IND vs BAN: ಬಾಂಗ್ಲಾ ವಿರುದ್ಧ ಏಕದಿನ ಸರಣಿ ಸೋಲು; ಧೋನಿಯ ಅನಗತ್ಯ ದಾಖಲೆ ಸರಿಗಟ್ಟಿದ ರೋಹಿತ್

ಬುಧವಾರ, ಡಿಸೆಂಬರ್ 7ರಂದು ಬಾಂಗ್ಲಾದೇಶ ವಿರುದ್ಧ ಎರಡನೇ ಏಕದಿನ ಪಂದ್ಯವನ್ನು 5 ರನ್‌ಗಳಿಂದ ಸೋಲುವ ಮೂಲಕ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಸೋತ ನಂತರ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅನಗತ್ಯ ದಾಖಲೆಯನ್ನು ಸರಿಗಟ್ಟಿದರು.
ಭಾರತ ಮಾಜಿ ನಾಯಕ ಎಂಎಸ್ ಧೋನಿ ನಂತರ ರೋಹಿತ್ ಶರ್ಮಾ ಅವರು ತವರಿನ ಹೊರಗೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯನ್ನು ಸೋತ ಎರಡನೇ ಭಾರತೀಯ ನಾಯಕರೆನಿಸಿಕೊಂಡರು.
ಢಾಕಾದಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಗಾಯದ ನಡುವೆಯೂ ವೀರೋಚಿತ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ ಭಾರತ 272 ರನ್ ಚೇಸ್ ಮಾಡಲು ವಿಫಲವಾಯಿತು. ಮೊಹಮ್ಮದ್ ಸಿರಾಜ್ ಕೊನೆಯ ಓವರ್‌ಗಳಲ್ಲಿ ರನ್ ಗಳಿಸಲು ಪರದಾಡಿದ್ದು, ಭಾರತದ ಸೋಲಿಗೆ ಕಾರಣವಾಯಿತು.

ಕೈಬೆರಳಿಗೆ ಗಾಯ ಮಾಡಿಕೊಂಡ ನಾಯಕ ರೋಹಿತ್ ಶರ್ಮಾ
ಪಂದ್ಯದ ಮೊದಲ ಇನ್ನಿಂಗ್ಸ್‌ನ ಆರಂಭದಲ್ಲಿ ಗಾಯಗೊಂಡಿದ್ದ ನಾಯಕ ರೋಹಿತ್ ಶರ್ಮಾ, ಬೆರಳಿಗೆ ಬ್ಯಾಂಡೇಜ್ ಕಟ್ಟಿಸಿಕೊಂಡು 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದರು. ಭಾರತೀಯ ನಾಯಕ 28 ಎಸೆತಗಳನ್ನು ಎದುರಿಸಿ 51 ರನ್‌ಗಳ ಅದ್ಭುತ ಪ್ರದರ್ಶನ ನೀಡಿದರು. ಆದರೆ ಭಾರತವು ಅಂತಿಮವಾಗಿ ಕೇವಲ 5 ರನ್‌ಗಳಿಂದ ಸೋತಿತು.
ಈ ಸೋಲಿನೊಂದಿಗೆ ಎಂಎಸ್ ಧೋನಿ ನಂತರ ರೋಹಿತ್ ಶರ್ಮಾ ದೇಶದ ಹೊರಗೆ ಸರಣಿಯನ್ನು ಸೋತ ಎರಡನೇ ನಾಯಕರೆನಿಸಿಕೊಂಡರು. ಈ ಹಿಂದೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಸುರೇಶ್ ರೈನಾ ಏಕದಿನ ಸರಣಿ ಗೆಲುವಿನೊಂದಿಗೆ ಮರಳಿದ್ದರು.

2015ರಲ್ಲಿ ಧೋನಿ ನಾಯಕತ್ವದ ಭಾರತ ತಂಡ ಸರಣಿ ಸೋತಿತ್ತು
2015ರಲ್ಲಿ ಎಂಎಸ್ ಧೋನಿ ನಾಯಕತ್ವದ ಭಾರತ ತಂಡ 1-2 ಅಂತರದಿಂದ ಬಾಂಗ್ಲಾದೇಶ ವಿರುದ್ಧ ಅವರದೆ ನೆಲದಲ್ಲಿ ಸೋತ ನಂತರ ಇದು ಮೊದಲ ಬಾರಿಯಾಗಿದೆ.
ಏಳು ವರ್ಷಗಳ ನಂತರ 2022ರಲ್ಲಿ ಭಾರತವು ಮೊದಲ ಬಾರಿಗೆ ಬಾಂಗ್ಲಾದೇಶಕ್ಕೆ ಏಕದಿನ ದ್ವಿಪಕ್ಷೀಯ ಸರಣಿಯನ್ನಾಡಲು ಆಡಲು ಪ್ರವಾಸ ಕೈಗೊಂಡಿದೆ ಮತ್ತು ಸರಣಿಯ ಮೊದಲ ಎರಡು ಪಂದ್ಯಗಳನ್ನು ಸೋತು ಸರಣಿ ಕೈಚೆಲ್ಲಿದೆ.
ಎರಡೂ ಪಂದ್ಯಗಳಲ್ಲಿ ಆಲ್‌ರೌಂಡರ್ ಮೆಹಿದಿ ಹಸನ್ ಮಿರಾಜ್ ಬಾಂಗ್ಲಾದೇಶ ತಂಡಕ್ಕೆ ನಿರ್ಣಾಯಕ ರನ್ ಗಳಿಸುವ ಮೂಲಕ ಬಾಂಗ್ಲಾದೇಶದ ಹೀರೋ ಆಗಿ ಹೊರಹೊಮ್ಮಿದ್ದಾರೆ. ಎರಡನೇ ಪಂದ್ಯದಲ್ಲೂ ಮೆಹಿದಿ ಹಸನ್ ಮಿರಾಜ್ ಅದ್ಭುತ ಶತಕ ಬಾರಿಸಿ, ಬಾಂಗ್ಲಾದೇಶವನ್ನು 271/7ಕ್ಕೆ ಮೇಲೆತ್ತಿ ಗೆಲುವಿನ ರೂವಾರಿಯಾದರು.

ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಉತ್ತಮ ಬ್ಯಾಟಿಂಗ್
ಪ್ರತ್ಯುತ್ತರವಾಗಿ ಭಾರತ ತಂಡ ತಮ್ಮ ಅಗ್ರ ಬ್ಯಾಟರ್‌ಗಳಾದ ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕಳಪೆಯಾಗಿ ಔಟಾದರು. ಆದರೆ ಶ್ರೇಯಸ್ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಬಾಂಗ್ಲಾ ಬೌಲರ್‌ಗಳಿಗೆ ಪ್ರತಿರೋಧ ಒಡ್ಡಿದರು.
ಬಾಂಗ್ಲಾದೇಶದ ಸ್ಪಿನ್ ದಾಳಿಯ ವಿರುದ್ಧ ಶ್ರೇಯಸ್ ಅಯ್ಯರ್ ಭಾರತದ ಅತ್ಯುತ್ತಮ ಬ್ಯಾಟರ್ ಆಗಿ ಕಂಡುಬಂದರು. ಕೊನೆಯಲ್ಲಿ ರೋಹಿತ್ ಶರ್ಮಾ ಮೈದಾನಕ್ಕೆ ಪ್ರವೇಶಿಸುವ ಮೊದಲು ಉತ್ತಮ ಬ್ಯಾಟಿಂಗ್ ಮಾಡಿ ಔಟಾದರು.

48ನೇ ಓವರ್‌ನಲ್ಲಿ ಒಂದೂ ರನ್ ಗಳಿಸಲು ವಿಫಲವಾದ ಸಿರಾಜ್
ಅಂತಿಮ ಓವರ್‌ಗಳಲ್ಲಿ ರೋಹಿತ್ ಶರ್ಮಾ ಕೆಲವು ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ಭಾರತದ ಗೆಲುವಿನ ಆಸೆಯನ್ನು ಚಿಗುರೊಡೆಸಿದ್ದರು. ಆದರೆ ಮೊಹಮ್ಮದ್ ಸಿರಾಜ್ 48ನೇ ಓವರ್‌ನಲ್ಲಿ ಒಂದೂ ರನ್ ಗಳಿಸಲು ವಿಫಲರಾದರು. ಇದು ಭಾರತದ ಗೆಲುವಿಗೆ ಮುಳುವಾಯಿತು. ಕೊನೆಯ ಓವರ್‌ನಲ್ಲಿ 20 ರನ್ ಬೇಕಿದ್ದಾಗ ರೋಹಿತ್ ಶರ್ಮಾ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡ 14 ರನ್ ಗಳಿಸಿದರು ಮತ್ತು 5 ರನ್‌ಗಳಿಂದ ಸೋಲನುಭವಿಸಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications