For Quick Alerts
ALLOW NOTIFICATIONS  
For Daily Alerts
 

200ನೇ ಪಂದ್ಯದಲ್ಲಿ ಆಘಾತಕಾರಿ ಸೋಲು: ತಂಡದ ಪರ ನಿಂತ ನಾಯಕ ಹಾರ್ದಿಕ್ ಪಾಂಡ್ಯ ಹೇಳಿದ್ದಿಷ್ಟು

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಆಘಾತಕಾರಿ ಸೋಲು ಅನುಭವಿಸಿದೆ. ವೆಸ್ಟ್ ಇಂಡೀಸ್ ತಂಡ ನೀಡಿದ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭಿಕ ಹಿನ್ನಡೆ ಅನುಭವಿಸಿದರೂ ನಂತರ ಉತ್ತಮ ಚೇತರಿಕೆಯ ಭರವಸೆ ಮೂಡಿಸಿತು. ಆದರೆ ಅಗತ್ಯವಿದ್ದಾಗ ವಿಂಡೀಸ್ ಬೌಲರ್‌ಗಳು ವಿಕೆಟ್ ಪಡೆಯಲು ಯಶಸ್ವಿಯಾಗಿದ್ದು ಭಾರತ ತಂಡಕ್ಕೆ ಭಾರೀ ಹಿನ್ನಡೆ ಮೂಡಿಸಿತು. ಹೀಗಾಗಿ 4 ರನ್‌ಗಳ ಅಂತರದಿಂದ ಭಾರತ ಈ ಪಂದ್ಯದಲ್ಲಿ ಸೋಲು ಅನುಭವಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಟೀಮ್ ಇಂಡಿಯಾದ ನಾಯಕ ಹಾರ್ದಿಕ್ ಪಾಂಡ್ಯ ತಂಡದ ಪರವಾಗಿ ನಿಂತಿದ್ದು ನಾವು ಸರಿಯಾದ ದಿಕ್ಕಿನಲ್ಲಿಯೇ ಇದ್ದೆವು ಆದರೆ ಕೆಲವೊಂದು ಸಣ್ಣ ತಪ್ಪುಗಳಾದವು. ಯುವ ಆಟಗಾರರ ತಂಡ ತಪ್ಪುಗಳನ್ನು ಮಾಡುತ್ತದೆ ಎಂದು ಆಟಗಾರರ ಬೆಂಬಲಕ್ಕೆ ನಿಂತಿದ್ದಾರೆ.

India lost 1st t20: skipper Hardik Pandya backs India said A young team will make mistakes

"ರನ್‌ ಬೆನ್ನಟ್ಟುವಾಗ ನಾವು ಸರಿಯಾಗಿಯೇ ಸಾಗುತ್ತಿದ್ದೆವು. ಆದರೆ ಕೆಲವೊಂದು ಎಡವಟ್ಟುಗಳು ನಮಗೆ ದುಬಾರಿಯಾಯಿತು. ಆದರೆ ಅದು ಪರವಾಗಿಲ್ಲ" ಎಂದು ನಾಯಕ ಹಾರ್ದಿಕ್ ಪಾಂಡ್ಯ ಸಕಾರಾತ್ಮಕ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಈ ಪಂದ್ಯದಲ್ಲಿ ಭಾರತದ ಗೆಲುವಿಗೆ 150 ರನ್‌ಗಳ ಅಗತ್ಯವಿತ್ತು. ಆದರೆ ಟೀಮ್ ಇಂಡಿಯಾ 145 ರನ್‌ಗಳಿಗೆ ತನ್ನ ಹೋರಾಟವನ್ನು ಅಂತ್ಯಗೊಳಿಸಿದೆ.

ಇನ್ನು ಇದೇ ಸಂದರ್ಭದಲ್ಲಿ ಅವರು ತಂಡ ಮಾಡಿರುವ ತಪ್ಪನ್ನು ಸರಿಪಡಿಸುಕೊಳ್ಳುವ ಹುರುಪು ಹೊಂದಿದ್ದು ಆ ಮೂಲಕ ಮುಂದಿನ ಪಂದ್ಯಗಳಲ್ಲಿ ಹಿಡಿತ ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಇಲ್ಲಿ ನೀವು ವಿಕೆಟ್‌ಗಳನ್ನು ಕಲೆದುಕೊಂಡರೆ ರನ್ ಬೆನ್ನಟ್ಟುವುದು ಬಹಳ ಕಷ್ಟವಾಗುತ್ತದೆ. ನಾವು ಸತತವಾಗಿ ಒಂದೆರಡು ವಿಕೆಟ್‌ಗಳನ್ನು ಕಳೆದುಕೊಂಡೆವು ಅದು ನಮಗೆ ದುಬಾರಿಯಾಯಿತು" ಎಂದಿದ್ದಾರೆ.

ಇನ್ನು ಈ ಪಂದ್ಯದ ಮೂಲಕ ಟೀಮ್ ಇಂಡಿಯಾ ಟಿ20 ತಂಡಕ್ಕೆ ಪದಾರ್ಪಣೆ ಮಾಡಿದ ತಿಲಕ್ ವರ್ಮಾ ಹಾಗೂ ಮುಕೇಶ್ ಕುಮಾರ್ ಪ್ರದರ್ಶನಕ್ಕೆ ನಾಯಕ ಹಾರ್ದಿಕ್ ವಿಶೇಷ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಿಲಕ್ ವರ್ಮಾ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ್ದು ಮೊದಲ ಪಂದ್ಯದಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. 22 ಎಸೆತಗಳನ್ನು ಎದುರಿಸಿದ ಅವರು 39 ರನ್‌ಗಳನ್ನು ಬಾರಿಸಿ ಅಬ್ಬರಿಸಿದರು. ಈ ಇನ್ನಿಂಗ್ಸ್‌ನಲ್ಲಿ 3 ಸಿಕ್ಸರ್ ಬಾರಿಸಿದ ಅವರು ಎರಡು ಬೌಂಡರಿ ಸಿಡಿಸಿದರು.

ಮತ್ತೊಂದೆಡೆ ಮುಕೇಶ್ ಕುಮಾರ್ ಕಠಿಣ ಸಂದರ್ಭದಲ್ಲಿಯೂ ಭರವಸೆಯ ಬೌಲಿಂಗ್ ಪ್ರದರ್ಶನ ನೀಡಿ ಗಮನಸೆಳೆದಿದ್ದಾರೆ. "ಮುಕೇಶ್ ಅವರ ಆರಂಭ ಕೂಡ ಅದ್ಭುತವಾಗಿದೆ. ಇನ್ನು ತಿಲಕ್ ವರ್ಮಾ ನೀಡಿರುವ ಆರಂಭವನ್ನು ನೋಡಲು ಬಹಳ ಸಂತಸವಾಗುತ್ತದೆ" ಎಂದಿದ್ದಾರೆ ಹಾರ್ದಿಕ್ ಪಾಂಡ್ಯ.

ವೆಸ್ಟ್ ಇಂಡೀಸ್ ತಂಡ: ಕೈಲ್ ಮೇಯರ್ಸ್, ಬ್ರಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್ (ನಾಯಕ), ಜೇಸನ್ ಹೋಲ್ಡರ್, ರೊಮಾರಿಯೋ ಶೆಫರ್ಡ್, ಅಕೆಲ್ ಹೋಸೇನ್, ಅಲ್ಜಾರಿ ಜೋಸೆಫ್, ಒಬೆಡ್ ಮೆಕಾಯ್
ಬೆಂಚ್: ಶಾಯ್ ಹೋಪ್, ಒಶಾನೆ ಥಾಮಸ್, ಓಡಿಯನ್ ಸ್ಮಿತ್, ರೋಸ್ಟನ್ ಚೇಸ್

ಭಾರತ ತಂಡ: ಶುಬ್ಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಷದೀಪ್ ಸಿಂಗ್, ಮುಖೇಶ್ ಕುಮಾರ್
ಬೆಂಚ್: ಯಶಸ್ವಿ ಜೈಸ್ವಾಲ್, ಉಮ್ರಾನ್ ಮಲಿಕ್, ಅವೇಶ್ ಖಾನ್, ರವಿ ಬಿಷ್ಣೋಯ್

Story first published: Friday, August 4, 2023, 8:39 [IST]
Other articles published on Aug 4, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+