ಕೆಣಕಿದ್ದು ಪಾಕ್‌, ಗೆದ್ದು ಬೀಗಿದ್ದು ಭಾರತ: ವಿಶ್ವಕಪ್ ಅವಿಸ್ಮರಣೀಯ ಕ್ಷಣಗಳು

https://kannada.mykhel.com/cricket/india-vs-pakistan-not-just-emotions-even-profitability-is-in-fans-mind-008610.html

ನವದೆಹಲಿ, ಜೂನ್ 16: ಕ್ರಿಕೆಟ್ ಅಂತೇನಲ್ಲ ಎಲ್ಲಾ ಕ್ರೀಡಾ ಸ್ಪರ್ಧೆಗಳಲ್ಲೂ ಪಾಕಿಸ್ತಾನ ಮತ್ತು ಭಾರತ ಬದ್ಧ ಎದುರಾಳಿಗಳು. ಆದರೆ ಹೆಚ್ಚು ಕುತೂಹಲ, ರೋಚಕತೆ ಆವರಿಸೋದು ಇತ್ತಂಡಗಳ ಕ್ರಿಕೆಟ್ ಸೆಣಸಾಟದ ವೇಳೆ. ವಿಶ್ವಕಪ್ ಸಂದರ್ಭ ಇತ್ತಂಡಗಳ ಕದನ ಇಂಥ ಅನೇಕ ಕ್ಷಣಗಳಿಗೆ ಸಾಕ್ಷಿಯಾಗಿವೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಪ್ರತಿಷ್ಠಿತ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು 6 ಬಾರಿ ಮುಖಾಮುಖಿಯಾಗಿವೆ. ಗಮ್ಮತ್ತೂಂದ್ರೆ ಈ ಆರೂ ಪಂದ್ಯಗಳಲ್ಲೂ ಭಾರತ ಮೇಲುಗೈ ಸಾಧಿಸಿತ್ತು. ವಿಶ್ವಕಪ್‌ನಲ್ಲಿ ಭಾರತ 2 ಸಾರಿ ಚಾಂಪಿಯನ್‌ ಆಗಿದ್ದರೆ, ಪಾಕ್ ಕೂಡ ಒಂದು ಬಾರಿ ಟ್ರೋಫಿ ಜಯಿಸಿದೆ.

ಭಾರತ vs ಪಾಕ್: ಇಲ್ಲಿ ಬರೀ ಭಾವನೆಗಳಿಲ್ಲ, ಭರ್ಜರಿ ಬ್ಯುಸಿನೆಸ್ಸೂ ಇದೆ!

ವಿಶ್ವಕಪ್ ಮುಖಾಮುಖಿಯ ವೇಳೆ ಕಾಲು ಕೆರೆದು ಕೆಣಕುತ್ತಿದ್ದುದು ಪಾಕಿಸ್ತಾನ, ಮತ್ತೆ ಪ್ರತೀಸಾರಿಯೂ ಸೋಲಿನ ಮುಖಂಭ ಅನುಭವಿಸುತ್ತಿದ್ದುದೂ ಪಾಕಿಸ್ತಾನವೆ. ಅಂಥ ಕೆಲ ಅವಿಸ್ಮರಣೀಯ ಪಂದ್ಯಗಳ ಚಿತ್ರಣ ಇಲ್ಲಿದೆ.

ವೆಂಕಟೇಶ್ vs ಆಮೀರ್ ಸೊಹೈಲ್

ವೆಂಕಟೇಶ್ vs ಆಮೀರ್ ಸೊಹೈಲ್

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 1996ರಲ್ಲಿ ನಡೆದಿದ್ದ ವಿಲ್ಸ್ ವರ್ಲ್ಡ್ ಕಪ್ 2ನೇ ಕ್ವಾರ್ಟರ್ ಫೈನಲ್ ಪಂದ್ಯವಿದು. ಮೊದಲು ಇನ್ನಿಂಗ್ಸ್ ಆಡಿದ್ದ ಭಾರತ ನವಜೋತ್ ಸಿಂಗ್ ಸಿಧು 93 ರನ್ ನೆರವಿನೊಂದಿಗೆ 287 ರನ್ ಬಾರಿಸಿತ್ತು. ಪಾಕಿಸ್ತಾನ ಇನ್ನಿಂಗ್ಸ್‌ನಲ್ಲಿ ವೆಂಕಟೇಶ್ ಪ್ರಸಾದ್ ಅವರ 14.5ನೇ ಓವರ್‌ಗೆ ಸೊಹೈಲ್ ಬೌಂಡರಿ ಬಾರಿಸಿದರು. ಮುಂದಿನ ಎಸೆತವೂ ಚೆಂಡು ಅಲ್ಲಿಗೆ ಹೋಗಲಿದೆ ಎಂದು ಪ್ರಸಾದ್ ಅವರನ್ನು ಸೊಹೈಲ್ ಅಣಕಿಸಿದರು. ಆದರೆ ಓವರ್‌ನ ಕೊನೇ ಎಸೆತಕ್ಕೆ ಸೊಹೈಲ್ ಬೌಲ್ಡ್ ಔಟ್ ಆಗಿ ಪೆಚ್ಚುಮೋರೆ ಹಾಕಿ ನಡೆಯಬೇಕಾಗಿತ್ತು. ಈ ಪಂದ್ಯದಲ್ಲಿ ಭಾರತ 39 ರನ್‌ಗಳ ಗೆಲುವನ್ನಾಚರಿಸಿತ್ತು.

ಮಿಯಾಂದಾದ್ vs ಕಿರಣ್ ಮೋರೆ

ಮಿಯಾಂದಾದ್ vs ಕಿರಣ್ ಮೋರೆ

1992ರಲ್ಲಿ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ ಬೆನ್ಸನ್ ಹೆಡ್ಜಸ್ ವಿಶ್ವಕಪ್ 16ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಎದುರು ಬದುರಾಗಿದ್ದವು. ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ, ಅಜಯ್ ಜಡೇಜಾ 46, ನಾಯಕ ಮೊಹಮ್ಮದ್ ಅಝರುದ್ದೀನ್ 32, ಸಚಿನ್ ತೆಂಡೂಲ್ಕರ್ ಅಜೇಯ 54, ಕಪಿಲ್ ದೇವ್ 35 ರನ್‌ನೊಂದಿಗೆ 216 ರನ್ ಬಾರಿಸಿತ್ತು. ಗುರಿ ಬೆಂಬತ್ತಿದ ಪಾಕಿಸ್ತಾನ 48.1 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 173 ರನ್ ಬಾರಿಸಿ 43 ರನ್‌ಗಳಿಂದ ಶರಣಾಗಿತ್ತು. ಈ ಪಂದ್ಯದಲ್ಲಿ ಪಾಕ್ ಇನ್ನಿಂಗ್ಸ್‌ನಲ್ಲಿ ದಾಂಡಿಗ ಜಾವೆದ್ ಮಿಯಾಂದಾದ್ ಅವರು ಭಾರತದ ಕಿರಣ್ ಮೋರೆ ಅವರನ್ನು ಮಿಮಿಕ್ ಮಾಡಿ ತರ್ಲೆತರ್ಲೆಯಾಗಿ ಜಿಗಿದಾಡಿದ್ದರು.

ಮೊಹಮ್ಮದ್ ಕೈಫ್ vs ಅಫ್ರಿದಿ

ಮೊಹಮ್ಮದ್ ಕೈಫ್ vs ಅಫ್ರಿದಿ

ಸೆಂಚುರಿಯನ್ ನಲ್ಲಿ 2003ರಲ್ಲಿ ನಡೆದಿದ್ದ ವಿಶ್ವಕಪ್ ಪಂದ್ಯ ರೋಚಕ ಕ್ಷಣಕ್ಕೆ ಸಾಕ್ಷಿಯಾಗಿತ್ತು. ಈ ಬಾರಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ತಂಡ 273 ರನ್ ಗಳಿಸಿತ್ತು. ಭಾರತದ ಇನ್ನಿಂಗ್ಸ್ ವೇಳೆ ಮೊಹಮ್ಮದ್ ಕೈಫ್ ಅವರನ್ನು ಶಾಹಿದಿ ಅಫ್ರಿದಿ ಅಣಕಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಕೈಫ್ 35 ರನ್ ಸೇರಿಸಿ ತಂಡದ ಗೆಲುವಿಗೆ ಕಾರಣರಾಗಿದ್ದರು. ಅಂದ್ಹಾಗೆ ಕೈಫ್ ವಿಕೆಟ್ ಕೆಡವಿದ್ದು ಅಫ್ರಿದಿ ಅವರೆ. ಈ ಪಂದ್ಯದಲ್ಲೂ ಭಾರತ 6 ವಿಕೆಟ್‌ಗಳ ಜಯ ಗಳಿಸಿತ್ತು.

ಅಜಯ್ ಜಡೇಜಾ vs ವಾಕರ್ ಯೂನಿಸ್

ಅಜಯ್ ಜಡೇಜಾ vs ವಾಕರ್ ಯೂನಿಸ್

1996ರ ವಿಶ್ವಕಪ್ ಪಂದ್ಯ ಮತ್ತೊಂದು ವಿಚಾರಕ್ಕೆ ಗಮನ ಸೆಳೆದಿತ್ತು. ಈ ಪಂದ್ಯದಲ್ಲಿ ಪಾಕಿಸ್ತಾನ ಬೌಲರ್ ವಾಕರ್ ಯೂನಿಸ್‌ ಎಸೆತಗಳಿಗೆ ಅಜಯ್ ಜಡೇಜಾ ಭರ್ಜರಿ ರನ್ ಚಚ್ಚಿದ್ದರು. ಕೇವಲ 25 ಎಸೆತಗಳಿಗೆ ಜಡೇಜಾ 45 ರನ್ ಸಿಡಿಸಿದ್ದರು. ಆದರೆ ಜಡೇಜಾ ವಿಕೆಟ್ ಯೂನಿಸ್‌ಗೆನೇ ಲಭಿಸಿತ್ತು. ಭಾರತ ಪಂದ್ಯವನ್ನು 39 ರನ್‌ ಗಳಿಂದ ಗೆದ್ದಿತ್ತು.

ವಿರಾಟ್ ಕೊಹ್ಲಿ ಶತಕ

ವಿರಾಟ್ ಕೊಹ್ಲಿ ಶತಕ

ಅಡಿಲೇಡ್‌ನಲ್ಲಿ 2015ರಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ-ಪಾಕ್ ತಂಡಗಳು ಸೆಣಸಾಡಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಭರ್ಜರಿ 300 ರನ್ ಬಾರಿಸಿತ್ತು. ಇದರಲ್ಲಿ ಕೊಹ್ಲಿ 107 ರನ್ ಕೂಡ ಸೇರಿತ್ತು. ಪಾಕಿಸ್ತಾನ ತಂಡ 224 ರನ್ನಿಗೆ ಆಲ್ ಔಟ್ ಆಗಿ 76 ರನ್‌ನಿಂದ ತಲೆ ಬಾಗಿತ್ತು. ವಿಶ್ವಕಪ್‌ನಲ್ಲಿ ಪಾಕಿಸ್ಥಾನ ತಂಡ ಭಾರತ ವಿರುದ್ಧ ಗೆದ್ದ ದಾಖಲೆಯಿಲ್ಲ. 12ನೇ ಆವೃತ್ತಿಯ ಈ ವಿಶ್ವಕಪ್‌ನಲ್ಲೂ ವಿರಾಟ್ ಕೊಹ್ಲಿ ಬಳಗ ಗೆಲ್ಲುವ ವಿಶ್ವಾಸವಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, June 16, 2019, 10:04 [IST]
Other articles published on Jun 16, 2019
POLLS

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more