Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಸ್ಪ್ರೀತ್ ಬೂಮ್ರಾ ವಿಶ್ವದ ಬೆಸ್ಟ್ ವೇಗದ ಬೌಲರ್ ಯಾಕೆಂದು ವಿವರಿಸಿದ ಶೇನ್ ಬಾಂಡ್

India in Australia: Jasprit Bumrah is best fast bowler in the world says Shane bond

ಆಸ್ಟ್ರೇಲಿಯಾ ವಿರುದ್ಧದ ಎರಡು ತಿಂಗಳ ಕಾಲ ನಡೆಯುವ ಸುದೀರ್ಘ ಸರಣಿಯ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ತಂಡದ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಭಾರತೀಯ ವೇಗಿ ಜಸ್ಪ್ರೀತ್ ಬೂಮ್ರಾ ಸಾರ್ಥ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಬೂಮ್ರಾ ಸದ್ಯ ವಿಸ್ವದ ಅತ್ಯುತ್ತಮ ವೇಗದ ಬೌಲರ್ ಎಂದು ಶೇನ್ ಬಾಂಡ್ ಬಣ್ಣಿಸಿದ್ದಾರೆ.

ಶೇನ್ ಬಾಂಡ್ ಮುಂಬೈ ಇಂಡಿಯನ್ಸ್ ತಂಡದ ಬೌಲಿಂಗ್ ಕೋಚ್ ಆಗಿದ್ದರು. ಬೂಮ್ರಾಗೆ ಮುಂಬೈ ತಂಡದ ಪರವಾಗಿ ಕಣಕ್ಕಿಳಿಯುವ ವೇಳೆ ಬಾಂಡ್ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಕ್ರಿಕೆಟ್‌ನಲ್ಲಿ ಬೆಸ್ಟ್ ಬೌಲರ್ ಆಗಿ ಮುಂದುವರಿಯುವ ಬಯಕೆಯನ್ನು ಬೂಮ್ರಾ ಹೊಂದಿದ್ದಾರೆ ಎಂದು ಶೇನ್ ಬಾಂಡ್ ಹೇಳಿದ್ದಾರೆ.

"ಬೂಮ್ರಾ ವೇಗವಾಗಿ ಓಡುವುದಿಲ್ಲ. ಆದರೆ ಅವರ ಅಂತಿಮ ಕೆಲ ಹೆಜ್ಜೆಗಳು ಚೆಂಡಿಗೆ ವೇಗವನ್ನು ನೀಡುತ್ತದೆ. ಇದು ಕೆಲ ಬಾರಿ ಬ್ಯಾಟ್ಸ್‌ಮನ್‌ಗಳನ್ನು ಕಂಗೆಡಿಸುತ್ತದೆ. ಆತ ಅತ್ಯುತ್ತಮ ಬೌಲರ್ ಆಗಿ ಮುಂದಿವರಿಯಲು ಬಯಸುತ್ತಾರೆ. ಆತ ಅತ್ಯುತ್ತಮ ವೇಗದ ಬೌಲರ್. ಆತ ಬಂದೂಕಿನಂತೆ" ಎಂದು ಬೂಮ್ರಾ ಬೌಲಿಂಗ್ ದಾಳಿಯ ಬಗ್ಗೆ ಪ್ರಶಂಸಿಸಿದರು ಬಾಂಡ್.

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅನುಭವ ಹೊಂದಿರುವ ಜೋ ಡಾವ್ಸ್ ಮಾತನಾಡಿ ಬೂಮ್ರಾ ಎಸೆಯುವ ಬೌನ್ಸರ್ ಎದುರಿಸಲು ಅತ್ಯಂತ ಕಠಿಣವಾಗಿರುವ ಎಸೆತವಾಗಿದೆ ಎಂದಿದ್ದಾರೆ. ಬೂಮ್ರಾ ಚೆಂಡನ್ನು ಬಿಡುಗಡೆಗೊಳಿಸುವುದು ವೆಸ್ಟ್ ಇಂಈಸ್‌ನ ದಿಗ್ಗಜ ವೇಗಿ ಕೋರ್ಟ್ನಿ ವಾಲ್ಶ್ ಅವರಿಗೆ ಹೋಲಿಕೆಯಾಗುತ್ತದೆ ಎಂದಿದ್ದಾರೆ.

2018-19ರ ಐತಿಹಾಸಿಕ ಟೆಸ್ಟ್ ಸರಣಿಯ ಸಂದರ್ಭದಲ್ಲಿ ಬೂಮ್ರಾ ಅತಿ ಹೆಚ್ಚು ವಿಕೆಟ್ ಪಡೆದಿದ್ದರು. ನಥನ್ ಲಿಯೋನ್ ಜೊತೆಗೆ ಬೂಮ್ರಾ 21 ವಿಕೆಟ್ ಕಿತ್ತು ಮೊದಲ ಸ್ಥಾನವನ್ನು ಹಂಚಿಕೊಂಡಿದ್ದರು. ಈ ಸರಣಿಯನ್ನು ಭಾರತ 2-1 ಅಂತರದಿಂದ ಗೆದ್ದು ಬೀಗಿತ್ತು.

Story first published: Sunday, November 22, 2020, 11:12 [IST]
Other articles published on Nov 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+