For Quick Alerts
ALLOW NOTIFICATIONS  
For Daily Alerts
 

ಬಾಂಗ್ಲಾದೇಶ ಪ್ರವಾಸದಿಂದ ಕೆಎಲ್ ರಾಹುಲ್ ಔಟ್

By Mahesh

ಕೋಲ್ಕತ್ತಾ,ಜೂ.07: ಕರ್ನಾಟಕದ ಪ್ರತಿಭಾವಂತ ಆರಂಭಿಕ ಬ್ಯಾಟ್ಸ್ ಮನ್ ಲೋಕೇಶ್ ರಾಹುಲ್ ಅವರಿಗೆ ಭಾರಿ ನಿರಾಶೆಯಾಗಿದೆ. ಆಸ್ಟ್ರೇಲಿಯಾ ಸರಣಿ ನಂತರ ಮತ್ತೊಮ್ಮೆ ಭಾರತ ಪರ ಟೆಸ್ಟ್ ಪಂದ್ಯವಾಡುವ ಅವಕಾಶ ಕೈತಪ್ಪಿ ಹೋಗಿದೆ. ಅನಾರೋಗ್ಯ ಪೀಡಿತರಾಗಿರುವ ರಾಹುಲ್ ಅವರು ಟೂರ್ನಿಯಿಂದಲೇ ಹೊರಬೀಳಬೇಕಾಗಿದೆ.

ಡೆಂಗ್ಯೂ ಜ್ವರದಿಂದ ಬಳಲುತ್ತಿರುವ ರಾಹುಲ್ ಅವರು ಇನ್ನೂ ಗುಣಮುಖರಾಗದ ಕಾರಣ ಬಾಂಗ್ಲಾದೇಶ ಪ್ರವಾಸದಿಂದ ಹೊರಗುಳಿಯಬೇಕಿದೆ ಎಂದು ಬಿಸಿಸಿಐ ಪ್ರಕಟಿಸಿದೆ. [ಭಾರತ ವಿರುದ್ಧದ ಟೆಸ್ಟ್ : ಬಾಂಗ್ಲಾ ತಂಡ]

23 ರ ಹರೆಯದ ಕೆಎಲ್ ರಾಹುಲ್ ಅವರು ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯದ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟಿದ್ದರು. ಜೂ.10 ರಿಂದ ಆರಂಭವಾಗಲಿರುವ ಬಾಂಗ್ಲಾದೇಶ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಆಡಲು ದೈಹಿಕವಾಗಿ ಅಸಮರ್ಥರಾಗಿದ್ದಾರೆ ಎಂದು ಫಿಟ್ನೆಸ್ ಟೆಸ್ಟ್ ವರದಿಯಿಂದ ತಿಳಿದು ಬಂದಿದೆ. ರಾಹುಲ್ ಬದಲಿ ಆಟಗಾರನನ್ನು ಇನ್ನೂ ಆಯ್ಕೆ ಮಾಡಲಾಗಿಲ್ಲ.

India opener KL Rahul ruled out of Bangladesh Test

"ಕೆಎಲ್ ರಾಹುಲ್ ಜ್ವರದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡದಲ್ಲಿ ಇರುವುದಿಲ್ಲ "ಎಂದು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಆಸ್ಟ್ರೇಲಿಯದ ಪ್ರವಾಸದ ವೇಳೆ ಮೆಲ್ಬೋರ್ನ್‌ನಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿರುವ ರಾಹುಲ್ ಸಿಡ್ನಿಯಲ್ಲಿ ನಡೆದಿದ್ದ ತನ್ನ ಎರಡನನೇಟೆಸ್ಟ್ ಪಂದ್ಯದಲ್ಲೇ ಚೊಚ್ಚಲ ಶತಕ (110 ರನ್) ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಟೆಸ್ಟ್ ತಂಡ ಸೋಮವಾರ ಕೋಲ್ಕತಾದಿಂದ ಢಾಕಾಕ್ಕೆ ಪ್ರಯಾಣ ಬೆಳೆಸಲಿದೆ. ಬಾಂಗ್ಲಾದ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಜೂ.10ರಂದು ಆರಂಭಗೊಳ್ಳಲಿದೆ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. (ಪಿಟಿಐ)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+