ಭಾರತ, ಪಾಕ್ ಕದನ ವಿರಾಮ: ಆರ್‌ಸಿಬಿ 7 ಆಟಗಾರರು ವಿದೇಶದತ್ತ ಪ್ರಯಾಣ
ಭಾರತ ಹಾಗೂ ಪಾಕಿಸ್ತಾನ ನಡುವಣ ಉದ್ವಿಗ್ನತೆ ಎಷ್ಟು ದಿನ ಹೀಗೆಯೇ ಮುಂದುವರೆಯುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಇದರಿಂದಾಗಿ ಬಿಸಿಸಿಐ ಐಪಿಎಲ್ ಮುಂದೂಡಿ ಆದೇಶವನ್ನು ಹೊರಡಿಸಿತ್ತು. ಇದರಿಂದಾಗಿ ಐಪಿಎಲ್ ಫ್ರಾಂಚೈಸಿಗಳು ತಮ್ಮ ತಮ್ಮ ವಿದೇಶಿ ಆಟಗಾರರನ್ನು ತವರಿಗೆ ಕಳಿಸಿದ್ದಾರೆ. ಇವರು ಇನ್ನು ತವರಿಗೆ ಮುಟ್ಟಿರುವುದು ಸಹ ಇನ್ನು ಡೌಟ್ ಇರುವಾಗಲೇ ಭಾರತ ಹಾಗೂ ಪಾಕಿಸ್ತಾನ ಮಧ್ಯೆದಲ್ಲಿ ಅಮೆರಿಕ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ನಡೆದಿದೆ.
ಶುಕ್ರವಾರ ರಾತ್ರಿ ನಡೆದ ಕದನ ವಿರಾಮ ಮಾತುಕತೆಯಲ್ಲಿ ಉಭಯ ದೇಶಗಳ ಅಧಿಕಾರಿಗಳು ಭಾಗವಹಿಸಿದ್ದರು. ಈ ವೇಳೆ ಇಬ್ಬರೂ ಮಾತುಕತೆ ನಡೆಸಿ ಒಂದು ನಿರ್ಧಾರಕ್ಕೆ ಬಂದಿದ್ದು, ಶನಿವಾರ ಸಂಜೆ 5 ಗಂಟೆಯಿಂದ ಕದನ ವಿರಾಮ ಜಾರಿ ಆಗುವುದಾಗಿ ತಿಳಿಸಿದ್ದಾರೆ. ಇದರಿಂದ ಎರಡೂ ದೇಶಗಳ ಮಧ್ಯೆ ಯಾವುದೇ ದಾಳಿ ನಡೆಯುವುದಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ. ಆದರೆ ಈ ಬಗ್ಗೆ ಯಾವುದೇ ಮಾಹಿತಿ ಇರದ ಬಿಸಿಸಿಐ ಈಗಾಗಲೇ ಐಪಿಎಲ್ ಪಂದ್ಯಗಳನ್ನು ಒಂದು ವಾರದ ಮಟ್ಟಿಗೆ ಮುಂದೂಡಿತ್ತು.

ದೇಶದ ಗಡಿಯಲ್ಲಿ ನಡೆದ ಉದ್ವಿಗ್ನತೆಯಿಂದಾಗಿ ಐಪಿಎಲ್‌ನಲ್ಲಿ ಭಾಗವಹಿಸಿದ್ದ ವಿದೇಶಿ ಆಟಗಾರರನ್ನು ಭಾರತ ತವರಿಗೆ ಕಳುಹಿಸಿದೆ. ಅತ್ತ ವಿದೇಶಿ ಆಟಗಾರರು ಫ್ಲೈಟ್ ತಮ್ಮ ತವರು ಮುಟ್ಟುವ ಮೊದಲೇ ಕದನ ವಿರಾಮ ಘೋಷಣೆ ಆಗಿದೆ. ಎರಡೂ ದೇಶಗಳು ಯಾರ ಮೇಲೂ ಯಾವುದೇ ರೀತಿಯ ಮಿಲಿಟರಿ ದಾಳಿಯನ್ನು ನಡೆಸುವುದಿಲ್ಲ. ಇನ್ನು ಧರ್ಮಶಾಲಾದಲ್ಲಿ ಗುರುವಾರ ನಡೆಯಬೇಕಿದ್ದ ಪಂಜಾಬ್ ಕಿಂಗ್ಸ್ ಮತ್ತು ದೆಹಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ಅರ್ಧಕ್ಕೆ ರದ್ದುಗೊಳಿಸಲಾಗಿತ್ತು.
ವಿದೇಶಿ ಆಟಗಾರರು, ಸಹಾಯಕ ಸಿಬ್ಬಂದಿ ತವರಿನತ್ತ
ಐಪಿಎಲ್ ಪಂದ್ಯಗಳು ಮುಂದೂಡಲ್ಪಟ್ಟ ನಂತರ ವಿದೇಶಿ ಆಟಗಾರರು ತಮ್ಮ ತಮ್ಮ ನಗರಗಳತ್ತ ಮುಖ ಮಾಡಿದ್ದಾರೆ. ಬರೀ ವಿದೇಶಿ ಆಟಗಾರರು ಅಷ್ಟೇ ಅಲ್ಲ ತಂಡದ ಸಹಾಯಕ ಸಿಬ್ಬಂದಿಗಳು ಸಹ ತವರಿನತ್ತ ಫ್ಲೈಟ್ ಏರಿದ್ದಾರೆ. ಆರ್‌ಸಿಬಿ ತಂಡದಲ್ಲಿರುವ ವಿದೇಶಿ ಆಟಗಾರರಾದ ವೇಗಿ ಜೋಸ್ ಹ್ಯಾಜಲ್‌ವುಡ್, ಟೀಮ್ ಡೇವಿಡ್, ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್, ಜಾಕಬ್ ಬೆತೆಲ್, ಫಿಲ್ ಸಾಲ್ಟ್, ರೊಮಾರಿಯೊ ಶೆಫರ್ಡ್, ಲುಂಗಿ ಎನ್‌ಗಿಡಿ ಮತ್ತು ನುವಾನ್ ತುಷಾರ ಈಗಾಗಲೇ ತಮ್ಮ ತಮ್ಮ ದೇಶಗಳ ಫ್ಲೈಟ್ ಏರಿದ್ದಾರೆ. ಇನ್ನು ಮುಖ್ಯ ಕೋಚ್ ಆಂಡಿ ಫ್ಲವರ್, ಬೌಲಿಂಗ್ ಕೋಚ್ ಆಡಮ್ ಗಿಫಿತ್, ಕ್ರಿಕೆಟ್ ಕಾರ್ಯಾಚರಣೆಗಳ ನಿರ್ದೇಶಕ ಮೊ ಬೊಬಾಟ್, ತಂಡದ ಭೌತಶಾಸ್ತ್ರಜ್ಞ ಇವಾನ್ ಸ್ಪೀಚ್ಲಿ ಮತ್ತು ತಜ್ಞ ಫ್ರೆಡ್ಡಿ ವೈಲ್ಡ್ ತವರಿನತ್ತ ಮುಖ ಮಾಡಿದ್ದಾರೆ.

ಲಕ್ನೋ ಸೂಪರ್ ಜೈಂಟ್ಸ್‌ನ ಕೆಲವು ವಿದೇಶಿ ಆಟಗಾರರು ಶನಿವಾರ ತಂಡವನ್ನು ತೊರೆದಿದ್ದರೆ, ಇನ್ನು ಇನ್ನು ಭಾರತದಲ್ಲಿಯೇ ಇರುತ್ತಾರೆ ಎಂದು ತಂಡದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರರು ತಮ್ಮ ತಮ್ಮ ಸ್ಥಳಗಳಿಗೆ ತೆರಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications