For Quick Alerts
ALLOW NOTIFICATIONS  
For Daily Alerts
 

India vs Pakistan Match: ಮತ್ತೆ ಮಳೆ ಆರಂಭ; ಮೀಸಲು ದಿನಕ್ಕೆ ಮುಂದೂಡಿದ ಹೈ-ವೋಲ್ಟೇಜ್ ಪಂದ್ಯ

ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಪಾಕಿಸ್ತಾನ ಮತ್ತು ಭಾರತ ತಂಡಗಳ ನಡುವಿನ ಸೂಪರ್ 4 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ.

ಹೀಗಾಗಿ ಪಾಕಿಸ್ತಾನ ಮತ್ತು ಭಾರತ ನಡುವಿನ ಹೈ-ವೋಲ್ಟೇಜ್ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಲಾಗಿದೆ. ಸೋಮವಾರ, ಸೆಪ್ಟೆಂಬರ್ 11ರಂದು ಪಂದ್ಯ ಮುಂದುವರೆಯಲಿದೆ.

India Pakistan Asia Cup Match Called Off Due to Rain and Will Be Resumed on Reserve day at Same Runs

ಸೋಮವಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ನಿಗದಿತ 50 ಓವರ್‌ಗಳ ಆಟವನ್ನು ಆಡಿಸಲಾಗುತ್ತದೆ. ಭಾರತ ತಂಡ ಯಾವ ಹಂತದಲ್ಲಿ ಆಟವನ್ನು ನಿಲ್ಲಿಸಿದೆಯೋ ಅಲ್ಲಿಂದ ಆಟ ಮುಂದುವರೆಯಲಿದೆ.

ಟಾಸ್ ಗೆದ್ದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್‌ ಮಾಡಲು ಭಾರತವನ್ನು ಆಹ್ವಾನಿಸಿತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾಗ ಮಳೆ ಬಂದು ಇನ್ನಿಂಗ್ಸ್ ಸ್ಥಗಿತಗೊಂಡಾಗ ಭಾರತ ತಂಡ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಗಮನಾರ್ಹವಾಗಿ, ಪಲ್ಲೆಕೆಲೆಯಲ್ಲಿ ನಡೆದ ಎರಡು ತಂಡಗಳ ನಡುವಿನ ಗುಂಪು ಹಂತದ ಪಂದ್ಯವು ಮಳೆಯಿಂದಾಗಿ ಎರಡನೇ ಇನ್ನಿಂಗ್ಸ್ ಆರಂಭಿಸದೆ, ಪಂದ್ಯ ರದ್ದುಗೊಂಡು ಅಂಕಗಳನ್ನು ಹಂಚಿಕೊಂಡಿದ್ದವು. ಆ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟಿಂಗ್ ಮಾಡಿ 266 ರನ್‌ಗಳಿಗೆ ಆಲೌಟ್ ಆಗಿತ್ತು.

India Pakistan Asia Cup Match Called Off Due to Rain and Will Be Resumed on Reserve day at Same Runs

ಉತ್ತಮ ಆರಂಭ ಒದಗಿಸಿದ ರೋಹಿತ್-ಗಿಲ್ ಜೋಡಿ
ಇನ್ನು ಸೂಪರ್ 4 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಪವರ್ ಪ್ಲೇ ಓವರ್‌ಗಳಲ್ಲಿ ಪಾಕಿಸ್ತಾನ ಬೌಲರ್‌ಗಳನ್ನು ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿತು.

ರೋಹಿತ್ ಶರ್ಮಾ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 56 ರನ್ ಗಳಿಸಿ ಔಟಾದರೆ, ಅವರ ಹಿಂದೆಯೇ ಶುಭ್ಮನ್ ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಮೂಲಕ 58 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮುನ್ನ ಪಾಕಿಸ್ತಾನ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ವಿರುದ್ಧ ಶುಭ್ಮನ್ ಗಿಲ್ ಅಕ್ಷರಶಃ ಆರ್ಭಟಿಸಿದರು. ಆಫ್ರಿದಿ ತಮ್ಮ ಮೊದಲ 3 ಓವರ್‌ಗಳಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟು ಬೆರಳಿನ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರನಡೆದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆರಂಭಿಕ ಕೆಲವು ಓವರ್‌ಗಳಲ್ಲಿ ನಸೀಮ್ ಶಾ ವಿರುದ್ಧ ಪರದಾಡಿದರೆ, ಸ್ಪಿನ್ನರ್ ಶಾದಾಬ್ ಖಾನ್ ವಿರುದ್ಧ ಆರ್ಭಟಿಸಿದರು. ರೋಹಿತ್ ತಮ್ಮ 50ನೇ ಏಕದಿನ ಅರ್ಧಶತಕ ಗಳಿಸುವಾಗ ಲೆಗ್ ಸ್ಪಿನ್ನರ್‌ಗೆ 3 ಸಿಕ್ಸರ್‌ಗಳನ್ನು ಬಾರಿಸಿದರು.

ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಜೋಡಿ ಪಾಕಿಸ್ತಾನ ವೇಗದ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಹೊಂದಿದ್ದರು. ಕೊಲಂಬೊದ ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ತಮ್ಮ ಫಾರ್ಮ್‌ ಮುಂದುವರೆಸಿದರು.

ರೋಹಿತ್ ಶರ್ಮಾ ಅವರು ನಸೀಮ್ ಶಾ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪವರ್‌ಪ್ಲೇಯಲ್ಲಿ ವೇಗವಾಗಿ ರನ್ ಗಳಿಸುವ ಜವಾಬ್ದಾರಿಯನ್ನು ಶುಭ್ಮನ್ ಗಿಲ್ ತೆಗೆದುಕೊಂಡರು.

Story first published: Sunday, September 10, 2023, 21:00 [IST]
Other articles published on Sep 10, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+