Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡಿಯನ್ ಓಪನ್ ಗೆದ್ದ 'ಸೂಪರ್' ಸಿಂಧು ಹೊಗಳಿದ ಸಚಿನ್!

ನವದೆಹಲಿ, ಏಪ್ರಿಲ್ 02: ನಂ.1 ಬಾಡ್ಮಿಂಟನ್ ಆಟಗಾರ್ತಿ ಕರೋಲಿನಾ ಮರಿನ್ ವಿರುದ್ಧ ಅದ್ಭುತ ಆಟವಾಡಿ ಇಂಡಿಯನ್ ಓಪನ್ ಸೂಪರ್ ಸೀರಿಸ್ ಗೆದ್ದ 'ಸೂಪರ್' ಸಿಂಧುಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ.

ಟ್ವಿಟ್ಟರ್ ನಲ್ಲಿ ವಿಶ್ ಮಾಡಿದವರಲ್ಲಿ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ, ವೀರೇಂದ್ರ ಸೆಹ್ವಾಗ್, ಜ್ವಾಲಾ ಗುಟ್ಟಾ ಮೊದಲಿಗರು. ಸಿಂಧು ಅವರ ಬಗ್ಗೆ ಬಂದಿರುವ ಪ್ರಶಂಸೆಯ ಮಾತುಗಳು ಇಲ್ಲಿವೆ...

ರಿಯೋ ಒಲಿಂಪಿಕ್ಸ್ ನಲ್ಲಿ ಅಂತಿಮ ಹಣಾಹಣಿಯಲ್ಲಿ ಸ್ಪೇನಿನ ಕರೋಲಿನ್ ಮರೀನ್ ಅವರು ಗೆಲುವು ಸಾಧಿಸಿದ್ದರು. ಸಿಂಧು ಅವರು ಬೆಳ್ಳಿಗೆ ತೃಪ್ತಿ ಪಟ್ಟಿದ್ದರು. ಈಗ ಇಂಡಿಯನ್ ಓಪನ್ ಸೂಪರ್ ಸೀರಿಸ್ ನಲ್ಲಿ ಗೆಲುವು ಸಾಧಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಸಿರಿ ಫೋರ್ಟ್ ಆಡಿಟೋರಿಯಂನಲ್ಲಿ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ಸಿಂಧು ಅವರು 21-19, 21-16ರಲ್ಲಿ ಮರಿನ್ ರನ್ನು ಸೋಲಿಸಿ ಚೊಚ್ಚಲ ಪ್ರಶಸ್ತಿಗೆ ಮುತ್ತಿಟ್ಟರು.[ಮರಿನ್ ವಿರುದ್ಧ ಸೇಡು ತೀರಿಕೊಂಡ ಸಿಂಧು]

ಒಟ್ಟಾರೆ, ವಿಶ್ವದ ನಂ 1 ಆಟಗಾರ್ತಿ ಮರಿನ್ ಹಾಗೂ ವಿಶ್ವದ ನಂ 5ನೇ ಆಟಗಾರ್ತಿ ಪಿವಿ ಸಿಂಧು ನಡುವಿನ ಬಲಾಬಲ ಸದ್ಯಕ್ಕೆ 5-4ರಂತೆ ಇದೆ.

ಪಿವಿ ಸಿಂಧು ಸೂಪರ್

ಪಿವಿ ಸಿಂಧು ಸೂಪರ್

ಚೀನಾ ಓಪನ್ ಸೀರಿಸ್, ಹಾಂಕಾಂಗ್ ಓಪನ್ ಫೈನಲ್, ಪ್ರೀಮಿಯರ್ ಬಾಡ್ಮಿಂಟನ್ ಲೀಗ್ (ಪಿಬಿಎಲ್) ನಲ್ಲಿ ಚೆನ್ನೈ ಸ್ಮಾಶರ್ಸ್ ಗೆ ಕಪ್ ಗೆಲ್ಲಿಸಿದರು. ಸೈಯದ್ ಮೋದಿ ಇಂಟರ್ ನ್ಯಾಷನಲ್ ಗ್ರಾನ್ ಪ್ರೀಯಲ್ಲಿ ಜಯದೊಂದಿಗೆ ವರ್ಷಾರಂಭ ಮಾಡಿದ ಸಿಂಧು ಈಗ ಚೊಚ್ಚಲ ಬಾರಿಗೆ ಇಂಡಿಯನ್ ಓಪನ್ ಸೀರಿಸ್ ಫೈನಲ್ ತಲುಪಿ, ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ.

ಸಚಿನ್ ತೆಂಡೂಲ್ಕರ್

ಕ್ರಿಕೆಟ್ ದಿಗ್ಗಜ, ರಾಜ್ಯಸಭಾ ಸದಸ್ಯ ಸಚಿನ್ ತೆಂಡೂಲ್ಕರ್ ಅವರು ಕ್ರಿಕೆಟ್ ಅಲ್ಲದೆ ಇತರೆ ಕ್ರೀಡೆಗಳಿಗೂ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಪಿವಿ ಸಿಂಧು ಅವರ ಆಟವನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ.

ಕ್ರಿಕೆಟ್ ಕೋಚ್ ಅನಿಲ್ ಕುಂಬ್ಳೆ

ಕ್ರಿಕೆಟ್ ದಿಗ್ಗಜ, ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರು ಟ್ವೀಟ್ ಮಾಡಿ, ಅದ್ಭುತ ಗೆಲುವು, ಇನ್ನೂ ಹೆಚ್ಚಿನ ಸಾಧನೆ ನಿಮ್ಮಿಂದ ಬರಲಿ ಎಂದು ಹಾರೈಸಿದ್ದಾರೆ.

ವಸುಂಧರಾ ರಾಜೆರಿಂದ ಟ್ವೀಟ್

ಬಿಜೆಪಿ ನಾಯಕಿ ವಸುಂಧರಾ ರಾಜೆ ಅವರು ಟ್ವೀಟ್ ಮಾಡಿ, ಇನ್ನೂ ಹೆಚ್ಚಿನ ಶಕ್ತಿ ಸಿಗಲಿ, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಸಿಂಧು ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಸಿಂಧು ಐಕ್ಯತಾ ಸಂಕೇತ

ಕ್ರೀಡೆಯ ಮೂಲಕ ಹಿಂದೂ, ಕ್ರೈಸ್ತ, ಸಿಖ್, ಮುಸಲ್ಮಾನ ಎಲ್ಲರಲ್ಲೂ ಐಕ್ಯತೆ ಮೂಡಿಸುವ ಶಕ್ತಿ ಇದೆ. ಸಿಂಧು ಇದು ನಿಮ್ಮಿಂದ ಸಾಧ್ಯವಾಗಿದೆ ಎಂದು ಕ್ರಿಕೆಟ್ ಲೆಜೆಂಡ್ ಸೆಹ್ವಾಗ್

ಜ್ವಾಲಾ ಗುಟ್ಟಾರಿಂದ ಟ್ವೀಟ್

ಸಿಂಧು-ಬಿಂದು ಸೂಪರ್ ಆಟ, ಇನ್ನಷ್ಟು ಪ್ರಶಸ್ತಿಗಳು ಬರಲಿ ಎಂದ ಡಬ್ಬಲ್ಸ್ ತಾರೆ ಜ್ವಾಲಾ ಗುಟ್ಟಾ

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+