For Quick Alerts
ALLOW NOTIFICATIONS  
For Daily Alerts
 

IND vs PAK: ಅಭಿಮಾನಿಗಳ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದ ಟಾಪ್ 5 ರೋಚಕ T20 ಕದನ

ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾ ಕಪ್‌ ಟಿ20 ಟೂರ್ನಿಯ ಸೆಮಿಫೈನಲ್‌ನಲ್ಲಿ ಕಾದಾಟ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಲಿದೆ. ಈಗಾಗಲೇ ಈ ಟೂರ್ನಿಯಲ್ಲಿ ಎರಡು ಬಾರಿ ಉಭಯ ತಂಡಗಳು ಮುಖಾಮುಖಿ ಆಗಿದ್ದು, ಈ ಎರಡೂ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಜಯ ಸಾಧಿಸಿದೆ. ಈಗ ಮೂರನೇ ಬಾರಿ ಹೈವೋಲ್ಟೇಜ್‌ ಪಂದ್ಯದಲ್ಲಿ ಕಾದಾಟ ನಡೆಸಲಿದ್ದು, ಎಲ್ಲರ ಚಿತ್ತ ಕದ್ದಿದೆ.

ಭಾರತ, ಪಾಕ್‌ ತಂಡಗಳು ಯಾವಾಗಲೂ ಮೈದಾನಕ್ಕೆ ಇಳಿದಾಗ ರೋಚಕತೆ ಮನೆ ಮಾಡಿರುತ್ತದೆ. ಈ ತಂಡಗಳು ಕಣಕ್ಕೆ ಇಳಿದಾಗಲೆಲ್ಲಾ ಹೈವೋಲ್ಟೇಜ್‌ ಫೈಟ್‌ ಕಾಣುತ್ತಿದೆ. ಈ ಎರಡೂ ತಂಡಗಳ ನಡುವಣ ಹಲವು ಜಿದ್ದಾಜಿದ್ದಿನ ಕಾದಾಟಗಳು ನಡೆದಿವೆ. ಆದರೆ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದಿರುವ 5 ಟಿ20 ಪಂದ್ಯಗಳ ವರದಿ ಇಲ್ಲಿದೆ.

India-Pakistan Asia Cup final Revisiting Kohli Bumrah Yuvraj s 5 Iconic T20 Thrillers

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈಗ ಬರೀ ಐಸಿಸಿ ಹಾಗೂ ಎಸಿಸಿ ಟೂರ್ನಿಯಲ್ಲಿ ಮಾತ್ರ ಫೈಟ್ ನಡೆಸುತ್ತಿವೆ. ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿ ನಡೆಯುತ್ತಿಲ್ಲ. ಈ ಎರಡೂ ತಂಡಗಳು ಏಕದಿನ ಹಾಗೂ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿ ಆಗುತ್ತವೆ. ಮೆಲ್ಬೋರ್ನ್‌ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು 2022ರಲ್ಲಿ ಕಾದಾಟ ನಡೆಸಿದ್ದವು. ಈ ಪಂದ್ಯವನ್ನು ಅಭಿಮಾನಿಗಳು ಸುಲಭವಾಗಿ ಮರೆಯಲು ಸಾಧ್ಯವೇ ಇಲ್ಲ. ಸೋಲಿನ ದವಡೆಯಿಂದ ಭಾರತ ಗೆಲವಿನ ಟ್ರ್ಯಾಕ್‌ಗೆ ಮರಳಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್‌ ವಿರಾಟ್‌ ಕೊಹ್ಲಿ ಅಜೇಯ 82 ರನ್ ಬಾರಿಸಿ ಮಿಂಚಿದ್ದರು.

ಈ ಪಂದ್ಯದಲ್ಲಿ ಮೊದಲ ಬ್ಯಾಟ್ ಮಾಡಿದ್ದ ಪಾಕ್‌ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 159 ರನ್‌ ಕಲೆ ಹಾಕಿತ್ತು. ಗುರಿಯನ್ನು ಬೆನ್ನಟ್ಟಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 160 ರನ್‌ ಸಿಡಿಸಿ ಜಯ ಸಾಧಿಸಿತ್ತು. ಈ ಗೆಲುವು ಟೀಮ್ ಇಂಡಿಯಾ ಅಭಿಮಾನಿಗಳ ಮನಸ್ಸಿನಲ್ಲಿ ಈಗಲೂ ಹಸಿರಾಗಿದೆ. ಅದ್ರಲ್ಲೂ ಹ್ಯಾರಿಸ್‌ ರೌಫ್‌ಗೆ ವಿರಾಟ್‌ ಕೊಹ್ಲಿ ಬಾರಿಸಿದ ಆ ಸಿಕ್ಸರ್‌ ನಿಜಕ್ಕೂ ಅದ್ಭುತ.

ಭಾರತ ಹಾಗೂ ಪಾಕಿಸ್ತಾನ ನಡುವಣ ಚುಟುಕು ಪಂದ್ಯದಲ್ಲಿ ಅಭಿಮಾನಿಗಳನ್ನು ರಂಜಿಸಿದ ಪಂದ್ಯದಲ್ಲಿ 2007 ಟಿ20 ವಿಶ್ವಕಪ್‌ ಫೈನಲ್‌ ಸಹ ಒಂದು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 157 ರನ್ ಕಲೆ ಹಾಕಿತ್ತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ್ದ ಪಾಕ್‌ ಸುಲಭವಾಗಿ ಗೆಲ್ಲಬಹುದಾದ ಪಂದ್ಯವನ್ನು ಕೈ ಚೆಲ್ಲಿತು. ಪಾಕ್‌ ಅಂತಿಮವಾಗಿ 19.3 ಓವರ್‌ಗಳಲ್ಲಿ 152 ರನ್‌ ಸಿಡಿಸಿ ಸೋಲು ಕಂಡಿತು. ಈ ಪಂದ್ಯದಲ್ಲಿ ಜೋಗಿಂದರ್ ಶರ್ಮಾ ಎಸೆತದಲ್ಲಿ ಮಿಸ್ಬಾ ಉಲ್‌ ಹಕ್ ಸ್ಕೂಟ್‌ ಶಾಟ್‌ ಬಾರಿಸಲು ಹೋಗಿ ಶಾರ್ಟ್‌ ಫೈನ್‌ ಲೆಗ್‌ನಲ್ಲಿ ಫೀಲ್ಡ್‌ ಮಾಡುತ್ತಿದ್ದ ಶ್ರೀಂಶಾಂತ್‌ಗೆ ಕ್ಯಾಚ್‌ ನೀಡಿದರು. ಟೀಮ್ ಇಂಡಿಯಾ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿತು.

India-Pakistan Asia Cup final Revisiting Kohli Bumrah Yuvraj s 5 Iconic T20 Thrillers

ಬುಮ್‌ ಬುಮ್‌ ಬುಮ್ರಾ ಮ್ಯಾಜಿಕ್

ಕಳೆದ ಬಾರಿ ಅಮೆರಿಕ ಹಾಗೂ ವೆಸ್ಟ್‌ ಇಂಡೀಸ್ ಆತಿಥ್ಯದಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲೂ ಉಭಯ ತಂಡಗಳು ಕಾದಾಟ ನಡೆಸಿದ್ದವು. ಈ ವೇಳೆ ಮೊದಲು ಬ್ಯಾಟ್ ಮಾಡಿದ್ದ ಭಾರತ 19 ಓವರ್‌ಗಳಲ್ಲಿ ಸರ್ವಪತನ ಕಂಡಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಪಾಕ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 113 ರನ್ ಸೇರಿಸಿ ಸೋಲು ಕಂಡಿತು. ಟೀಮ್ ಇಂಡಿಯಾದ ಪರ ಜಸ್ಪ್ರೀತ್ ಬುಮ್ರಾ ಎದುರಾಳಿಗಳಿಗೆ ಬಹುವಾಗಿ ಕಾಡಿದ್ದರು.

ಯುವಿ ಅಬ್ಬರ

ಉಭಯ ದೇಶಗಳ ನಡುವಣ ದ್ವೀಪಕ್ಷೀಯ ಸರಣಿಯ ಎರಡನೇ ಪಂದ್ಯ 2012ರಲ್ಲಿ ಅಹಮದಾಬಾದ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 192 ರನ್‌ ಸೇರಿಸಿತು. ಈ ಪಂದ್ಯದಲ್ಲಿ ಯುವಿ 36 ಎಸೆತಗಳಲ್ಲಿ 192 ರನ್‌ ಸಿಡಿಸಿದ್ದರು. ಗುರಿಯನ್ನು ಬೆನ್ನಟ್ಟಿದ್ದ ಪಾಕ್‌ ನಿಗದಿತ ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 181 ರನ್‌ ಸಿಡಿಸಿ ಸೋಲು ಕಂಡಿತ್ತು.

ವಿರಾಟ್‌ ಬೊಂಬಾಟ ಆಟ

2016ರಲ್ಲಿ ಕೋಲ್ಕತ್ತಾದ ಈಡನ್‌ ಗಾರ್ಡನ್‌ ಅಂಗಳದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕ್‌ 18 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 118 ರನ್‌ ಸೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟ್ ಮಾಡಿದ್ದ ಭಾರತ 15.5 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 119 ರನ್‌ ಸೇರಿಸಿ ಜಯ ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು.

Story first published: Saturday, September 27, 2025, 13:24 [IST]
Other articles published on Sep 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+