ಭಾರತ vs ಆಸ್ಟ್ರೇಲಿಯಾ: ಅಡಿಲೇಡ್ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ಹೊಸ ಕಾರಣ ಹೇಳಿದ ಅಖ್ತರ್

ಆಸ್ಟ್ರೇಲಿಯಾ ಹಾಗೂ ಭಾರತದ ನಡುವಿನ ಟೆಸ್ಟ್ ಸರಣಿ ವಿಶ್ವ ಕ್ರಿಕೆಟ್ ಅಭಿಮಾನಿಗಳನ್ನು ಸಾಕಷ್ಟು ಕುತೂಹಲ ಮೂಡಿಸುವಂತೆ ಮಾಡಿದೆ. ಅದಕ್ಕೆ ಪೂರಕವಾಗಿ ಮೊದಲ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದ್ದರೆ ಎರಡನೇ ಪಂದ್ಯವನ್ನು ಟೀಮ್ ಇಂಡಿಯಾ ಭರ್ಜರಿಯಾಗಿ ಗೆದ್ದು ಬೀಗಿತ್ತು. ಅಡಿಲೇಡ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಆಘಾತಕಾರಿಯಾಗಿ ಕಂಡ ಸೋಲಿನ ಬಗ್ಗೆ ಪಾಕಿಸ್ತಾನದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್ ವಿಶ್ಲೇಷಣೆಯನ್ನು ಮಾಡಿದ್ದು ಭಾರತದ ಸೋಲಿಗೆ ಕಾರಣವನ್ನು ವಿವರಿಸಿದ್ದಾರೆ.
ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಟೆಸ್ಟ್ ಸರಣಿಯ ಮೊದಲ ಪಂದ್ಯ ಅಡಿಲೇಡ್‌ನಲ್ಲಿ ಡೇ-ನೈಟ್ ಪಂದ್ಯವಾಗಿ ನಡೆದಿತ್ತು. ಈ ಪಂದ್ಯದಲ್ಲಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಸಾಧಾರಣ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಅದ್ಭುತವಾದ ಬೌಲಿಂಗ್ ದಾಳಿಯ ಪರಿಣಾಮವಾಗಿ ಆಸ್ಟ್ರೇಲಿಯಾ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ 53 ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಬ್ಯಾಟಿಂಗ್ ಸರದಿಯನ್ನು ಅಂತ್ಯಗೊಳಿಸುವ ಮೂಲಕ ಎದುರಾಳಿ ಆಸ್ಟ್ರೇಲಿಯಾಗೆ ಸುಲಭ ತುತ್ತಾಯಿತು. ಈ ಪಂದ್ಯವನ್ನು ಆಸಿಸ್ ಪಡೆ 2 ವಿಕೆಟ್ ಕಳೆದುಕೊಂಡು ಗೆದ್ದಿತ್ತು.
ಈ ಪಂದ್ಯದ ಬಗ್ಗೆ ಶೋಯೆಬ್ ಅಖ್ತರ್ ಮಾತನಾಡಿದ್ದಾರೆ. ತನಗೆ ಕ್ರಿಕೆಟ್‌ನ ಬಗ್ಗೆ ಅರಿವು ಬಂದಾದ ಬಳಿಕ ಆಸ್ಟ್ರೇಲಿಯಾ ತಂಡದ ಅತ್ಯಂತ ದುರ್ಬಲ ಬ್ಯಾಟಿಂಗ್ ವಿಭಾಗ ಇದಾಗಿದೆ ಎಂದು ಅಕ್ತರ್ ಅಭಿಪ್ರಾಯಪಟ್ಟಿದ್ದಾರೆ. ಆಸ್ಟ್ರೇಲಿಯಾದ ಬೌಲಿಂಗ್ ವಿಭಾಗ ಉತ್ತಮವಾಗಿದೆ ಆದರೆ ಮೊದಲ ಟೆಸ್ಟ್ ಪಂದ್ಯದ ಗೆಲುವಿಗೆ ಅದು ಕಾರಣವಲ್ಲ ಎಂದು ಅಖ್ತರ್ ಹೇಳಿದ್ದಾರೆ.
"ನಾನು ಯಾವುದೇ ತಂಡದ ಪರವಹಿಸಿ ಮಾತನಾಡುತ್ತಿಲ್ಲ. ಆಸ್ಟ್ರೇಲಿಯಾ ತಂಡ ಕಂಡ ಅತ್ಯಂತ ದುರ್ಬಲವಾದ ಬ್ಯಾಟಿಂಗ್ ವಿಭಾಗ ಇದಾಗಿದೆ. ಈ ತಂಡ ಅತ್ಯಂತ ಅಶಕ್ತವಾದ ಹಾಗೂ ಅತ್ಯಂತ ದುರ್ಬಲವಾಗಿದೆ. ನೀವು ಸ್ಮಿತ್ ಅವರನ್ನು ಹೊರತು ಪಡಿಸಿನೊಡಿದರು ನಾನು ಕಂಡಂತೆ ಆಸ್ಟ್ರೇಲಿಯಾ ತಂಡದ ದುರ್ಬಲ ಬ್ಯಾಟಿಂಗ್ ಪಡೆ ಇದಾಗಿದೆ" ಎಂದು ಅಖ್ತರ್ ಹೇಳಿದ್ದಾರೆ.
"ಅವರ ಬೌಲಿಂಗ್ ಉತ್ತಮವಾಗಿದೆ. ಆದರೆ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಮೊದಲ ಪಂದ್ಯದಲ್ಲಿ ಸೋಲಲು ಕಾರಣವೇನೆಂದು ನನ್ನಲ್ಲಿ ಕೇಳಿದರೆ ಅದಕ್ಕೆ ಉತ್ತರ ಪಿಂಕ್ ಬಾಲ್. ಪಿಂಕ್ ಚೆಂಡಿನ ಕಾರಣದಿಂದಾಗಿ ಭಾರತ ಮೊದಲ ಪಂದ್ಯದಲ್ಲಿ ಸೋಲು ಕಂಡಿದೆ" ಎಂದು ಶೋಯೆಬ್ ಅಖ್ತರ್ ಅಡಿಲೇಡ್ ಟೆಸ್ಟ್‌ನಲ್ಲಿ ಭಾರತದ ಸೋಲಿಗೆ ಕಾರಣವನ್ನು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications