India vs Pakistan Match: ಮಳೆ ಬರುತ್ತಿದ್ದಂತೇ ಮೈದಾನದ ಸಿಬ್ಬಂದಿಗೆ ಸಹಾಯಹಸ್ತ ಚಾಚಿದ ಪಾಕ್ ಆಟಗಾರ; ಮೆಚ್ಚುಗೆ
ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದಲ್ಲಿ ನಡೆದ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಮತ್ತು ಭಾರತ ತಂಡಗಳು ಸೆಡಸಾಡುತ್ತಿವೆ. ಪಂದ್ಯದ ವೇಳೆ ಮಳೆ ಸುರಿದ ಕಾರಣ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮಧ್ಯೆ ಮಳೆ ಸುರಿಯಲಾರಂಭಿಸಿದ ನಂತರ, ಪಾಕಿಸ್ತಾನ ತಂಡದ ಆಟಗಾರ ಫಖರ್ ಜಮಾನ್ ಅವರು ಮೈದಾನದ ಸಿಬ್ಬಂದಿಗೆ ಸಹಾಯಹಸ್ತ ಚಾಚಿದ್ದು, ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಸ್ವಲ್ಪ ಕತ್ತಲಾಗುತ್ತಿದ್ದಂತೆಯೇ ಕೊಲಂಬೊ ನಗರದ ಮೇಲೆ ಮೋಡಗಳು ಕಾಣಿಸಿಕೊಂಡವು. 24.1 ಓವರ್‌ನಲ್ಲಿ ಶಾದಾಬ್ ಖಾನ್ ಬೌಲ್ ಮಾಡುತ್ತಿದ್ದಾಗ ರಭಸವಾಗಿ ಮಳೆ ಸುರಿಯಲು ಆರಂಭಿಸಿತು. ಇದಕ್ಕೂ ಮುನ್ನವೇ ಮೈದಾನ ಸಿಬ್ಬಂದಿ ಕವರ್ ಎಳೆದು ತರಲು ಆಗಲೇ ಸಿದ್ಧರಾಗಿದ್ದರು.

ತುಂತುರು ಮಳೆ ಬರುತ್ತಿದ್ದಂತಯೇ ಮೈದಾನದ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಇಡೀ ಮೈದಾನವನ್ನು ಆವರಿಸಿಕೊಂಡರು. ಆಗ ಪಾಕಿಸ್ತಾನ ತಂಡದ ಫಖರ್ ಜಮಾನ್ ಸಿಬ್ಬಂದಿಗೆ ಪಿಚ್ ಅನ್ನು ಆದಷ್ಟು ಬೇಗ ಕವರ್ ಎಳೆದು ತರಲು ಸಹಾಯ ಮಾಡಿದರು.
ಪಾಕಿಸ್ತಾನ ಬೌಲರ್‌ಗಳ ಬೆವರಿಳಿಸಿದ ರೋಹಿತ್-ಗಿಲ್
ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತದ ಆರಂಭಿಕರಾದ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಪವರ್ ಪ್ಲೇ ಓವರ್‌ಗಳಲ್ಲಿ ಪಾಕಿಸ್ತಾನ ಬೌಲರ್‌ಗಳನ್ನು ದಂಡಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 16.4 ಓವರ್‌ಗಳಲ್ಲಿ 121 ರನ್‌ಗಳ ಜೊತೆಯಾಟ ನೀಡಿತು.
ಪಾಕಿಸ್ತಾನ ಎಡಗೈ ವೇಗಿ ಶಾಹೀನ್ ಶಾ ಆಫ್ರಿದಿ ವಿರುದ್ಧ ಶುಭ್ಮನ್ ಗಿಲ್ ಅಕ್ಷರಶಃ ಆರ್ಭಟಿಸಿದರು. ಆಫ್ರಿದಿ ತಮ್ಮ ಮೊದಲ 3 ಓವರ್‌ಗಳಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟು ಬೆರಳಿನ ಗಾಯಕ್ಕೆ ತುತ್ತಾಗಿ ಮೈದಾನದಿಂದ ಹೊರನಡೆದರು.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆರಂಭಿಕ ಕೆಲವು ಓವರ್‌ಗಳಲ್ಲಿ ನಸೀಮ್ ಶಾ ವಿರುದ್ಧ ಪರದಾಡಿದರೆ, ಸ್ಪಿನ್ನರ್ ಶಾದಾಬ್ ಖಾನ್ ವಿರುದ್ಧ ಆರ್ಭಟಿಸಿದರು. ರೋಹಿತ್ ತಮ್ಮ 50ನೇ ಏಕದಿನ ಅರ್ಧಶತಕ ಗಳಿಸುವಾಗ ಲೆಗ್ ಸ್ಪಿನ್ನರ್‌ಗೆ 3 ಸಿಕ್ಸರ್‌ಗಳನ್ನು ಬಾರಿಸಿದರು.
ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಜೋಡಿ ಪಾಕಿಸ್ತಾನ ವೇಗದ ಬೌಲರ್‌ಗಳ ವಿರುದ್ಧ ಪ್ರಾಬಲ್ಯ ಹೊಂದಿದ್ದರು. ಕೊಲಂಬೊದ ಉತ್ತಮ ಬ್ಯಾಟಿಂಗ್ ಪಿಚ್‌ನಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮೂಲಕ ತಮ್ಮ ಫಾರ್ಮ್ ಮುಂದುವರೆಸಿದರು.
ರೋಹಿತ್ ಶರ್ಮಾ ಅವರು ನಸೀಮ್ ಶಾ ವಿರುದ್ಧ ರನ್ ಗಳಿಸಲು ಪರದಾಡುತ್ತಿದ್ದಾಗ ಪವರ್‌ಪ್ಲೇಯಲ್ಲಿ ವೇಗವಾಗಿ ರನ್ ಗಳಿಸುವ ಜವಾಬ್ದಾರಿಯನ್ನು ಶುಭ್ಮನ್ ಗಿಲ್ ತೆಗೆದುಕೊಂಡರು.
ಬಳಿಕ ರೋಹಿತ್ ಶರ್ಮಾ 49 ಎಸೆತಗಳಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಮೇತ 56 ರನ್ ಗಳಿಸಿ ಔಟಾದರೆ, ಅವರ ಹಿಂದೆಯೇ ಶುಭ್ಮನ್ ಗಿಲ್ 52 ಎಸೆತಗಳಲ್ಲಿ 10 ಬೌಂಡರಿ ಮೂಲಕ 58 ರನ್ ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು.
ಸದ್ಯ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದು, ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಭಾರತ ತಂಡ ಈವರೆಗೆ 24.1 ಓವರ್‌ಗಳಲ್ಲಿ 2 ವಿಕೆಟ್‌ಗೆ 147 ರನ್ ಗಳಿಸಿದೆ. ವಿರಾಟ್ ಕೊಹ್ಲಿ 8 ರನ್ ಮತ್ತು ಕೆಎಲ್ ರಾಹುಲ್ 17 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications