Asia Cup 2024: ಅಕ್ಟೋಬರ್ 19 ರಂದು ಭಾರತ ಹಾಗೂ ಪಾಕ್ ಹೈವೋಲ್ಟೇಜ್ ಪಂದ್ಯ: ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪುರುಷರ T20 ಎಮರ್ಜಿಂಗ್ ಏಷ್ಯಾ ಕಪ್ 2024 ರ ವೇಳಾಪಟ್ಟಿ ಪ್ರಕಟಿಸಿದೆ. ಈ ಟೂರ್ನಿಯನ್ನು ಒಮಾನ್ ಆಯೋಜಿಸಲಿದೆ. ಅಕ್ಟೋಬರ್ 18 ರಿಂದ ಅಕ್ಟೋಬರ್ 27 ರವರೆಗೆ ಈ ಟೂರ್ನಿ ನಡೆಯಲಿದೆ. ಇದರಲ್ಲಿ ಏಷ್ಯಾದ 8 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯವೂ ನಡೆಯಲಿದೆ.
ಈ ಟೂರ್ನಿಯಲ್ಲೂ ಸಹ ಸಾಂಪ್ರದಾಯಿಕ ಎದುರಾಳಿಗಳ ಕಾದಾಟದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಈ ಹೈವೋಲ್ಟೇಜ್ ಪಂದ್ಯವನ್ನು ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಮಾತ್ರವಲ್ಲದೆ ವಿಶ್ವದ ಇತರ ದೇಶಗಳ ಕ್ರಿಕೆಟ್ ಅಭಿಮಾನಿಗಳ ಚಿತ್ತ ಕದ್ದಿದೆ. ಈ ಎರಡೂ ದೇಶಗಳು ಯಾವುದೇ ಟೂರ್ನಿಯಲ್ಲಿ ಅಖಾಡಕ್ಕೆ ಪ್ರವೇಶಿಸಿದರೂ, ಜಿದ್ದಾಜಿದ್ದಿನಿಂದ ಕೂಡಿರುತ್ತದೆ. ಪುರುಷರ ಪಂದ್ಯವಾಳಿಯೇ ಆಗಲಿ ಮಹಿಳೆಯರ ಪಂದ್ಯಾವಳಿಗಳೇ ಆಗಲಿ ರೋಚಕತೆ ಮನೆ ಮಾಡಿರುತ್ತದೆ.

ಈಗ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಉದಯೋನ್ಮುಖ ಆಟಗಾರರ ಕ್ರಿಕೆಟ್ ಟೂರ್ನಿ ನಡೆಸಲು ಸಿದ್ಧತೆ ನಡೆಸಿದೆ. ಇದು ಎಮರ್ಜಿಂಗ್ ಟೂರ್ನಿಯ ಆರನೇ ಆವೃತ್ತಿ ಆಗಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆಯೂ ಪಂದ್ಯ ನಡೆಯಲಿದೆ. ಪುರುಷರ ಟಿ20 ಎಮರ್ಜಿಂಗ್ ಏಷ್ಯಾ ಕಪ್ 2024 ಅಕ್ಟೋಬರ್ 18 ರಿಂದ ಆರಂಭವಾಗಲಿದ್ದು, ಫೈನಲ್ ಪಂದ್ಯ ಅಕ್ಟೋಬರ್ 27ರಂದು ನಡೆಯಲಿದೆ.
8 ತಂಡ 2 ಗುಂಪು
ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಹೊರತುಪಡಿಸಿ, ಯುಎಇ, ಓಮನ್ ಮತ್ತು ಹಾಂಗ್ ಕಾಂಗ್ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿವೆ. 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಮೊದಲ ಗುಂಪಿನಲ್ಲಿ ಶ್ರೀಲಂಕಾ ಎ, ಬಾಂಗ್ಲಾದೇಶ ಎ, ಅಫ್ಘಾನಿಸ್ತಾನ ಎ ಮತ್ತು ಹಾಂಗ್ ಕಾಂಗ್ ತಂಡಗಳು ಸ್ಥಾನ ಪಡೆದಿವೆ.
ಎರಡನೇ ಗುಂಪಿನಲ್ಲಿ ಭಾರತ ಎ, ಪಾಕಿಸ್ತಾನ ಎ, ಯುಎಇ ಮತ್ತು ಒಮಾನ್ ತಂಡಗಳು ಸೇರಿವೆ. ಹಿಂದಿನ ಆವೃತ್ತಿಯ ಟೂರ್ನಿಯನ್ನು ಶ್ರೀಲಂಕಾದಲ್ಲಿ ಆಯೋಜಿಸಲಾಗಿತ್ತು. ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯವನ್ನು 128 ರನ್‌ಗಳಿಂದ ಗೆದ್ದ ಪಾಕ್ ಪ್ರಶಸ್ತಿಗೆ ಮುತ್ತಿಟ್ಟಿತ್ತು.
ಭಾರತ ಎ ತಂಡದ ಪಂದ್ಯಗಳು
ದಿನಾಂಕ, ವಿರುದ್ಧ, ಸಮಯ
ಅ.19, ಪಾಕಿಸ್ತಾನ, ಸಂಜೆ 5.30
ಅ.21, ಯುಎಇ, ಸಂಜೆ 5.30
ಅ.23, ಓಮನ್, ಸಂಜೆ 5.30
ಮೊದಲ ಸೆಮಿಫೈನಲ್: 25 ಅಕ್ಟೋಬರ್: ಮಧ್ಯಾಹ್ನ 1ಕ್ಕೆ
ಎರಡನೇ ಸೆಮಿಫೈನಲ್: 25 ಅಕ್ಟೋಬರ್: ಸಂಜೆ 5.30
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications