For Quick Alerts
ALLOW NOTIFICATIONS  
For Daily Alerts
 

Asia Cup T20: ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳ ರ‍್ಯಾಂಕಿಂಗ್ ಏನು? ಇಲ್ಲಿದೆ ಮಾಹಿತಿ

ಇನ್ನು ಆರು ದಿನದಲ್ಲಿ ಯುಎಇನಲ್ಲಿ ಏಷ್ಯಾ ಕಪ್‌ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಭಾರತ ಸೇರಿದಂತೆ 8 ರಾಷ್ಟ್ರಗಳು ಭಾಗವಹಿಸುತ್ತಿವೆ. ಭಾರತವೇ ಈ ಟೂರ್ನಿಯನ್ನು ಆಯೋಜಿಸುತ್ತಿದೆ. ಮುಂದಿನ ವರ್ಷ ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿ ಏಷ್ಯಾ ಕಪ್ ಟಿ20 ಫಾರ್ಮೆಟ್‌ನಲ್ಲಿ ಆಡಿಸಲಾಗುತ್ತಿದೆ. ಇದಕ್ಕೂ ಮೊದಲು ಎರಡು ಬಾರಿ ಟಿ20 ಏಷ್ಯಾ ಕಪ್ ಆಯೋಜಿಸಲಾಗಿದೆ.

ಈಗಾಗಲೇ ಏಷ್ಯಾ ಕಪ್‌ಗಾಗಿ ಎಲ್ಲ ದೇಶಗಳು ತಂಡಗಳನ್ನು ಪ್ರಕಟಿಸಿವೆ. ಈ ಟೂರ್ನಿಯಲ್ಲಿ ಭಾಗವಹಿಸುವ 8 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಇನ್ನು ಗುಂಪು ಹಂತದಲ್ಲಿ ಪ್ರತಿ ತಂಡಕ್ಕೂ ಮೂರು ಪಂದ್ಯಗಳು ಸಿಗಲಿವೆ. ಈ ವೇಳೆ ಗುಂಪು ಹಂತದಲ್ಲಿ ಅಗ್ರ ಎರಡು ಸ್ಥಾನವನ್ನು ಪಡೆದ ತಂಡಗಳು ಸೂಪರ್ 4ಗೆ ಕ್ವಾಲಿಫೈ ಆಗುತ್ತವೆ. ಇನ್ನು ಸೂಪರ್‌ 4ರಲ್ಲೂ ಮೂರು ತಂಡಗಳ ವಿರುದ್ಧ ಕಾದಾಟ ಕಾಣಲಿದೆ. ಈ ವೇಳೆಯೂ ಸೂಪರ್ 4 ಹಂತದಲ್ಲಿ ಅಗ್ರ ಎರಡು ತಂಡಗಳು ಫೈನಲ್ ಪ್ರವೇಶಿಸಲಿವೆ. ಸೆ. 29ರಂದು ಫೈನಲ್‌ ನಡೆಯಲಿದೆ.

India is Ready for the Asia Cup with its No 1 Ranking amp amp Strong Players

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭಾಗವಹಿಸುತ್ತಿರುವ 8 ತಂಡಗಳ ರ‍್ಯಾಂಕಿಂಗ್ ಹೇಗಿದೆ? ಯಾವ ತಂಡ ರ‍್ಯಾಂಕಿಂಗ್‌ನಲ್ಲಿ ಮುಂದಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಯಾವ ತಂಡದ ರ‍್ಯಾಂಕಿಂಗ್ ಏನು?

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯನ್ನು ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಭಾರತ, ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದೆ. ಅಲ್ಲದೆ ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದಲ್ಲಿ ಆಯೋಜಿಸಲಾಗಿದ್ದ ಟಿ20 ವಿಶ್ವಕಪ್‌ ಗೆದ್ದಿದೆ. ಅಲ್ಲದೆ ಪ್ರಸಕ್ತ ತಂಡದಲ್ಲಿರುವ ಆಟಗಾರರು ಸಹ ಭರ್ಜರಿ ಫಾರ್ಮ್‌ನಲ್ಲಿದ್ದಾರೆ.

ಇನ್ನು ಏಷ್ಯಾ ಕಪ್‌ ಟಿ0 ಟೂರ್ನಿಯಲ್ಲಿ ಭಾಗವಹಿಸುತ್ತಿರುವ ತಂಡಗಳಲ್ಲಿ ಶ್ರೀಲಂಕಾ, ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನವನ್ನು ಪಡೆದಿದೆ. ಈ ವೇಳೆ ಶ್ರೀಲಂಕ 232 ರೇಟಿಂಗ್ ಪಾಯಿಂಟ್ಸ್‌ಗಳನ್ನು ಕಲೆ ಹಾಕಿದೆ. ಭಾರತದ ಸಂಪ್ರದಾಯಿಕ ಎದುರಾಳಿ ಪಾಕಿಸ್ತಾನ 231 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಐಸಿಸಿ ಶ್ರೇಯಾಂಕದಲ್ಲಿ ಎಂಟನೇ ಸ್ಥಾನದಲ್ಲಿದೆ. ಇನ್ನು ಟಿ20 ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ಅಫ್ಘಾನಿಸ್ತಾನ 223 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿದೆ.

India is Ready for the Asia Cup with its No 1 Ranking amp amp Strong Players

ಭಾರತದ ನೆರೆಯ ಬಾಂಗ್ಲಾದೇಶ 10, ಯುಎಇ ಐಸಿಸಿ ಟಿ20 ತಂಡಗಳ ಶ್ರೇಯಾಂಕದಲ್ಲಿ 15ನೇ ಸ್ಥಾನದಲ್ಲಿದೆ. ಇನ್ನು ಓಮನ್‌ 20, ಹಾಂಗ್‌ಕಾಂಗ್ 24ನೇ ಸ್ಥಾನದಲ್ಲಿದೆ.

ಟೀಮ್ ಇಂಡಿಯಾದಲ್ಲೇ ಅತಿ ಹೆಚ್ಚು ಶ್ರೇಯಾಂಕಿತ ಆಟಗಾರರು ಇದ್ದಾರೆ. ಟಿ20 ಶ್ರೇಯಾಂಕದಲ್ಲಿ ನಂಬರ್ 1 ಬ್ಯಾಟರ್ ಅಭಿಷೇಕ್‌ ಶರ್ಮಾ, ನಂಬರ್ 1 ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ತಮ್ಮ ಸ್ಫೋಟಕ ಆಟಕ್ಕೆ ಹೆಸರುವಾಸಿಯಾಗಿರುವ ಸೂರ್ಯಕುಮಾರ್ ಯಾದವ್ ತಂಡದ ಬಲವನ್ನು ಹೆಚ್ಚಿಸಬಲ್ಲ ಪ್ಲೇಯರ್ಸ್. ಇನ್ನು ಟೀಮ್ ಇಂಡಿಯಾದ ಬೌಲಿಂಗ್ ಸಹ ಬಲಢ್ಯವಾಗಿದೆ.

Story first published: Wednesday, September 3, 2025, 8:10 [IST]
Other articles published on Sep 3, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+