗಿ ಹೇಳಲಾಗುತ್ತಿದೆ.

ಡೈಲಿ ಮೇಲ್ ವರದಿಯ ಪ್ರಕಾರ, ಮ್ಯಾನ್ಚೆಸ್ಟರ್‌ನಲ್ಲಿ ಕೋವಿಡ್-19 ಭೀತಿಯಿಂದಾಗಿ ರದ್ದಾಗಿರುವ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯಕ್ಕೆ ಬದಲಾಗಿ ಮುಂದಿನ ವರ್ಷ ಜುಲೈ ವೇಳೆ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನಾಡುವಂತೆ ಬಿಸಿಸಿಐ, ಇಸಿಬಿಗೆ ತಿಳಿಸಿದೆ. ಆದರೆ ಅಂತಿಮ ನಿರ್ಧಾರ ಏನು ಅನ್ನೋದು ಇನ್ನೂ ಸ್ಪಷ್ಟಗೊಂಡಿಲ್ಲ.

ಅನಿರೀಕ್ಷಿತವಾಗಿ ರದ್ದಾಗಿದ್ದ ಐದನೇ ಟೆಸ್ಟ್‌ ಪಂದ್ಯ

ಅನಿರೀಕ್ಷಿತವಾಗಿ ರದ್ದಾಗಿದ್ದ ಐದನೇ ಟೆಸ್ಟ್‌ ಪಂದ್ಯ

ಇಂಗ್ಲೆಂಡ್‌ಗೆ ಪ್ರವಾಸ ಹೋಗಿದ್ದ ಭಾರತ, ಅಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿ ಆಡುವುದರಲ್ಲಿತ್ತು. ನಾಲ್ಕು ಟೆಸ್ಟ್‌ ಪಂದ್ಯಗಳು ಈಗಾಗಲೇ ನಡೆದಿದ್ದವು. ಸರಣಿ 2-1ರಿಂದ ಭಾರತದ ವಶದಲ್ಲಿತ್ತು. ಆದರೆ ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಐದನೇ ಟೆಸ್ಟ್‌ ಪಂದ್ಯ ಅನಿರೀಕ್ಷಿತವಾಗಿ ರದ್ದಾಗಿತ್ತು. ಕಾರಣ ಟೀಮ್ ಇಂಡಿಯಾ ಕ್ಯಾಂಪ್‌ನಲ್ಲಿ ಕೋವಿಡ್-19 ಪ್ರಕರಣಗಳು ಕಾಣಿಸಿಕೊಂಡಿದ್ದವು. ಭಾರತದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್, ಇಬ್ಬರು ಫಿಸಿಯೋಗಳು ಕೋವಿಡ್‌-19 ಸೋಂಕಿಗೆ ತುತ್ತಾಗಿದ್ದರು. ಅಸಲಿಗೆ ನಾಲ್ಕನೇ ಟೆಸ್ಟ್‌ ವೇಳೆಯೇ ಭಾರತದ ಮೂವರು ಕೋಚ್‌ಗಳು ಮತ್ತು ಒಬ್ಬ ಫಿಸಿಯೋಗೆ ಕೋವಿಡ್ ಸೋಂಕು ತಗುಲಿತ್ತು. ಅಂತಿಮ ಟೆಸ್ಟ್‌ಗೂ ಮುನ್ನ ಇದ್ದ ಮತ್ತೊಬ್ಬ ಫಿಸಿಯೋಗೂ ಸೋಂಕು ತಗುಲಿದ್ದರಿಂದ ಭೀತಿಗೊಂಡ ಭಾರತ ಆಟಗಾರರು ಕೊನೇ ಟೆಸ್ಟ್ ಆಡಲು ಹಿಂದೇಟು ಹಾಕಿದ್ದರು. ಹೀಗಾಗಿ ಕೊನೇ ಟೆಸ್ಟ್ ಪಂದ್ಯ ರದ್ದಾಗಿತ್ತು.

ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ಗೆ ದೊಡ್ಡ ನಷ್ಟ

ಇಂಗ್ಲೆಂಡ್‌ ಕ್ರಿಕೆಟ್‌ ಬೋರ್ಡ್‌ಗೆ ದೊಡ್ಡ ನಷ್ಟ

ಭಾರತ-ಇಂಗ್ಲೆಂಡ್ ಕೊನೇಯ ಟೆಸ್ಟ್ ಪಂದ್ಯ ರದ್ದಾಗಿದ್ದರಿಂದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್‌ಗೆ ದೊಡ್ಡ ಮಟ್ಟದ ನಷ್ಟವಾಗಿದೆ. ಜೊತೆಗೆ ಐದು ಪಂದ್ಯಗಳ ಟೆಸ್ಟ್ ಸರಣಿಯ ವಿಜೇತರನ್ನು ನಿರ್ಧರಿಸಲೂ ಸಾಧ್ಯವಾಗಿಲ್ಲ. ಯಾಕೆಂದರೆ ಈಗ 2-1ರಲ್ಲಿರುವ ಸರಣಿ ಕೊನೇ ಟೆಸ್ಟ್ ಮುಕ್ತಾಯದ ಬಳಿಕ ಒಂದೋ 2-2ರಿಂದ ಸರಣಿ ಸಮಬಲ ಇಲ್ಲವೆ 3-1ರಿಂದ ಭಾರತಕ್ಕೆ ಗೆಲುವು ಇಲ್ಲವೆ ಪಂದ್ಯ ಡ್ರಾ ಆಗಿ ಸರಣಿ 2-1ರಿಂದ ಭಾರತದ ವಶದಲ್ಲೇ ಇರುತ್ತಿತ್ತು. ಆದರೆ ಪಂದ್ಯ ನಡೆಯದಿರುವುದರಿಂದ ಟೆಸ್ಟ್‌ ಸರಣಿಯನ್ನು ನಿರ್ಧರಿಸಲು ಸಾಧ್ಯವಾಗಿಲ್ಲ. ಈ ಬಗ್ಗೆ ಮುಂದೆ ಏನು ನಿರ್ಧಾರವಾಗುತ್ತದೆ ಕಾದು ನೋಡಬೇಕಾಗಿದೆ. ಭಾರತ ಮತ್ತು ಇಂಗ್ಲೆಂಡ್ ಬೋರ್ಡ್‌ಗಳು ನಿರ್ಧಾರ ತಾಳಲು ಸಾಧ್ಯವಾಗದಿದ್ದರೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಮಧ್ಯ ಪ್ರವೇಶಿಸಿ ಪರಿಹಾರ ತಿಳಿಸುವುದನ್ನು ನಿರೀಕ್ಷಿಸಲಾಗಿದೆ.

ಈಗಿನ ಬೆಳವಣಿಗೆಯ ಪ್ರಕಾರ 5ನೇ ಟೆಸ್ಟ್ ನಡೆಯಲ್ವಾ?

ಈಗಿನ ಬೆಳವಣಿಗೆಯ ಪ್ರಕಾರ 5ನೇ ಟೆಸ್ಟ್ ನಡೆಯಲ್ವಾ?

ಐದನೇ ಟೆಸ್ಟ್‌ಗೆ ಬದಲಾಗಿ ಮುಂದಿನ ವರ್ಷ ಎರಡು ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡುವಂತೆ ಬಿಸಿಸಿಐ, ಇಸಿಬಿಗೆ ಆಫರ್ ನೀಡಿದೆ ಎಂಬ ಸುದ್ದಿ ಓಡಾಡುತ್ತಿದೆ ನಿಜ. ಆದರೆ ಇದು ಅಧಿಕೃತವಾಗಿಲ್ಲ. ಬಿಸಿಸಿಐ ಅಥವಾ ಇಸಿಬಿ ಈ ಬಗ್ಗೆ ಇನ್ನೂ ಏನೂ ಘೋಷಣೆ ಮಾಡಿಲ್ಲ. ಹೀಗಾಗಿ ಸ್ಪಷ್ಟನೆಗಾಗಿ ಕಾಯಬೇಕಾಗಿದೆ. ಮಾಹಿತಿಯೊಂದರ ಪ್ರಕಾರ ಮುಂದಿನ ವರ್ಷ ಜುಲೈನಲ್ಲಿ ಭಾರತ ತಂಡ ಇಂಗ್ಲೆಂಡ್‌ಗೆ ಮತ್ತೆ ಪ್ರವಾಸ ಹೋಗಲಿದೆ. ಆ ವೇಳೆ ಈಗ ರದ್ದಾಗಿರುವ ಐದನೇ ಟೆಸ್ಟ್ ಪಂದ್ಯ ನಡೆಸಬಹುದು. ಅಥವಾ ಟೆಸ್ಟ್‌ಗೆ ಬದಲಾಗಿ ಎರಡು ಹೆಚ್ಚುವರಿ ಟಿ20ಐ ಪಂದ್ಯಗಳನ್ನು ನಡೆಸಬಹುದು. ಒಟ್ಟಿನಲ್ಲಿ ರದ್ದಾಗಿರುವ ಒಂದು ಟೆಸ್ಟ್‌ನ ನಷ್ಟ ಭರಿಸಲು ಎರಡೂ ಕ್ರಿಕೆಟ್ ಬೋರ್ಡ್‌ಗಳು ಏನಾದರೂ ಒಂದು ತೀರ್ಮಾನಕ್ಕೆ ಬರಲಿವೆ. ಅಂದ್ಹಾಗೆ, 2022ರ ಜುಲೈನಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಹೋಗುವ ಟೀಮ್ ಇಂಡಿಯಾ, 3 ಟಿ20ಐ ಮತ್ತು 3 ಏಕದಿನ ಪಂದ್ಯಗಳನ್ನು ಆಡುವುದರಲ್ಲಿದೆ. ಈ ವೇಳೆ ಎರಡು ಹೆಚ್ಚುವರಿ ಟಿ20ಐ ಪಂದ್ಯಗಳನ್ನು ಆಡುವುದಾದರೆ 5 ಟಿ20 ಪಂದ್ಯಗಳನ್ನು ಭಾರತ ಆಡಬೇಕಾಗುತ್ತದೆ.

Story first published: Monday, September 13, 2021, 14:25 [IST]
Other articles published on Sep 13, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+