ಟಿ20 ವಿಶ್ವಕಪ್ ಗೆಲ್ಲಲು ಬಯಸುವ ತಂಡಗಳು ಭಾರತ ಸೋಲಿಸಬೇಕು: ಡ್ಯಾರೆನ್ ಸಾಮಿ

ನವದೆಹಲಿ: ಮುಂಬರಲಿರುವ ಐಸಿಸಿ ಟಿ20 ವಿಶ್ವಕಪ್ 2021 ಟೂರ್ನಿಯಲ್ಲಿ ಗೆಲ್ಲಬೇಕೆನ್ನುವ ತಂಡಗಳು ಭಾರತವನ್ನು ಸೋಲಿಸಬೇಕು ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಮಾಜಿ ನಾಯಕ ಡ್ಯಾರೆನ್ ಸಾಮಿ ಹೇಳಿದ್ದಾರೆ. ಅಕ್ಟೋಬರ್ 17ರಿಂದ ಪುರುಷರ ಟಿ20 ವಿಶ್ವಕಪ್ ಟೂರ್ನಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಲ್ಲಿ ಶುರುವಾಗಲಿದೆ. ಆಗಸ್ಟ್ 24ರಂದು ನಡೆಯುವ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕಾದಾಡಲಿವೆ.
ಯುಎಇಯ ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಅಕ್ಟೋಬರ್ 24ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನದ ಸವಾಲು ಸ್ವೀಕರಿಸಲಿದೆ. ಹೀಗಾಗಿ ಇತ್ತಂಡಗಳ ಕದನ ತೀವ್ರ ಕುತೂಹಲ ಮೂಡಿಸಿದೆ. ಬಹಳ ದಿನಗಳ ಬಳಿಕ ಭಾರತ-ಪಾಕಿಸ್ತಾನ ಮುಖಾಮುಖಿಯಾಗುವುದರಲ್ಲಿವೆ.
ಗ್ರೂಪ್ 'ಬಿ'ಯಲ್ಲಿ ಭಾರತ, ಪಾಕಿಸ್ತಾನ ತಂಡಗಳು
ದಕ್ಷಿಣ ಆಫ್ರಿಕಾದಲ್ಲಿ 2007ರಲ್ಲಿ ನಡೆದಿದ್ದ ಟಿ20ರ ವಿಶ್ವಕಪ್ ಆರಂಭಿಕ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಿ ಮಿನುಗಿದ್ದ ಮತ್ತು 2014ರಲ್ಲಿ ಸೆಮಿಫೈನಲ್‌ನಲ್ಲಿ ಸ್ಪರ್ಧಿಸಿದ್ದ ಭಾರತ ತಂಡ ಅಲ್ಲದೆ ಅಫ್ಘಾನಿಸ್ತಾನ, ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳು ಗ್ರೂಪ್-2ರಲ್ಲಿವೆ. ಗ್ರೂಪ್ ಎರಡರಲ್ಲಿ ಈ ನಾಲ್ಕು ತಂಡಗಳಲ್ಲದೆ ಗ್ರೂಪ್ ಎಯ ರನ್ನರ್ ಮತ್ತು ಗ್ರೂಪ್ ಬಿಯ ವಿನ್ನರ್ ತಂಡಗಳೂ ಸೇರಿಕೊಳ್ಳಲಿವೆ. ಗ್ರೂಪ್-1ರಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ಗ್ರೂಪ್ ಎಯ ವಿನ್ನರ್ ಮತ್ತು ಗ್ರೂಪ್ ಬಿಯ ರನ್ನರ್ ತಂಡಗಳೂ ಸ್ಪರ್ಧಿಸಲಿವೆ. ಭಾರತ ಬಲಿಷ್ಠ ತಂಡ. ಅದನ್ನು ಆರಂಭಿಕ ಹಂತದಲ್ಲೇ ಸೋಲಿಸಿದರೆ ಅಂಥ ತಂಡಗಳು ಪ್ರಶಸ್ತಿಯಾಸೆ ಉಳಿಸಿಕೊಳ್ಳುತ್ತವೆ ಎಂಬ ಅರ್ಥದಲ್ಲಿ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡದ ಡ್ಯಾರೆನ್ ಸಾಮಿ ಹೇಳಿದ್ದಾರೆ.
ಭಾರತ ಸೋಲಿಸಿದರೆ ಮಾತ್ರ ಉಳಿದ ತಂಡಗಳು ಮುನ್ನಡೆಯಬಲ್ಲವು
"ನಾವು ವಿಶ್ವಕಪ್‌ನಲ್ಲಿ ಸೋಲಿಸಬೇಕಾದ ಪ್ರಮುಖ ತಂಡವೆಂದರೆ ಅದು ಭಾರತ. ನಾವಿದನ್ನು ದಿನೇಶ್ ಕಾರ್ತಿಕ್ ಮಾತಿನಲ್ಲಿ ಕೇಳಿದ್ದೇವೆ. ಅವರು ಅವರ ಅನುಭವಗಳ ಬಗ್ಗೆ ಹೇಳಿಕೊಂಡಿದ್ದಾರೆ. ಅಲ್ಲಿನ ಪ್ರತಿಭೆಗಳು ಭಾರತದ ದೇಸಿ ಕ್ರಿಕೆಟ್‌ನಿಂದ ಬಂದಿರಲಿ ಇಲ್ಲವೆ ಐಪಿಎಲ್‌ನಿಂದ ಬಂದಿರಲಿ; ವಿಶ್ವದ ಎಲ್ಲಾ ಕ್ರಿಕೆಟಿಗರು ಭಾರತಕ್ಕೆ ಹೋಗಿ ಟಿ20 ಕ್ರಿಕೆಟ್‌ನ ಅನುಭವ ಪಡೆದುಕೊಳ್ಳುತ್ತಾರೆ. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಬಲಿಷ್ಠ ತಂಡವೆನಿಸಿರುವ ಭಾರತವನ್ನು ಉಳಿದ ತಂಡಗಳು ಸೋಲಿಸಬೇಕು. ಆಗ ಮಾತ್ರ ಆ ತಂಡಗಳು ಮುನ್ನಡೆದು ಪ್ರಶಸ್ತಿ ಕಡೆಗೆ ಬರಲು ಸಾಧ್ಯ. ನೀವು ಯಾವುದೇ ಹಂತದಲ್ಲಿರಲಿ. ಒಟ್ಟಿನಲ್ಲಿ ನೀವು ಭಾರತ ತಂಡವನ್ನು ಸೋಲಿಸಿ ಮುನ್ನಡಯಬೇಕು. ಅದು ಫೈನಲ್ ಆಗಿರಲಿ ಅಥವಾ ಸೆಮಿಫೈನಲ್ ಆಗಿರಲಿ. ನೀವು ಭಾರತವನ್ನು ಸೋಲಿಸಬೇಕಾಗುತ್ತದೆ," ಎಂದು ಸ್ಟಾರ್ ಸ್ಟೋರ್ಟ್ಸ್‌ನ ಶೋ ಗೇಮ್ ಪ್ಲ್ಯಾನ್‌ನಲ್ಲಿ ಮಾತನಾಡಿದ ಸಾಮಿ ಹೇಳಿದ್ದಾರೆ. ಡ್ಯಾರೆನ್ ನಾಯಕತ್ವದ ವೆಸ್ಟ್ ಇಂಡೀಸ್ ತಂಡ 2016ರ ಆವೃತ್ತಿಯಲ್ಲಿ ಅಂದರೆ ಹಿಂದಿನ ಆವೃತ್ತಿಯಲ್ಲಿ ಚಾಂಪಿಯನ್ಸ್ ಪಟ್ಟ ಜಯಿಸಿತ್ತು.
ಟಿ20 ವಿಶ್ವಕಪ್‌ನಲ್ಲಿ ತಂಡದ ಹಣಾಹಣಿಗಳು
ಸೂಪರ್ 12 ಗ್ರೂಪ್ 2ರಲ್ಲಿ ಸ್ಥಾನ ಪಡೆದುಕೊಂಡಿರುವ ಟೀಮ್ ಇಂಡಿಯಾ ಈ ಪರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಬದ್ಧ ವೈರಿ ಪಾಕಿಸ್ತಾನದ ವಿರುದ್ಧ ಅಕ್ಟೋಬರ್ 24ರಂದು ಸಂಜೆ 6 ಗಂಟೆಗೆ ದುಬೈನಲ್ಲಿ ಸೆಣಸಾಡಲಿದೆ.
ಭಾರತದ ಪಂದ್ಯಗಳು
* ಭಾರತ vs ಪಾಕಿಸ್ತಾನ - ಅಕ್ಟೋಬರ್ 24, ದುಬೈನಲ್ಲಿ ಸಂಜೆ 6 ಗಂಟೆಗೆ
* ಭಾರತ vs ನ್ಯೂಜಿಲೆಂಡ್ - ಅಕ್ಟೋಬರ್ 31, ದುಬೈನಲ್ಲಿ ಸಂಜೆ 6 ಗಂಟೆಗೆ
* ಭಾರತ vs ಅಫ್ಘಾನಿಸ್ತಾನ - ನವೆಂಬರ್ 3, ಅಬುಧಾಬಿಯಲ್ಲಿ ಸಂಜೆ 6 ಗಂಟೆಗೆ
* ಭಾರತ vs ಅರ್ಹತಾ ಸುತ್ತಿನ ಬಿ ಗುಂಪಿನ ಟಾಪ್ 1 ತಂಡ - ನವೆಂಬರ್ 5, ದುಬೈನಲ್ಲಿ ಸಂಜೆ 6 ಗಂಟೆಗೆ
* ಭಾರತ vs ಅರ್ಹತಾ ಸುತ್ತಿನ ಎ ಗುಂಪಿನ ಟಾಪ್ 2 ತಂಡ - ನವೆಂಬರ್ 8, ದುಬೈನಲ್ಲಿ ಸಂಜೆ 6 ಗಂಟೆಗೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications