ಕೋಲ್ಕತಾ, ಜುಲೈ 20: ಟೀಂ ಇಂಡಿಯಾದ ವೇಗಿಗಳ ಟೈಮ್ ಯಾಕೋ ಸರಿಯಿಲ್ಲ ಎನಿಸುತ್ತದೆ. ಜೋಗಿಂದರ್ ಶರ್ಮ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇರ್ಫಾನ್ ಪಠಾಣ್ ಸದ್ಯಕ್ಕೆ ಸುದ್ದಿಯಲ್ಲಿದ್ದಾರೆ.
ಮೊಹಮ್ಮದ್ ಶಮಿ ಅವರನ್ನು ಮತ್ತೊಮ್ಮೆ ಗೇಲಿ ಮಾಡಲಾಗಿದೆ. ನೀನು ನಿಜವಾದ ಮುಸ್ಲಿಮಾ? ಎಂದು ಪ್ರಶ್ನಿಸಲಾಗಿದೆ. ಪತ್ನಿ, ಪುತ್ರಿ ಜತೆಗಿನ ಹುಟ್ಟುಹಬ್ಬದ ಚಿತ್ರವೊಂದರನ್ನು ಶಮಿ ಹಂಚಿಕೊಂಡಿದ್ದು ಈಗ ಚರ್ಚೆಯ ವಿಷಯವಾಗಿದೆ.
