Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup: ಭಾರತ-ಪಾಕ್‌ ಮತ್ತೊಮ್ಮೆ ಫೈಟ್‌: ಯಾವಾಗ? ಎಲ್ಲಿ? ಇಲ್ಲಿದೆ ಮಾಹಿತಿ

ಪ್ರಸಕ್ತ ವರ್ಷ ಏಷ್ಯಾ ಕಪ್ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಈ ವೇಳೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಹೀಗಾಗಿ ಉಭಯ ತಂಡಗಳು ಐಸಿಸಿ ಹಾಗೂ ಎಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿ ಆಗುತ್ತವೆ. ಉಭಯ ತಂಡಗಳ ನಡುವಣ ರಾಜಕೀಯ ಬಿಕ್ಕಟ್ಟಿನ ಮಧ್ಯೆ, ಈ ಎರಡೂ ತಂಡಗಳು ಕಾದಾಟ ನಡೆಸುತ್ತವೆಯೋ ಇಲ್ಲವೋ ಎಂಬ ಬಗ್ಗೆ ಅನುಮಾನಗಳು ಇದ್ದವು. ಆದರೆ ಸದ್ಯ ಈ ಬಗ್ಗೆ ಅಧಿಕೃತ ಹೇಳಿಕೆ ಬಾರದೇ ಇದ್ದರೂ ಸಹ ಉಭಯ ತಂಡಗಳು ಏಷ್ಯಾ ಕಪ್‌ನಲ್ಲಿ ಕಾದಾಟ ನಡೆಸಲಿವೆ ಎಂಬುದು ತಿಳಿದು ಬಂದಿದೆ.

ಏಷ್ಯ ಕಪ್‌ ಬಗ್ಗೆ ಇನ್ನು ಯಾವುದೇ ಅಧಿಕೃತ ಹೇಳಿಕೆ ಹೊರ ಬಾರದೇ ಇದ್ದರೂ, ಸಂಭವನೀಯ ವೇಳಾಪಟ್ಟಿ ಹೊರ ಬಿದ್ದಿದೆ. ಈ ಬಾರಿಯ ಏಷ್ಯಕಪ್ ಭಾರತ ಆಯೋಜಿಸಲಿದೆ. ಸದ್ಯ ಭಾರತ ಹಾಗೂ ಪಾಕ್‌ ದೇಶಗಳ ನಡುವಿನ ಬಿಕ್ಕಟ್ಟು ಪ್ರಶ್ನೆಗಳನ್ನು ಎತ್ತಿದೆ. ಆದರೆ ಭಾರತ, ಪಾಕ್‌ ಪ್ರವಾಸ ಬೆಳೆಸದಂತೆ ಹಾಗೂ ಪಾಕಿಸ್ತಾನ, ಭಾರತಕ್ಕೆ ಪ್ರವಾಸ ಮಾಡದಂತೆ ಈಗಾಗಲೇ ನಿರ್ಧರಿಸಲಾಗಿದೆ.ಹೀಗಾಗಿ ಈ ಬಾರಿಯ ಏಷ್ಯಾ ಕಪ್‌ನ್ನು ದಬೈ ಅಥವಾ ಅಬುದಾಬಿಯಲ್ಲಿ ಆಯೋಜಿಸಬಹುದು ಎಂದು ನಂಬಲಾಗಿದೆ.

India-Pak Cricket Clash Asia Cup Showdown Expected in September Likely in UAE

ಯಾವಾಗಿನಿಂದ ಆರಂಭವಾಗಲಿದೆ ಟೂರ್ನಿ?

ಈ ಬಾರಿ ಏಷ್ಯಾ ಕಪ್‌ನ್ನು ಟ20 ಮಾದರಿಯಲ್ಲಿ ಆಡಲಾಗುತ್ತದೆ. ಮುಂದಿನ ವರ್ಷ ಐಸಿಸಿ ಟ20 ವಿಶ್ವಕಪ್ ನಡೆಯಿದ್ದು, ಇದೇ ಸ್ವರೂಪದಲ್ಲಿ ಏಷ್ಯಾ ಕಪ್ ಆಯೋಜಿಸಲು ನಿರ್ಧರಿಸಲಾಗಿದೆ. ಏಷ್ಯಾ ಕಪ್‌ ವೇಳಾಪಟ್ಟಿ ಇನ್ನು ಘೋಷಿತವಾಗಿಲ್ಲ. ಆದರೆ, ಸೆಪ್ಟಂಬರ್‌ನಲ್ಲಿ ಈ ಮೆಗಾ ಟೂರ್ನಿಯನ್ನು ಆಯೋಜಿಸಲಾಗುವುದು. ಆದರೆ ಮಾಧ್ಯಮ ವರದಿಗಳ ಪ್ರಕಾರ ಟೂರ್ನಿ ಸೆಪ್ಟಂಬರ್ 5 ರಿಂದ ಸೆಪ್ಟಂಬರ್ 21ರ ವರೆಗೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಎಷ್ಟು ತಂಡಗಳು ಭಾಗಿ

ಈ ಟೂರ್ನಿಯಲ್ಲಿ ಪಂದ್ಯಗಳು ನಿರಂತರವಾಗಿ ನಡೆಯಲಿವೆ. ಈ ಟೂರ್ನಿಯಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ತಂಡಗಳು ಭಾಗವಹಿಸಲಿವೆ. ಭಾರತ ಹಾಗೂ ಪಾಕ್ ನಡುವಣ ಪಂದ್ಯ ಯಾವಾಗ ನಡೆಯಲದೆ ಎಂಬ ಬಗ್ಗೆ ಇನ್ನು ತಿಳಿದು ಬಂದಿಲ್ಲ. ಎಲ್ಲವೂ ಅಂದುಕೊಂಡಂತೆ ನಡೆದರೆ ಇನ್ನೇನು ಕೆಲವೇ ದಿನಗಳಲ್ಲಿ ವೇಳಾಪಟ್ಟಿ ಘೋಷಿಸುವ ಸಾಧ್ಯತೆ ಇದೆ.

Story first published: Thursday, July 24, 2025, 20:13 [IST]
Other articles published on Jul 24, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+