RSWS 2022: ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಉಳಿಸಿಕೊಂಡ ಇಂಡಿಯಾ ಲೆಜೆಂಡ್ಸ್

ರಾಯ್‌ಪುರದಲ್ಲಿ ನಡೆದ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಫೈನಲ್ ಪಂದ್ಯದಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 33 ರನ್‌ಗಳಿಂದ ಸೋಲಿಸುವ ಮೂಲಕ ಚಾಂಪಿಯನ್ ಆಗಿದೆ. ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಮೊದಲನೇ ಆವೃತ್ತಿಯಲ್ಲಿ ಕೂಡ ಇಂಡಿಯಾ ಲೆಜೆಂಡ್ಸ್ ಚಾಂಪಿಯನ್ ಆಗಿದ್ದರು. ಎರಡನೇ ಆವೃತ್ತಿಯಲ್ಲೂ ಕೂಡ ತನ್ನ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ತೆಂಡುಲ್ಕರ್ ಪಡೆ ಯಶಸ್ವಿಯಾಗಿದೆ.
ಟಾಸ್ ಗೆದ್ದ ಇಂಡಿಯಾ ಲೆಜೆಂಡ್ಸ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಮನ್ ಓಜಾ ಭರ್ಜರಿ ಶತಕದ ನೆರವಿನಿಂದ ಇಂಡಿಯಾ ಲೆಜೆಂಡ್ಸ್ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ತಂಡ 162 ರನ್‌ಗಳಿಗೆ ಆಲೌಟ್ ಆಗುವ ಮೂಲಕ 33 ರನ್‌ಗಳ ಸೋಲನುಭವಿಸಿತು.
ಮೊದಲ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ಲೆಜೆಂಡ್ಸ್ ವಿರುದ್ಧ ಗೆದ್ದು ಭಾರತ ಲೆಜೆಂಡ್ಸ್ ತಂಡ ಫೈನಲ್ ಪ್ರವೇಶಿಸಿತ್ತು. ಎರಡನೇ ಸೆಮಿಫೈನಲ್‌ನಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಗೆಲುವು ಸಾಧಿಸಿದ ಶ್ರೀಲಂಕಾ ಲೆಜೆಂಡ್ಸ್ ಪಡೆ ಅಂತಿಮ ಸೆಣೆಸಾಟಕ್ಕೆ ಅರ್ಹತೆ ಪಡೆದುಕೊಂಡಿತ್ತು. ಈ ಪಂದ್ಯದ ಮೂಲಕ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ಗೆ ತೆರೆ ಬಿದ್ದಿದೆ.

ಇಂಡಿಯಾ ಲೆಜೆಂಡ್ಸ್‌ಗೆ ಆರಂಭಿಕ ಆಘಾತ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಇಂಡಿಯಾ ಲೆಜೆಂಡ್ಸ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ನಾಯಕ ಸಚಿನ್ ತೆಂಡುಲ್ಕರ್ ಶೂನ್ಯಕ್ಕೆ ಔಟಾಗುವ ಮೂಲಕ ಆಘಾತ ಅನುಭವಿಸಿತು. ನಂತರ ಬಂದ ಸುರೇಶ್ ರೈನಾ ಕೂಡ 4 ರನ್ ಆಗುವಷ್ಟರಲ್ಲಿ ಔಟಾದರು.
ಆದರೆ ಇಂಡಿಯಾ ಲೆಜೆಂಡ್ಸ್‌ನ ವಿಕೆಟ್ ಕೀಪರ್ ಬ್ಯಾಟರ್ ನಮನ್ ಓಜಾ ಮಾತ್ರ ಉತ್ತಮವಾಗಿ ಬ್ಯಾಟ್ ಮಾಡಿದರು. ಶತಕ ಗಳಿಸಿದ ಅವರು ಇಂಡಿಯಾ ಲೆಜೆಂಡ್ಸ್ 195 ರನ್ ಗಳಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಠಿಣ ತರಬೇತಿ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ

ಶತಕ ಸಿಡಿಸಿ ಮಿಂಚಿದ ನಮನ್ ಓಜಾ
ಆರಂಭಿಕ ಆಘಾತ ಅನುಭವಿಸಿದ ಇಂಡಿಯಾ ಲೆಜೆಂಡ್ಸ್‌ಗೆ ನಮನ್ ಓಜಾ ಮತ್ತು ವಿನಯ್ ಕುಮಾರ್ ಚೇತರಿಕೆ ನೀಡಿದರು. ವಿನಯ್ ಕುಮಾರ್ 21 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ಉತ್ತಮ ಜೊತೆಯಾಟ ಆಡಿದರು.
71 ಎಸೆತಗಳನ್ನು ಎದುರಿಸಿದ ನಮನ್ ಓಜಾ 15 ಬೌಂಡರಿ, 2 ಭರ್ಜರಿ ಸಿಕ್ಸರ್ ಸಹಿತ 108 ರನ್ ಗಳಿಸಿದ ಇಂಡಿಯಾ ಲೆಜೆಂಡ್ಸ್ ತಂಡ ಉತ್ತಮ ರನ್ ಕಲೆ ಹಾಕಲು ಕಾರಣರಾದರು. ಯುವರಾಜ್ ಸಿಂಗ್ 19 ರನ್ ಗಳಿಸಿ ಔಟಾದರೆ, ಇರ್ಫಾನ್ ಪಠಾಣ್ 11 ರನ್ ಗಳಿಸಿದರು, ಯೂಸುಫ್ ಪಠಾಣ್ ಶೂನ್ಯಕ್ಕೆ ಔಟಾಗಿ ನಿರಾಸೆ ಅನುಭವಿಸಿದರು. ಸ್ಟುವರ್ಟ್ ಬಿನ್ನಿ ಕೊನೆಯ ಎರಡು ಎಸೆತಗಳನ್ನು ಎದುರಿಸಿ 8 ರನ್ ಗಳಿಸಿದರು. ಇಂಡಿಯಾ ಲೆಜೆಂಡ್ಸ್ ಅಂತಿಮವಾಗಿ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 195 ರನ್ ಗಳಿಸಿದರು. ಶ್ರೀಲಂಕಾ ಪರವಾಗಿ ನುವಾನ್ ಕುಲಶೇಖರ 3 ವಿಕೆಟ್ ಪಡೆದರ, ಇಸಿರು ಉದಾನ 2 ವಿಕೆಟ್ ಪಡೆದರು.

ಆರಂಭಿಕ ಆಟಗಾರರು ವಿಫಲ
ಬೃಹತ್ ಮೊತ್ತ ಬೆನ್ನತ್ತಿದ ಶ್ರೀಲಂಕಾ ಲೆಜೆಂಡ್ಸ್ ಉತ್ತಮ ಆರಂಭ ಪಡೆಯಲಿಲ್ಲ. ಸನತ್ ಜಯಸೂರ್ಯ (5), ದಿಲ್ಶನ್ ಮುನವೀರ (8), ನಾಯಕ ತಿಲಕರತ್ನೆ ದಿಲ್ಶಾನ್ (11), ಉಪುಲ್ ತರಂಗ (10) ಬೇಗನೆ ಔಟಾಗುವ ಮೂಲಕ ಶ್ರೀಲಂಕಾ ಲೆಜೆಂಡ್ಸ್ ತಂಡ ಆರಂಭದಲ್ಲೇ ಮುಗ್ಗರಿಸಿತು. ಜೀವನ್ ಮೆಂಡಿಸ್ 11 ಎಸೆತಗಳಲ್ಲಿ 20 ರನ್ ಗಳಿಸಿದರು.
ಮಹೇಲ ಉದವಟ್ಟೆ 19 ಎಸೆತಗಳಲ್ಲಿ 26 ರನ್ ಮತ್ತು ಇಶಾನ್ ಜಯರತ್ನ ಎಸೆತಗಳಲ್ಲಿ ರನ್ ಗಳಿಸುವ ಮೂಲಕ ಭಾರತದ ಬೌಲರ್ ಗಳಿಗೆ ಸವಾಲು ಹಾಕಿದರು. ಆದರೆ ಅಂತಿಮ ಓವರ್ ಗಳಲ್ಲಿ ಉತ್ತಮವಾಗಿ ಬೌಲಿಂಗ್ ಮಾಡಿದ ಇಂಡಿಯಾ ಲೆಜೆಂಡ್‌ಗಳು ಶ್ರೀಲಂಕಾವನ್ನು ಸೋಲಿಸುವಲ್ಲಿ ಯಶ ಕಂಡರು.

ಎರಡನೇ ಬಾರಿಯೂ ಇಂಡಿಯಾ ಲೆಜೆಂಡ್ಸ್ ಚಾಂಪಿಯನ್
ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ ಆಗಿದ್ದ ಇಂಡಿಯಾ ಲೆಜೆಂಡ್ಸ್ ಎರಡನೇ ಆವೃತ್ತಿಯಲ್ಲೂ ಚಾಂಪಿಯನ್ ಪಟ್ಟ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಭಾರತ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಎರಡೂ ತಂಡಗಳು ಟೂರ್ನಿಯಲ್ಲಿ ಪಂದ್ಯವನ್ನು ಸೋತಿರಲಿಲ್ಲ. ಶ್ರೀಲಂಕಾ ಫೈನಲ್‌ನಲ್ಲಿ ಸೋಲುವ ಮೂಲಕ ನಿರಾಸೆ ಅನುಭವಿಸಿದರೆ. ಭಾರತ ತಂಡ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್‌ನ ಎರಡನೇ ಆವೃತ್ತಿಯಲ್ಲಿ ಒಂದೂ ಸೋಲು ಕಾಣದೆ ಚಾಂಪಿಯನ್ ಆಗಿದೆ.
ಇಂಡಿಯಾ ಲೆಜೆಂಡ್ಸ್ : ನಮನ್ ಓಜಾ (ವಿಕೆಟ್ ಕೀಪರ್), ಸಚಿನ್ ತೆಂಡೂಲ್ಕರ್ (ನಾಯಕ), ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ, ಯುವರಾಜ್ ಸಿಂಗ್, ಯೂಸುಫ್ ಪಠಾಣ್, ವಿನಯ್ ಕುಮಾರ್, ಅಭಿಮನ್ಯು ಮಿಥುನ್, ರಾಜೇಶ್ ಪವಾರ್, ಮತ್ತು ರಾಹುಲ್ ಶರ್ಮಾ
ಶ್ರೀಲಂಕಾ ಲೆಜೆಂಡ್ಸ್: ಮಹೇಲ ಉದವಟ್ಟೆ, ತಿಲಕರತ್ನೆ ದಿಲ್ಶನ್ (ನಾಯಕ), ಉಪುಲ್ ತರಂಗ (ವಿಕೆಟ್ ಕೀಪರ್), ಜೀವನ್ ಮೆಂಡಿಸ್, ಸನತ್ ಜಯಸೂರ್ಯ, ದಿಲ್ಶನ್ ಮುನವೀರ, ಅಸೆಲಾ ಗುಣರತ್ನೆ, ಇಸುರು ಉದಾನ, ನುವಾನ್ ಕುಲಶೇಖರ, ಇಶಾನ್ ಜಯರತ್ನ, ಧಮ್ಮಿಕಾ ಪ್ರಸಾದ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications