ಡಿಸೆಂಬರ್ 15ರಿಂದ ಭಾರತ- ಪಾಕಿಸ್ತಾನ ಸರಣಿ ಆರಂಭ?
ನವದೆಹಲಿ, ನ.26: ಬಹು ನಿರೀಕ್ಷಿತ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಸರಣಿ ಬಗ್ಗೆ ಮತ್ತೊಂದು ಆಶಾದಾಯಕ ಸುದ್ದಿ ಬಂದಿದೆ. ಐಪಿಎಲ್ ಚೇರ್ಮನ್ ರಾಜೀವ್ ಶುಕ್ಲಾ ಅವರು ಡಿಸೆಂಬರ್ 15ರಿಂದ ಸರಣಿ ಆರಂಭಿಸುವ ನಿರೀಕ್ಷೆಯಿದೆ ಎಂದು ಗುರುವಾರ ಹೇಳಿದ್ದಾರೆ.
ಉಭಯ ದೇಶಗಳ ನಡುವೆ ಸರಣಿ ನಡೆಸಲು ಪಿಸಿಬಿ ಹಾಗೂ ಬಿಸಿಸಿಐ ಸಮ್ಮತಿಸಿವೆ. ಪಾಕಿಸ್ತಾನ ಅಧ್ಯಕ್ಷ ನವಾಜ್ ಷರೀಫ್ ರಿಂದ ಪಿಸಿಬಿ ಅನುಮತಿ ಪಡೆದುಕೊಂಡಿದೆ. ಈಗ ಮೋದಿ ಸರ್ಕಾರದ ಸರದಿ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಗಿಲೆಸ್ ಕ್ಲಾರ್ಕ್ ಅವರ ಮಧ್ಯಸ್ಥಿಕೆಯಲ್ಲಿ ಭಾರತ-ಪಾಕ್ ಟೆಸ್ಟ್ ಸಮರಕ್ಕೆ ಮುಹೂರ್ತ ಫಿಕ್ಸ್ ಮಾಡಲಾಗುತ್ತಿದೆ.ಕೇಂದ್ರ ಸರಕಾರಕ್ಕೆ ಅಧಿಕೃತವಾಗಿ ಮನವಿ ಸಲ್ಲಿಸಿದೆ.

ಕ್ರಿಕೆಟ್ ಪ್ರೇಮಿಗಳಿಗೆ ರಸದೌತಣ ನೀಡಲು ಇಂಗ್ಲೆಂಡ್ ಪಿಚ್ ರೆಡಿ ಮಾಡಿಕೊಳ್ಳಬೇಕಾಗುತ್ತದೆ. ಕೇಂದ್ರ ಸರ್ಕಾರವೇ ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಈ ಹಿಂದೆ ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಲ್ಲಿ ಕ್ರಿಕೆಟ್ ಸರಣಿಗೆ ಅನುಮತಿ ಸಿಕ್ಕಿತ್ತು ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.
ಶ್ರೀಲಂಕಾದಲ್ಲಿ ಭಾರತ ಹಾಗೂ ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿ ಹಾಗೂ ಹಾಗೂ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿ ನಡೆಸಲು ಪಿಸಿಬಿ ಹಾಗೂ ಬಿಸಿಸಿಐ ಚರ್ಚೆ ನಡೆಸಿವೆ. ದುಬೈನಲ್ಲಿ ಬಿಸಿಸಿಐ ಅಧ್ಯಕ್ಷ ಶಶಾಂಕ್ ಮನೋಹರ್ ಹಾಗೂ ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಈ ಕುರಿತು ಬಹುತೇಕ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅದರೆ, ಉಭಯ ದೇಶಗಳ ಸರ್ಕಾರ ಬಯಸಿದರೆ ಮಾತ್ರ ಟೂರ್ನಿ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಎಲ್ಲವೂ ನಿರೀಕ್ಷೆಯಂತೆ ನಡೆದರೆ ಡಿಸೆಂಬರ್ 15ರಿಂದ ಟೂರ್ನಿ ಆರಂಭಗೊಳ್ಳಲಿದೆ. ಮೂರು ಏಕದಿನ ಪಂದ್ಯ ಹಾಗೂ ಎರಡು ಟಿ20 ಪಂದ್ಯಗಳು ನಡೆಯಲಿದೆ. ಜನವರಿ ಮೊದಲ ವಾರದಲ್ಲಿ ಟೆಸ್ಟ್ ಪಂದ್ಯಗಳು ಇಂಗ್ಲೆಂಡ್ ನಲ್ಲಿ ನಡೆಯುವ ಸಾಧ್ಯತೆಯಿದೆ.
2007ರ ನಂತರ ಉಭಯ ದೇಶಗಳ ನಡುವೆ ಟೆಸ್ಟ್ ಸರಣಿ ನಡೆದಿಲ್ಲ. ಆದರೆ, ಪಾಕಿಸ್ತಾನ ತಂಡ 2012-13ರಲ್ಲಿ ಭಾರತ ಪ್ರವಾಸ ಕೈಗೊಂಡಿತ್ತು. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications