ಮುಂದುವರೆದ ಧೋನಿ ಪಡೆ ಪೆವಿಲಿಯನ್ ಓಟ
ಬೆಂಗಳೂರು, ಆ.16 : ಭಾರತ ತಂಡದ ಬ್ಯಾಟಿಂಗ್ ವೈಫಲ್ಯ ಅಂತಿಮ ಟೆಸ್ಟ್‌ನಲ್ಲೂ ಮುಂದುವರೆದಿದೆ. ಶುಕ್ರವಾರ ಆರಂಭವಾದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಬಳಗ 148 ರನ್‌ಗಳಿಗೆ ಆಲೌಟಾಯಿತು. ಪಂದ್ಯ ಆರಂಭವಾದ ಮೊದಲ ದಿನದಲ್ಲಿಯೇ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪೆರೇಡ್ ನಡೆಸಿದರು.
ಲಂಡನ್‌ನ ದಿ ಓವಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಅಂತಿಮ ಟೆಸ್ಟ್ ಆರಂಭವಾಗಿದೆ. ಟಾಸ್ ಗೆದ್ದ ಇಂಗ್ಲೆಂಡ್ ನಾಯಕ ಅಲಸ್ಟೇರ್ ಕುಕ್ ಫೀಲ್ಡಿಂಗ್ ಆಯ್ದುಕೊಂಡರು. ಇಂಗ್ಲೆಂಡ್ ಬೌಲರ್‌ಗಳ ದಾಳಿಗೆ ಪ್ರತ್ಯುತ್ತರ ನೀಡಿದ ಭಾರತದ ಬ್ಯಾಟ್ಸ್‌ಮನ್‌ಗಳು ಮೊದಲ ದಿನದಾಟ ಮುಗಿಯುವ ಮೊದಲೇ 148 ರನ್‌ಗಳಿಗೆ ಆಲೌಟಾದರು.

ಭಾರತದ 148 ರನ್‌ಗಳ ಪೈಕಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ 82 ರನ್‌ಗಳು ಸೇರಿವೆ. 140 ಎಸೆತದಲ್ಲಿ 15 ಬೌಂಡರಿ ಮತ್ತು , 1 ಸಿಕ್ಸರ್ ಸಿಡಿಸಿದ ಧೋನಿ, ಅಲ್ಪಮೊತ್ತಕ್ಕೆ ಭಾರತ ಆಲ್‌ಔಟ್ ಆಗುವುದನ್ನು ತಪ್ಪಿಸಿದರು. ಆದರೆ, ಧೋನಿ ಅವರ ಏಕಾಂಗಿ ಹೋರಾಟಕ್ಕೆ ಉಳಿದ ಬ್ಯಾಟ್‌ಮನ್‌ಗಳು ಬೆಂಬಲವಾಗಿ ನಿಲ್ಲಲಿಲ್ಲ. [ಲೈವ್ ಸ್ಕೋರ್ ಪಡೆಯಲು ಕ್ಲಿಕ್ ಮಾಡಿ]
ಇಂಗ್ಲೆಂಡ್ ತಂಡದ ಪರ ಕ್ರಿಸ್ ಜೋರ್ಡಾನ್ (32ಕ್ಕೆ 3), ಕ್ರಿಸ್ ವೋಕ್ಸ್ (30ಕ್ಕೆ 3), ಸ್ಟುವರ್ಟ್ ಬ್ರಾಡ್ (27ಕ್ಕೆ 2) ಮತ್ತು ಜೇಮ್ಸ್ ಆ್ಯಂಡರ್‌ಸನ್ (51ಕ್ಕೆ 2) ವಿಕೆಟ್ ಪಡೆದು ಭಾರತದ ಬ್ಯಾಟ್ಸ್‌ಮನ್ ಗಳನ್ನು ಕಾಡಿದರು. ಮೊದಲ ಓವರ್‌ನಿಂದಲೇ ಭಾರತದ ಪೆವಿಲಿಯನ್ ಪೆರೇಡ್ ಆರಂಭವಾಯಿತು 10 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತ್ತು.

ಚೇತೇಶ್ವರ ಪೂಜಾರ 23 ಎಸೆತಗಳನ್ನು ಎದುರಿಸಿ 4 ರನ್ ಗಳಿಸಿದರೆ, 6 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಅವರು ಕ್ರಿಸ್ ಜೋರ್ಡಾನ್‌ಗೆ ವಿಕೆಟ್ ಒಪ್ಪಿಸಿದರು. ರಹಾನೆ ಶೂನ್ಯಕ್ಕೆ ಔಟಾದರೆ, ಮುರಳಿ ವಿಜಯ್ 18 ರನ್ ಗಳಿಸಿದರು. ಭೋಜನ ವಿರಾಮದ ವೇಳೆಗೆ ಭಾರತ 43 ರನ್‌ಗಳಿಸಿ 5 ವಿಕೆಟ್ ಕಳೆದುಕೊಂಡಿತ್ತು.
ಭಾರತ ಆಲ್ ಔಟ್ ಆದ ನಂತರ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 62 ರನ್ ಗಳಿಸಿ ದಿನದಾಟವನ್ನು ಅಂತ್ಯಗೊಳಿಸಿತು. ಶನಿವಾರ ಎರಡನೇ ದಿನದ ಆಟ ಆರಂಭವಾಗಲಿದ್ದು, ಭಾರತದ ಬೌಲರ್‌ಗಳು ಹೇಗೆ ದಾಳಿ ಇಂಗ್ಲೆಂಡ್ ತಂಡವನ್ನು ಕಟ್ಟಿ ಹಾಕುತ್ತಾರೆ? ಎಂದು ಕಾದು ನೋಡಬೇಕು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications