ನಾಯಕತ್ವಕ್ಕಾಗಿ 4 ರಿಂದ 5 ಗಂಟೆ ಚರ್ಚೆ ನಡೆಸಿದ ಗೌತಮ್ ಗಂಭೀರ್
ಐಪಿಎಲ್ ಮುಗಿದ ಬಳಿಕ ಟೀಮ್ ಇಂಡಿಯಾ ಇಂಗ್ಲೆಂಡ್ ಪ್ರವಾಸವನ್ನು ಬೆಳೆಸಲಿದೆ. ಈ ಪ್ರವಾಸಕ್ಕೆ ಇನ್ನೇನು ಕೆಲವೇ ದಿನಗಳಲ್ಲಿ ಟೀಮ್ ಇಂಡಿಯಾವನ್ನು ಪ್ರಕಟಿಸುವ ಸಾಧ್ಯತೆ ಇದೆ. ರೋಹಿತ್ ಶರ್ಮಾ ಅವರಿಂದ ತೆರವಾದ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬುದೇ ದೊಡ್ಡ ಪ್ರಶ್ನೆಆಗಿದೆ. ಇಂಗ್ಲೆಂಡ್ ಪ್ರವಾಸದ ಮೂಲಕ ಭಾರತ 2025-27ರ ವಿಶ್ವ ಟೆಸ್ಟ ಚಾಂಪಿಯನ್ ಶಿಪ್ ಈ ಆವೃತ್ತಿಯ ಅಭಿಯಾನವನ್ನು ಆರಂಭಿಸಲಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ನಿವೃತ್ತಿಯ ನಂತರ ಈ ಸ್ಥಾನವನ್ನು ತುಂಬುವುದು ಯಾರು ಎಂಬ ಪ್ರಶ್ನೆಗೆ ಇನ್ನೇನು ಕೆಲವೇ ದಿನಗಳಲ್ಲಿ ಉತ್ತರ ಲಭಿಸಲಿದೆ. ಮಾಧ್ಯಮ ವರದಿಗಳ ಪ್ರಕಾರ, ಮೇ 23 ರಂದು ಟೀಮ್ ಇಂಡಿಯಾವನ್ನು ಇಂಗ್ಲೆಂಡ್ ಪ್ರವಾಸಕ್ಕೆ ಪ್ರಕಟಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಇನ್ನು ಟೆಸ್ಟ್ ನಾಯಕ ಯಾರು ಎಂಬ ಪ್ರಶ್ನೆಗೆ ಈಗ ದೊಡ್ಡ ಅಪ್‌ಡೇಟ್ ಸಿಕ್ಕಿದೆ.

ಇನ್ನು ರೋಹಿತ್ ಶರ್ಮಾ ಅವರಿಂದ ತೆರವಾದ ಸ್ಥಾನವನ್ನು ಟೀಮ್ ಇಂಡಿಯಾದ ಭರವಸೆಯ ಆಟಗಾರರಾದ ಶುಭಮನ್ ಗಿಲ್, ಜಸ್ಪ್ರಿತ್ ಬುಮ್ರಾ, ಕೆಎಲ್ ರಾಹುಲ್ ತುಂಬಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಶುಭಮನ್ ಗಿಲ್ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್ ಅವರನ್ನು ನವದೆಹಲಿಯಲ್ಲಿ ಭೇಟಿ ಆಗಿದ್ದಾರೆ. ಈ ಭೇಟಿಯ ವೇಳೆ 4 ರಿಂದ 5 ಗಂಟೆಗಳ ಕಾಲ ಚರ್ಚೆಗಳನ್ನು ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಈಗ ಬರುತ್ತಿರುವ ಮಾಹಿತಿಯ ಪ್ರಕಾರ ಗೌತಮ್ ಗಂಭೀರ್, ಗಿಲ್ ಅವರಿಗೆ ನಾಯಕತ್ವದ ಪಟ್ಟವನ್ನು ಕಟ್ಟಬಹುದು ಎಂದು ಅಂದಾಜಿಸಲಾಗಿದೆ.
ಬುಮ್ರಾ ಕೈ ತಪ್ಪಿದ ನಾಯಕತ್ವ?
ಟೀಮ್ ಇಂಡಿಯಾವನ್ನು ಕೆಲವು ಸರಣಿಗಳಲ್ಲಿ ಮುನ್ನಡೆಸಿರುವ ಜಸ್ಪ್ರಿತ್ ಬುಮ್ರಾ ಅವರಿಗೆ ನಾಯಕತ್ವ ಸಿಗಬಹುದು ಎಂದು ಲೆಕ್ಕಾಚಾರ ನಡೆದಿದೆ. ಇವರು ಈ ಸ್ಥಾನದ ಮೇಲೆ ಕಣ್ಣು ನೆಟ್ಟಿರುವ ಕೆಲವೇ ಕೆಲವು ಆಟಗಾರರಲ್ಲಿ ಇವರು ಒಬ್ಬರು. ಇನ್ನು ಬಿಸಿಸಿಐ ಕೆಲ ಅಧಿಕಾರಿಗಳಿಗೆ ಶುಭಮನ್ ಗಿಲ್ ಅವರಿಗೆ ಪಟ್ಟಕಟ್ಟುವುದು ಇಷ್ಟವಿಲ್ಲ ಎಂಬುದು ತಿಳಿದು ಬಂದಿದೆ.

ಬುಮ್ರಾ ಗಾಯದಿಂದ ಬಳಲುತ್ತಿದ್ದಾರೆ. ಇನ್ನು ಸತತ ಪಂದ್ಯಗಳನ್ನು ಆಡುವ ಹೊರ ಸಹ ಇವರ ಮೇಲಿದೆ. ಬುಮ್ರಾಗೆ ಇಂಗ್ಲೆಂಡ್ ವಿರುದ್ಧದ ಎಲ್ಲಾ 5 ಟೆಸ್ಟ್ ಪಂದ್ಯ ಆಡುವುದು ಕಷ್ಟ. ಹೀಗಾಗಿ ಇವರು ಸರಣಿಯ ಎಲ್ಲ ಪಂದ್ಯಗಳನ್ನು ಸಹ ಆಡಲು ಸಾಧ್ಯವಿಲ್ಲ. ಹೀಗಾಗಿ ಆಯ್ಕೆ ಸಮಿತಿ ಹಾಗೂ ಗೌತಮ್ ಗಂಭೀರ್ ಶುಭಮನ್ ಗಿಲ್ ಕಡೆ ನೋಡುತ್ತಿದೆ. ಇನ್ನು ಶುಭಮನ್ ಗಿಲ್ ಅವರನ್ನು ಭವಿಷ್ಯದ ನಾಯಕ ಎಂದೇ ಬಹಳಷ್ಟು ಜನರು ತಿಳಿಸಿದ್ದಾರೆ.
ಶುಭಮನ್ ಗಿಲ್ ನಾಯಕತ್ವ ವಹಿಸಿಕೊಂಡರೆ ನಾಲ್ಕನೇ ಕ್ರಮಾಂಕದಲ್ಲಿ ಆಡುವ ಸಾಧ್ಯತೆ ಹೆಚ್ಚಿದೆ. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಸಹ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಈ ಸ್ಥಾನದಲ್ಲಿ ಗಿಲ್ ಬ್ಯಾಟ್ ಮಾಡಬಹುದು ಎಂದು ಲೆಕ್ಕಾಚಾರ ಹಾಕಿಕೊಳ್ಳಲಾಗಿದೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications