IND vs PAK: ಹ್ಯಾಂಡ್‌ಶೇಕ್ ವಿವಾದದ ನಡುವೆ ಭಾರತ-ಪಾಕ್ ಮತ್ತೊಮ್ಮೆ ಫೈಟ್
ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಸೂಪರ್ 4 ಹಂತದ ಪಂದ್ಯಗಳು ಆರಂಭವಾಗಿವೆ. ಈ ಹಂತದ ಎರಡನೇ ಪಂದ್ಯದಲ್ಲಿ ಸಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಕಾದಾಟ ನಡೆಸಲಿವೆ. ಈಗಾಗಲೇ ಲೀಗ್ ಹಂತದಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿರುವ ಟೀಮ್ ಇಂಡಿಯಾ, ಮತ್ತೊಂದು ಗೆಲುವಿನ ಕನಸು ಕಾಣುತ್ತಿದೆ. ಸೂರ್ಯ ಪಡೆ "ಎ" ಗುಂಪಿನಲ್ಲಿ ಅಜೇಯವಾಗಿ ಸೂಪರ್ 4 ಹಂತಕ್ಕೆ ಅರ್ಹತೆ ಪಡೆದಿದೆ.
"ಎ" ಗುಂಪಿನ ಮೊದಲೆರೆಡು ತಂಡಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾನುವಾರ ದುಬೈ ಅಂಗಳದಲ್ಲಿ ಮುಖಾಮುಖಿ ಆಗಲಿವೆ. ಟಿ20 ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾ ಉತ್ತಮ ಅಂಕಿ ಅಂಶಗಳನ್ನು ಹೊಂದಿದೆ. ಅಲ್ಲದೆ ಸದ್ಯದ ಭಾರತ ತಂಡ ಅಮೋಘ ಫಾರ್ಮ್‌ನಲ್ಲಿದೆ. ಭಾರತ, ಈ ಪಂದ್ಯವನ್ನು ಗೆದ್ದು ಫೈನಲ್‌ಗೆ ಹತ್ತಿರವಾಗುವ ಕನಸು ಕಾಣುತ್ತಿದೆ.

ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಫ್ಲ್ಯಾಟ್ ಹಾಗೂ ಹಾರ್ಡ್ ಪಿಚ್ ಆಗಿದೆ. ಈ ಪಿಚ್‌ನಲ್ಲಿ ವೇಗದ ಬೌಲರ್‌ಗಳಿಗೆ ಬೌನ್ಸರ್ ನೆರವು ನೀಡಲಿದೆ. ಇನ್ನು ಈ ಪಿಚ್‌ನಲ್ಲಿ ಬೌಲರ್‌ಗಳು ಕೊಂಚ ಸಹಾಯವನ್ನು ಪಡೆಯಲಿದ್ದಾರೆ. ಆದರೆ ಈ ಪಿಚ್ ಬ್ಯಾಟರ್‌ಗಳಿಗೆ ಅನುಕೂಲಕರವೂ ಆಗಿರಲಿದೆ. ಬ್ಯಾಟರ್‌ಗಳು ತಮ್ಮ ಶಾಟ್‌ಗಳನ್ನು ಉತ್ತಮವಾಗಿ ಪ್ರಯೋಗಿಸಬಹುದಾಗಿದೆ. ಅಲ್ಲದೆ ಸ್ಪಿನ್ ಬೌಲರ್‌ಗಳು ಸಹ ಈ ಪಂದ್ಯದಲ್ಲಿ ತಂಡಕ್ಕೆ ನೆರವಾಗಬಲ್ಲರು.
ಬಲಿಷ್ಠ ಬ್ಯಾಟಿಂಗ್
ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನ್ ಅಪ್ ಬಲಿಷ್ಠವಾಗಿದೆ. ವಿಶ್ವದ ನಂಬರ್ 1 ಟಿ20 ಬ್ಯಾಟರ್ ಅಭಿಷೇಕ್ ಶರ್ಮಾ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ಆದರೆ ಇವರು ಬಿಗ್ ಇನಿಂಗ್ಸ್ ಕಟ್ಟದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇನ್ನು ಭರವಸೆಯ ಬ್ಯಾಟರ್ ಶುಭಮನ್ ಗಿಲ್ ಆರಂಭಿಕರಾಗಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ ನೆಲಕಚ್ಚಿ ನಿಂತು ಬ್ಯಾಟ್ ಮಾಡುವ ಭರವಸೆಯ ಮೂಡಿಸಿದ್ದಾರೆ. ಇನ್ನು ಓಮನ್ ವಿರುದ್ಧದ ಪಂದ್ಯದಲ್ಲಿ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅರ್ಧಶತಕ ಬಾರಿಸಿರುವ ಸಂಜು ಸ್ಯಾಮ್ಸನ್ ಸಹ ಭರವಸೆ ಮೂಡಿಸಿದ್ದಾರೆ.
ಭಾರತದ ಪರ ಟೂರ್ನಿಯಲ್ಲಿ ಗರಿಷ್ಠ ರನ್ ಸಾಧಕರು
ಅಭಿಷೇಕ್ ಶರ್ಮಾ, 3 ಪಂದ್ಯ, 99 ರನ್
ತಿಲಕ್ ವರ್ಮಾ, 3 ಪಂದ್ಯ, 60 ರನ್
ಸಂಜು ಸ್ಯಾಮ್ಸನ್, 3 ಪದ್ಯ, 56 ರನ್

ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್‌ಗಳು ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗಬಲ್ಲರು. ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಶಿವಂ ದುಬೆ ಆಟದಿಂದ ತಂಡಕ್ಕೆ ಆಧಾರವಾಗಬಲ್ಲರು. ಇನ್ನು ವೇಗದ ಬೌಲಿಂಗ್ ಹೊಣೆಯನ್ನು ಜಸ್ಪ್ರೀತ್ ಬುಮ್ರಾ ಹೊರಲಿದ್ದು, ಅರ್ಷದೀಪ್ ಸಿಂಗ್ ಆಡುವ ಸಾಧ್ಯತೆ ಇದೆ. ಇನ್ನು ಸ್ಪಿನ್ ಬೌಲರ್ ಆಗಿ ಕುಲ್‌ದೀಪ್ ಯಾದವ್, ವರುಣ್ ಚಕ್ರವರ್ತಿ ಕಣಕ್ಕೆ ಇಳಿಯುವುದು ಪಕ್ಕಾ. ಕುಲ್‌ದೀಪ್ ಈ ಸರಣಿಯಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.
ಒತ್ತಡದಲ್ಲಿ ಪಾಕ್
ಪಾಕಿಸ್ತಾನ ಸೂಪರ್ 4 ಹಂತಕ್ಕೆ ಪ್ರವೇಶ ಪಡೆದಿದೆ. ಆದರೆ ಲೀಗ್ ಹಂತದಲ್ಲಿ ಟೀಮ್ ಇಂಡಿಯಾ ವಿರುದ್ಧ ನೀರಸ ಪ್ರದರ್ಶನ ನೀಡಿತ್ತು. ಪಾಕ್ ತಂಡದ ಟಾಪ್ ಆರ್ಡರ್ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾಗಿದ್ದು ಒತ್ತಡದಲ್ಲಿದ್ದಾರೆ. ಪಾಕ್ ತಂಡದ ಬೌಲರ್‌ಗಳು ಸಹ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿದ್ದಾರೆ. ಇವರು ಸಹ ರನ್‌ಗಳನ್ನು ನೀಡಿ ಕೈ ಸುಟ್ಟುಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications