For Quick Alerts
ALLOW NOTIFICATIONS  
For Daily Alerts
 

Yuvraj Singh: ವಿಂಡೀಸ್ ಪ್ಲೇಯರ್‌, ಯುವರಾಜ್‌ ನಡುವೆ ವಾಗ್ವಾದ: ವಿಡಿಯೋ ವೈರಲ್‌

ಭಾನುವಾರ ಮುಂಬೈನಲ್ಲಿ ಮೊದಲ ಆವೃತ್ತಿಯ ಇಂಟರ್‌ನ್ಯಾಷನಲ್‌ ಮಾಸ್ಟರ್ಸ್‌ ಲೀಗ್ ಮುಕ್ತಾಯ ಗೊಂಡಿದೆ. ಈ ಲೀಗ್‌ನ ಫೈನಲ್‌ನಲ್ಲಿ ಇಂಡಿಯಾ ಮಾಸ್ಟರ್ಸ್‌ ಹಾಗೂ ವೆಸ್ಟ್‌ ಇಂಡೀಸ್ ಮಾಸ್ಟರ್ಸ್ ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಿದವು. ಈ ಪಂದ್ಯವನ್ನು ಆತಿಥೇಯ ಇಂಡಿಯಾ ಮಾಸ್ಟರ್ಸ್‌ 6 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಈ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು ಯುವರಾಜ್‌ ಸಿಂಗ್ ಹಾಗೂ ಟಿನೋ ವೆಸ್ಟ್ ನಡುವಿನ ವಾಗ್ದಾದ.

ಫೈನಲ್‌ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನೀಡಿದ್ದ 149 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಇಂಡಿಯಾ ಮಾಸ್ಟರ್ಸ್‌ ಅಮೋಘ ಪ್ರದರ್ಶನ ನೀಡಿ ಜಯ ಸಾಧಿಸಿತು. ಪಂದ್ಯದ ವೇಳೆ ಯುವರಾಜ್ ಸಿಂಗ್ ವೆಸ್ಟ್ ಇಂಡೀಸ್ ಮಾಸ್ಟರ್ಸ್ ನ ಟಿನೋ ವೆಸ್ಟ್ ಜೊತೆ ತೀವ್ರ ವಾಗ್ವಾದ ನಡೆಸಿದ್ದು, ಈಗ ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

India Masters Clinch International Masters League 2025 Title Yuvraj Singh-Tino West Clash Goes Viral

ಆಗಿದ್ದೇನು?

ಟಾಸ್‌ ಗೆದ್ದ ವೆಸ್ಟ್‌ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಈ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 148 ರನ್‌ ಸೇರಿಸಿತು. ಈ ವೇಳೆ ಸ್ಟಾರ್ ಆಟಗಾರರು ತಂಡಕ್ಕೆ ಆಧಾರವಾಗಲಿಲ್ಲ. ಡ್ವೇನ್‌ ಸ್ಮಿತ್‌ 45, ಲೆಂಡ್ಲೆ ಸಿಮನ್ಸ್‌ ಅಜಯ 57 ರನ್‌ ಗಳ ಇನಿಂಗ್ಸ್‌ ತಂಡಕ್ಕೆ ನೆರವಾಯಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ ಉತ್ತಮ ಆರಂಭವನ್ನು ಪಡೆಯಿತು. ಅಂಬಟಿ ರಾಯುಡು ಹಾಗೂ ಸಚಿನ್ ತೆಂಡೂಲ್ಕರ್ ಜೋಡಿ ಮೊದಲ ವಿಕೆಟ್‌ಗೆ 67 ರನ್‌ ಸೇರಿಸಿತು. ಸಚಿನ್ 25 ರನ್‌ಗಳಿಗೆ ಔಟ್ ಆದರು. ಗುರಿಯನ್ನು ಬೆನ್ನಟ್ಟುವಾಗ, ಇಂಡಿಯಾ ಮಾಸ್ಟರ್ಸ್ ತಂಡವು ಉತ್ತಮ ಸ್ಥಿತಿಯಲ್ಲಿ ಕಾಣುತ್ತಿತ್ತು ಮತ್ತು 13 ನೇ ಓವರ್‌ನಲ್ಲಿ, ಅಂಬಟಿ ರಾಯುಡು ಮತ್ತು ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು.

13ನೇ ಓವರ್‌ನಲ್ಲಿ ಯುವರಾಜ್, ಟಿನೋ ವೆಸ್ಟ್ ಜೊತೆ ವಾದಕ್ಕಿಳಿದರು. ಇಬ್ಬರೂ ಆಟಗಾರರು ದಏರು ಧ್ವನಿಯಲ್ಲಿ ಮಾತನಾಡುತ್ತಿರುವುದು ಕಂಡು ಬಂದಿತು. ಈ ವೇಳೆ ರಾಯುಡು ಪರಿಸ್ಥಿತಿಯನ್ನು ತಿಳಿಗೊಳಿಸಲು ಯುವರಾಜ್‌ ಸಿಂಗ್ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಲು ಸಿದ್ಧರಾದರು. ಆದ್ರೆ ವಿಂಡೀಸ್‌ ಪ್ಲೇಯರ್‌ ಸುಮ್ಮನಾಗುವ ಮನಸ್ಸು ಮಾಡಲೇ ಇಲ್ಲ. ಕೋಪದಿಂದ ಟಿನೋ ವೆಸ್ಟ್ ಯುವಿಗೆ ಏನೋ ಹೇಳುತ್ತಲೇ ಇದ್ದರು. ಈ ವೇಳೆ ಅಂಪೈರ್ ಹಾಗೂ ಇತರೇ ಆಟಗಾರರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿ ಗೊಳಿಸಿದರು. ಈ ದೃಷ್ಯದ ಬಳಿಕ ಯುವಿ ಮತ್ತು ವಿಂಡೀಸ್ ಪ್ಲೇಯರ್ ಪರಸ್ಪರ ಮಾತನಾಡುತ್ತಾ ಸಮಸ್ಯೆಯನ್ನು ಬಗೆಹರಿಸಿಕೊಳ್ಳುತ್ತಿರುವುದು ಕಂಡುಬಂದಿತು.

ಈ ಪಂದ್ಯದಲ್ಲಿ ಕ್ರಿಕೆಟನ ದೇವರು ಎಂದೇ ಖ್ಯಾತಿ ಪಡೆದಿರುವ ಸಚಿನ್ ತೆಂಡೂಲ್ಕರ್ ಅವರು ತಮ್ಮ ಅಭಿಮಾನಿಗಳಿಗೆ ಹಬ್ಬದೂಟವನ್ನು ಹಾಕಿದರು. ತಮ್ಮ ಸಿಗ್ನೇಚರ್ ಶಾಟ್‌ಅಪ್ಪರ್‌ಕಟ್ ಬಾರಿಸಿದರು. ಹಳೆಯ ರೀತಿಯಲ್ಲೇ ಬ್ಯಾಟ್ ಮಾಡಿದ ಸಚಿನ್ 18 ಎಸೆತಗಳಲ್ಲಿ 25 ರನ್ ಗಳಿಸಿದರು. 2003 ರ ವಿಶ್ವಕಪ್‌ನಲ್ಲಿ ಅಖ್ತರ್‌ಗೆ ಸಚಿನ್ ಬಾರಿಸಿದ ಸಿಕ್ಸರ್ ಅನ್ನು ಅಭಿಮಾನಿಗಳಿಗೆ ನೆನಪಿಸಿಕೊಂಡರು.

Story first published: Monday, March 17, 2025, 11:01 [IST]
Other articles published on Mar 17, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+