For Quick Alerts
ALLOW NOTIFICATIONS  
For Daily Alerts
 

ಭಾರತ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಬಾಂಗ್ಲಾ ತಂಡ ಪ್ರಕಟ

By Mahesh

ಢಾಕಾ, ಜೂ.3: ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿರುವ ಭಾರತದ ವಿರುದ್ಧ ಸೆಣಸಲು ಬಾಂಗ್ಲಾದೇಶ ತಂಡವನ್ನು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಬುಧವಾರ ಪ್ರಕಟಿಸಿದೆ. ಗಾಯಗೊಂಡಿರುವ ವೇಗಿ ಷಹದಾತ್ ಹುಸೇನ್ ಅವರನ್ನು ತಂಡದಿಂದ ಕೈಬಿಡಲಾಗಿದೆ.

ವೇಗಿ ಹುಸೇನ್ ಹೊರತು ಪಡಿಸಿದರೆ ಇತ್ತೀಚೆಗೆ ಪಾಕಿಸ್ತಾನದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ತಂಡವನ್ನೇ ಬಹುತೇಕ ಉಳಿಸಿಕೊಳ್ಳಲಾಗಿದೆ ಎಂದು bdnews24.com ವರದಿ ಮಾಡಿದೆ. 14 ಮಂದಿ ಸದಸ್ಯರ ತಂಡಕ್ಕೆ ಮುಷಿಫಿಕರ್ ರಹೀಂ ನಾಯಕರಾಗಿದ್ದಾರೆ. [ಬಾಂಗ್ಲಾ ಪ್ರವಾಸಕ್ಕೆ ಭಾರತ ತಂಡ]

ಜೂ.6ರಂದು ತಂಡದ ಪ್ರತಿ ಆಟಗಾರರ ದೈಹಿಕ ಪರೀಕ್ಷೆ ಕೈಗೊಂಡು ಫಲಿತಾಂಶ ಪರೀಕ್ಷಿಸಲಾಗುತ್ತದೆ. ಜೂ.7ರಂದು ತಂಡ ಬಾಂಗ್ಲಾದೇಶಕ್ಕೆ ತೆರಳಲಿದೆ. ಬಾಂಗ್ಲಾದೇಶದಲ್ಲಿ ಒಂದು ಟೆಸ್ಟ್ ಪಂದ್ಯ ಹಾಗೂ ಮೂರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳನ್ನು ಟೀಂ ಇಂಡಿಯಾ ಆಡಲಿದೆ. [ಬಾಂಗ್ಲಾ ಪ್ರವಾಸ ವೇಳಾಪಟ್ಟಿ]

Bangladesh announce squad for India Test

ಜೂ.10ರಂದು ಫಾತುಲ್ಲಾ ಮೈದಾನದಲ್ಲಿ ಏಕೈಕ ಟೆಸ್ಟ್ ಪಂದ್ಯವನ್ನಾಡಲಿದೆ.ಜೂನ್ ತಿಂಗಳಿನಲ್ಲಿ ಮುಂಗಾರು ಮಳೆ ಅಬ್ಬರ ಶುರುವಾಗುವುದರಿಂದ ಏಕದಿನ ಕ್ರಿಕೆಟ್ ಪಂದ್ಯಗಳಿಗೆ ರಿಸರ್ವ್ ಡೇ ಕಾಯ್ದಿರಿಸಲಾಗಿದೆ. [ಬಾಂಗ್ಲಾ ಟೂರ್ ನಂತರ ಭಾರತಕ್ಕೆ ಬಿಗಿ ವೇಳಾಪಟ್ಟಿ]

ಮಾಜಿ ಕ್ರಿಕೆಟ್ ನಾಯಕ ರವಿಶಾಸ್ತ್ರಿ ಅವರನ್ನು ಟೀಂ ಇಂಡಿಯಾದ ಮಧ್ಯಂತರ ಕೋಚ್ ಆಗಿ ನೇಮಕಗೊಂಡಿದ್ದಾರೆ. ಬೌಲಿಂಗ್ ಕೋಚ್ ಆಗಿದ್ದ ಭರತ್ ಅರುಣ್ ಅವರು ಕರ್ತವ್ಯದಲ್ಲಿ ಮುಂದುವರೆಯಲಿದ್ದಾರೆ. ರಾಮಕೃಷ್ಣ ಶ್ರೀಧರ್ ಅವರು ಫೀಲ್ಡಿಂಗ್ ಕೋಚ್ ಆಗಿ ತಂಡದ ಜೊತೆ ತೆರಳಲಿದ್ದಾರೆ. [ಅತ್ಯಾಚಾರ ಆರೋಪದಿಂದ ಮುಕ್ತನಾದ ಬಾಂಗ್ಲಾ ಕ್ರಿಕೆಟರ್]

ಬಾಂಗ್ಲಾದೇಶ ಟೆಸ್ಟ್ ತಂಡ: ಮುಷ್ಫಿಕರ್ ರಹೀಂ (ನಾಯಕ ಹಾಗೂ ವಿಕೆಟ್ ಕೀಪರ್), ತಮೀಮ್ ಇಕ್ಬಾಲ್, ಇಮ್ರುಲ್ ಕೇಯ್ಸ್, ಮೊಮಿನುಲ್ ಹಕ್, ಮುಮುದುಲ್ಲಾ, ಶಕೀಬ್ ಅಲ್ ಹಸನ್, ಸೌಮ್ಯ ಸರ್ಕಾರ್, ಶುವಗತ ಹೊಮ್ ಚೌಧರಿ, ಲಿಟ್ಟನ್ ದಾಸ್, ರೈಜುಲ್ ಇಸ್ಲಾಂ, ಜುಬೈರ್ ಹುಸೇನ್, ರುಬೇಲ್ ಹುಸೇನ್, ಅಬುಲ್ ಹಸನ್ ಹಾಗೂ ಮೊಹಮ್ಮದ್ ಶಹೀದ್(ಐಎಎನ್ಎಸ್)

Story first published: Wednesday, January 3, 2018, 10:03 [IST]
Other articles published on Jan 3, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+