Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈ ತಂಡ ಸೆಮಿಫೈನಲ್‌ಗೆ ಪ್ರವೇಶ, ಭವಿಷ್ಯ ನುಡಿದ ಪಾಕ್‌ ಮಾಜಿ ವೇಗಿ

ಇನ್ನೇನು ಕೆಲವೇ ದಿನಗಳಲ್ಲಿ ಚಾಂಪಿಯನ್ಸ್ ಟ್ರೋಫಿ 2025 ಆರಂಭವಾಗಲಿದೆ. ಏಳು ವರ್ಷಗಳ ಬಳಿಕ ನಡೆಯುತ್ತಿರುವ ಈ ಮೆಗಾ ಟೂರ್ನಿಗೆ ಪಾಕಿಸ್ತಾನ ಆತಿಥ್ಯ ವಹಿಸಲಿದೆ. ಒಟ್ಟು ಎಂಟು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. ಟೀಮ್ ಇಂಡಿಯಾ ಸಹ ಈ ಬಾರಿ ಪ್ರಶಸ್ತಿ ಗೆಲ್ಲುವ ಹಾಟ್ ಫೆವರೀಟ್‌ ತಂಡಗಳಲ್ಲಿ ಒಂದಾಗಿದೆ. ಎಂಟು ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಈಗಾಗಲೇ ಮಾಜಿ ಆಟಗಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ಈ ಸಾಲಿಗೆ ಲೆಟೆಸ್ಟ್‌ ಎಂಟ್ರಿ ಶೋಯಿಬ್ ಅಕ್ತರ್.

ಚಾಂಪಿಯನ್ಸ್‌ ಟ್ರೋಫಿಯ ಬಗ್ಗೆ ಈಗಾಗಲೇ ರವಿ ಶಾಸ್ತ್ರಿ ಹಾಗೂ ರಿಕ್ಕಿ ಪಾಂಟಿಂಗ್ ಸೇರಿದಂತೆ ಅನೇಕ ಖ್ಯಾತ ನಾಮ ಆಟಗಾರರು ಭವಿಷ್ಯವಾಣಿ ನುಡಿದಿದ್ದಾರೆ. ಶೋಯಿಬ್ ಅಕ್ತರ್ ಸಹ ಈ ಬಗ್ಗೆ ತನ್ನ ಅನಿಸಿಕೆ ವ್ಯಕ್ತ ಪಡಿಸಿದ್ದು ಸೆಮಿಫೈನಲ್‌ ಪ್ರವೇಶಿಸುವ ತಂಡಗಳನ್ನು ಹೆಸರಿಸಿದ್ದಾರೆ.

India-Pakistan Final Shoaib Akhtar Predicts Champions Trophy 2025 Semi-Finalists

ಪಾಕ್‌ ಮಾಜಿ ಆಟಗಾರ ಹೇಳಿದ್ದೇನು?

ದುಬೈನಲ್ಲಿ ಸಂದರ್ಶನವೊಂದರಲ್ಲಿ ಮಾತನಾಡಿರುವ ಶೋಯಿಬ್ ಅಕ್ತರ್‌, ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನವನ್ನು ಅಫ್ಘಾನಿಸ್ತಾನ ನೀಡುವಲ್ಲಿ ಸಫಲರಾದರೆ, ನಿಶ್ಚಿತವಾಗಿ ಸೆಮಿಫೈನಲ್ ಪ್ರವೇಶಿಸಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಭಾರತ, ಪಾಕಿಸ್ತಾನ ತಂಡಗಳು ಈ ಟೂರ್ನಿಯ ಉಪಾಂತ್ಯವನ್ನು ಪ್ರವೇಶಿಸಲಿವೆ ಎಂಬ ಅಭಿಪ್ರಾಯವನ್ನು ಅಖ್ತರ್ ಹೊಂದಿದ್ದಾರೆ. ಆದರೆ ಅಖ್ತರ್‌ ಸೆಮೀಸ್ ತಲುಪುವ ನಾಲ್ಕನೇ ತಂಡವನ್ನು ಹೆಸರಿಸಿಲ್ಲ.

ಅಫ್ಘಾನಿಸ್ತಾನ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಭಾರತದಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ಆರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತ್ತು. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಆಫ್ಘಾನ್ ತಂಡ ಐಸಿಸಿ ಈವೇಂಟ್‌ಗಳಲ್ಲಿ ಸ್ಥಿರ ಪ್ರದರ್ಶನ ನೀಡುತ್ತಲೇ ಇದೆ.

India-Pakistan Final Shoaib Akhtar Predicts Champions Trophy 2025 Semi-Finalists

ಇನ್ನು ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶ ತಂಡಗಳು ಲೀಗ್‌ ಹಂತದಲ್ಲಿ ತಮ್ಮ ಪ್ರಯಾಣವನ್ನು ಮುಗಿಸಲಿವೆ ಎಂದು ಅಖ್ತರ್ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಫೆಬ್ರವರಿ 23 ರಂದು ನಡೆಯಲಿರುವ ಲೀಗ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನ, ಭಾರತವನ್ನು ಮಣಿಸಲಿದೆ. ಅಲ್ಲದೆ ಸಾಂಪ್ರದಾಯಿಕ ಎದುರಾಳಿಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ ಎಂದು ಅಖ್ತರ್ ಭವಿಷ್ಯ ನುಡಿದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಮುಖಾಮುಖಿ ಆಗಿದ್ದವು. ಇನ್ನು ಭಾರತ ಸಹ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಈಗ ಮತ್ತೊಮ್ಮೆ ಅದೇ ಇತಿಹಾಸವನ್ನು ಸೃಷ್ಟಿಸುವ ಕನಸಿನಲ್ಲಿ ರೋಹಿತ್‌ ಪಡೆ ಪ್ಲ್ಯಾನ್ ಮಾಡಿಕೊಂಡಿದೆ.

ಭಾರತ, ಪಾಕಿಸ್ತಾನ, ನ್ಯೂಜಿಲೆಂಡ್‌ ಹಾಗೂ ಬಾಂಗ್ಲಾದೇಶಗಳು "ಎ" ಗುಂಪಿನಲ್ಲಿ ಸ್ಥಾನ ಪಡೆದಿವೆ. ಇನ್ನು ಆಸ್ಟ್ರೇಲಿಯಾ, ಇಂಗ್ಲೆಂಡ್‌, ದಕ್ಷಿಣ ಆಫ್ರಿಕಾ ಹಾಗೂ ಅಫ್ಘಾನಿಸ್ತಾನ ತಂಡಗಳು "ಬಿ" ಗುಂಪಿನಲ್ಲಿ ಸ್ಥಾನ ಪಡೆದಿವೆ. ಈ ಐಸಿಸಿ ಮೆಗಾ ಟೂರ್ನಿ ಫೆ.19 ರಂದು ಆರಂಭವಾಗಲಿದೆ. ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸದ ಹಿನ್ನೆಲೆಯಲ್ಲಿ ತಮ್ಮ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿ ಹೈಬ್ರೀಡ್‌ ಮಾಡೇಲ್‌ನಲ್ಲಿ ನಡೆಯಲಿದೆ.

Story first published: Saturday, February 8, 2025, 15:13 [IST]
Other articles published on Feb 8, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+