Champions Trophy 2025: ದುಬೈನಲ್ಲಿ ಮ್ಯಾಚ್ ನಡೆದರೆ ಯಾರಿಗೆ ಲಾಭ? ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ
ಫೆಬ್ರವರಿ 19 ರಂದು ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ಆರಂಭವಾಗಲಿದೆ. ಏಳು ವರ್ಷಗಳ ಬಳಿಕ ನಡೆಯುತ್ತಿರುವ ಟ್ರೋಫಿಗೆ ಪಾಕಿಸ್ತಾನ ಆತಿಥ್ಯವಹಿಸಲಿದೆ. ಪಾಕಿಸ್ತಾನಕ್ಕೆ ಭಾರತ ಪ್ರವಾಸವನ್ನು ಬೆಳೆಸುತ್ತಿಲ್ಲ. ಹೀಗಾಗಿ ಭಾರತದ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಡಿಸಲು ತೀರ್ಮಾನಿಸಲಾಗಿದೆ. ಈ ಟೂರ್ನಿಯ ಹೈ ವೋಲ್ಟೇಜ್ ಪಂದ್ಯಗಳಲ್ಲಿ ಒಂದಾಗಿರುವ ಭಾರತ, ಪಾಕ್ ಪಂದ್ಯ ದುಬೈನಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ನೆಟ್ಟಿದೆ.
ಭಾರತ ಹಾಗೂ ಪಾಕ್ ನಡುವಿನ ಪಂದ್ಯ ಎಲ್ಲಿಯೇ ನಡೆದರೂ ರೋಚಕತೆ ಇಂದು ಕೂಡಿರುತ್ತದೆ. ಈ ಬಾರಿಯೂ ಉಭಯ ದೇಶಗಳ ನಡುವಣ ಫೈಟ್ ಕಣ್ಣು ತುಂಬಿಕೊಳ್ಳಲು ಇಡೀ ವಿಶ್ವ ಕ್ರಿಕೆಟ್ ಕಾತುರದಿಂದ ಕಾಯುತ್ತಿದೆ. ಇನ್ನು ಸಹ ಈ ಪಂದ್ಯಗಳ ಟಿಕೆಟ್ ಬೆಲೆಯನ್ನು ಬಹಿರಂಗ ಪಡಿಸಿಲ್ಲ. ಆದರೆ ಈಗ ಬರುತ್ತಿರುವ ಸುದ್ದಿ ನಿಜಕ್ಕೂ ಪಿಸಿಬಿ ಮುಖದಲ್ಲಿ ಮಂದಹಾಸ ಮೂಡಿಸಿದೆ.

ದುಬೈ ನಲ್ಲಿ ನಡೆದರೆ ಲಾಭ ಯಾರಿಗೆ?
ವರದಿಗಳ ಪ್ರಕಾರ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯ ದುಬೈನಲ್ಲಿ ನಡೆದರೂ, ಇದರ ಲಾಭ ಪಿಸಿಬಿ ಖಜಾನೆ ಸೇರಲಿದೆ. ಇದು ನಿಜಕ್ಕೂ ಪಿಸಿಬಿಗೆ ಬಂಪರ್ ಲಾಟರಿ ಹೊಡೆದಂತೆ ಆಗಿದೆ. ಇದಕ್ಕೂ ಮೊದಲು ದುಬೈನಲ್ಲಿ ಭಾರತದ ಪಂದ್ಯಗಳು ನಡೆದರೆ ಇದರಿಂದ ಯಾರಿಗೆ ಲಾಭ ಎಂಬ ಪ್ರಶ್ನೆಗಳು ಮೂಡಿದ್ದವು. ವರದಿಯ ಪ್ರಕಾರ, ದುಬೈನಲ್ಲಿ ನಡೆಯಲಿರುವ ಪಂದ್ಯಗಳ ಎಲ್ಲಾ ಹಣ ಮತ್ತು ಮೈದಾನದೊಳಗಿನ ಆಹಾರ ಮತ್ತು ಪಾನೀಯ ವ್ಯವಸ್ಥೆಯಿಂದ ಬರುವ ಆದಾಯ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಬೊಕ್ಕಸ ಸೇರಲಿದೆ. ಇನ್ನು ಸಾಂಪ್ರದಾಯಿಕ ಎದುರಾಳಿಗಳ ಫೈಟ್‌ನ ಹಣ ತನ್ನ ಬೊಕ್ಕಸ ಸೇರಲಿದೆ ಎಂಬ ಸುದ್ದಿ ನಿಜಕ್ಕೂ ಪಿಸಿಬಿ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಈ ಬಗ್ಗೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯು ಐಸಿಸಿ ಹಾಗೂ ಪಿಸಿಬಿ ಅಧಿಕಾರಗಳೊಂದಿಗೆ ಮಾತುಕತೆ ನಡೆಸಿದೆ ಎಂದು ತಿಳಿದು ಬಂದಿದೆ. ಇದೇ ವೇಳೆ ಟಿಕೆಟ್ ಬೆಲೆ ಹಾಗೂ ಇತರ ವ್ಯವಸ್ಥೆಗಳಿಂದ ಬರುವ ಹಣದ ಬಗ್ಗೆಯೂ ಸ್ಪಷ್ಟತೆ ಸಿಕ್ಕಿದೆ ಎಂದು ತಿಳಿದು ಬಂದಿದೆ.
ಚಾಂಪಿಯನ್ಸ್ ಟ್ರೋಫಿಗೆ ಇನ್ನೇನು ದಿನಗಣನೆ ಆರಂಭವಾಗಿದ್ದು, ಈ ಟೂರ್ನಿಯ ಟಿಕೆಟ್ ಬೆಲೆ ಸೋರಿಕೆ ಆಗಿವೆ. ಪಾಕಿಸ್ತಾನ ಕರೆನ್ಸಿಯಂತೆ ಕನಿಷ್ಠ ಬೆಲೆ 1000 ರೂ ಆದರೆ, ಗರಿಷ್ಠ ಬೆಲೆ 25000 ಪಾಕಿಸ್ತಾನಿ ರೂಪಾಯಿ ಆಗಿರುತ್ತದೆ.

ಏಳು ವರ್ಷಗಳ ಬಳಿಕ ಟೂರ್ನಿ
2007ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫುನ್ನು ಆಯೋಜಿಸಲಾಗಿತ್ತು. ಈ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಫೈನಲ್‌ನಲ್ಲಿ ಕಾದಾಟ ನಡೆಸಿದ್ದವು. ರೋಚಕ ಫೈನಲ್ ಪಂದ್ಯವನ್ನು ಪಾಕ್ ಗೆದ್ದು ಬೀಗಿತ್ತು. ಈಗ ಏಳು ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಮತ್ತೆ ಅಭಿಮಾನಿಗಳನ್ನು ಸೆಳೆಯಲು ಕಾತುರವಾಗಿದೆ. ಭಾರತ ಸಹ ಈ ಟೂರ್ನಿಗೆ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದ್ದು, ಚಾಂಪಿಯನ್ ಪಟ್ಟದ ಮೇಲೆ ಕಣ್ಣು ನೆಟ್ಟಿದೆ. ಯುವ ಹಾಗೂ ಅನುಭವಿ ಆಟಗಾರರಿಂದ ಕೂಡಿರುವ ತಂಡ ಬಲಾಢ್ಯವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications