ಸೆಹ್ವಾಗ್, ಸಚಿನ್ ಆಕರ್ಷಕ ಆಟಕ್ಕೆ ಶರಣಾದ ವೆಸ್ಟ್ ಇಂಡೀಸ್ ಲೆಜೆಂಡ್ಸ್

ಮುಂಬೈ, ಮಾರ್ಚ್ 8: ಆರಂಭಿಕ ಬ್ಯಾಟ್ಸ್‌ಮನ್ ವೀರೇಂದ್ರ ಸೆಹ್ವಾಗ್ ಮತ್ತು ನಾಯಕ ಸಚಿನ್ ತೆಂಡೂಲ್ಕರ್ ಆಕರ್ಷಕ ಬ್ಯಾಟಿಂಗ್ ಬೆಂಬಲದಿಂದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟಿ20 2020 ಉದ್ಘಾಟನಾ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಲೆಜೆಂಡ್ಸ್ ವಿರುದ್ಧ ಇಂಡಿಯಾ ಲೆಜೆಂಡ್ಸ್ 7 ವಿಕೆಟ್ ಜಯ ಗಳಿಸಿದೆ.
ಮುಂಬೈಯ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ (ಮಾರ್ಚ್ 7) ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್ ಲೆಜೆಂಡ್ಸ್, ಡ್ಯಾರೆನ್ ಗಂಗಾ 32, ಶಿವನರೀನ್ ಚಂದ್ರಪೌಲ್ 61 (41 ಎಸೆತ), ನಾಯಕ ಬ್ರಿಯಾನ್ ಲಾರಾ 17, ಡಾಂಜಾ ಹಯಾಟ್ 12, ಟಿನೋ ಬೆಸ್ಟ್ 11 ರನ್‌ನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 150 ರನ್ ಬಾರಿಸಿತು.
ಗುರಿ ಬೆನ್ನತ್ತಿದ ಇಂಡಿಯಾ ಲೆಜೆಂಡ್ಸ್ ಪರ, ವೀರೇಂದ್ರ ಸೆಹ್ವಾಗ್ ಅಜೇಯ 74 (57 ಎಸೆತ), ಸಚಿನ್ ತೆಂಡೂಲ್ಕರ್ 36 (29 ಎಸೆತ), ಮೊಹಮ್ಮದ್ ಕೈಫ್ 14, ಯುವರಾಜ್ ಸಿಂಗ್ ಅಜೇಯ 10 ರನ್ (7 ಎಸೆತ) ಸೇರಿಸಿದರು. ತಂಡ 18.2 ಓವರ್‌ನಲ್ಲಿ 3 ವಿಕೆಟ್ ಕಳೆದು 151 ರನ್ ಪೇರಿಸಿ ಗೆಲುವನ್ನಾಚರಿಸಿತು.
ವೆಸ್ಟ್ ಇಂಡೀಸ್ ಲೆಜೆಂಡ್ಸ್ ಇನ್ನಿಂಗ್ಸ್‌ನಲ್ಲಿ ಇಂಡಿಯಾ ಲೆಜೆಂಡ್ಸ್‌ನ ಝಹೀರ್ ಖಾನ್ 2, ಮುನಾಫ್ ಪಟೇಲ್ 2, ಪ್ರಗ್ಯಾನ್ ಓಜಾ 2, ಇರ್ಫಾನ್ ಪಠಾನ್ 1 ವಿಕೆಟ್ ಪಡೆದರು. 11 ಬೌಂಡರಿಗಳೊಂದಿಗೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ವೀರೇಂದ್ರ ಸೆಹ್ವಾಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications