Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Asia Cup 2023: ಕಾರ್ಮೋಡದಲ್ಲಿ ಭಾರತ vs ಪಾಕಿಸ್ತಾನ ಥ್ರಿಲ್ಲರ್ ಪಂದ್ಯ; ಮೀಸಲು ದಿನಕ್ಕೂ ಮಳೆ ಭೀತಿ?

ಭಾನುವಾರ, ಸೆಪ್ಟೆಂಬರ್ 10ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು 2023ರ ಏಷ್ಯಾ ಕಪ್ ಪಂದ್ಯಾವಳಿಯ ಹೈ-ವೋಲ್ಟೇಜ್ ಥ್ರಿಲ್ಲರ್ ಸೂಪರ್ 4 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಆದರೆ, ಈ ಪಂದ್ಯಕ್ಕೆ ಮತ್ತೊಮ್ಮೆ ಮಳೆ ಭೀತಿ ಎದುರಾಗಿದ್ದು, ಇದರಿಂದಾಗಿ ಏಷ್ಯಾ ಕಪ್ 2023ರ ರೋಚಕ ಹಣಾಹಣಿಗೆ ಅಡ್ಡಿಪಡಿಸಬಹುದು.

India Pakistan Super 4 Match Weather Report Updates: Rain Possibility On Reserve Day?

ಈ ಮೊದಲು ಕ್ಯಾಂಡಿಯ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಗುಂಪು ಹಂತದ ಪಂದ್ಯ ರದ್ದುಗೊಂಡಿತ್ತು. ಇನ್ನು ಸೂಪರ್ 4 ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 3 ಗಂಟೆಗೆ ಪ್ರಾರಂಭವಾಗಲಿದೆ.

ಅಕ್ಯುವೆದರ್ ಪ್ರಕಾರ, ಕೊಲಂಬೊ ಹವಾಮಾನವು ಒಂದೆರಡು ಗುಡುಗು ಸಹಿತ ದಿನವಿಡೀ ಶೇ.96ರಷ್ಟು ಮೋಡದಿಂದ ಕವಿದಿರುತ್ತದೆ ಮತ್ತು ತೇವಾಂಶವು 84 ಪ್ರತಿಶತದಷ್ಟು ಇರುತ್ತದೆ.

India Pakistan Super 4 Match Weather Report Updates: Rain Possibility On Reserve Day?

ಭಾನುವಾರ ಮಧ್ಯಾಹ್ನದ ಸಮಯದಲ್ಲಿ ಗಾಳಿ ಬೀಸುವಿಕೆಯು ಗಂಟೆಗೆ 41 ಕಿಮೀ ವೇಗದಲ್ಲಿ ಮತ್ತು ನೈಋತ್ಯದಿಂದ ಗಂಟೆಗೆ 20 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ, ಮೋಡದ ಹೊದಿಕೆಯು ಶೇಕಡಾ 100ರಷ್ಟಿರಲಿದ್ದು, ಮಳೆಯ ಸಂಭಾವ್ಯತೆ ಶೇಕಡಾ 96ರಷ್ಟಿದೆ.

ಒಟ್ಟಿನಲ್ಲಿ ಹವಾಮಾನ ಮುನ್ಸೂಚನೆಗಳ ಪ್ರಕಾರ, ಭಾರತ ಮತ್ತು ಪಾಕಿಸ್ತಾನ ಪಂದ್ಯದ ದಿನದಂದು ವರುಣ ದೇವನ ಉಪಸ್ಥಿತಿ ಅನುಭವಿಸುವ ಕಾರಣ ಪಂದ್ಯಕ್ಕೆ ಅಡ್ಡಿಯಾಗುವ ಆತಂಕವಿದೆ.

ಸೆಪ್ಟೆಂಬರ್ 11ರಂದು ಮೀಸಲು ದಿನ
ಭಾನುವಾರ, ಸೆಪ್ಟೆಂಬರ್ 10ರ ನಿಗದಿತ ದಿನದಂದು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ, ಅದೇ ಪಂದ್ಯವನ್ನು ಸೆಪ್ಟೆಂಬರ್ 11ರ ಮೀಸಲು ದಿನದಂದು ಪುನರಾರಂಭ ಮಾಡಲಾಗುತ್ತದೆ.

ವಿಶೇಷವಾಗಿ ಈ ಪಂದ್ಯಕ್ಕಾಗಿ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೂಪರ್ 4ನಲ್ಲಿ ಭಾಗವಹಿಸುವ ಎಲ್ಲಾ ನಾಲ್ಕು ತಂಡಗಳ ಮಂಡಳಿಗಳ ಅನುಮತಿಯೊಂದಿಗೆ, ಭಾರತ ಮತ್ತು ಪಾಕಿಸ್ತಾನ ಪಂದ್ಯಕ್ಕಾಗಿ ಮೀಸಲು ದಿನವನ್ನು ನಿಗದಿಪಡಿಸಲು ನಿರ್ಧರಿಸಿದೆ.

ಗಮನಾರ್ಹವಾಗಿ, ಪಂದ್ಯದ ದಿನದಂದು ಪಂದ್ಯದ ಅಂಪೈರ್‌ಗಳು ಪಂದ್ಯವನ್ನು 90 ನಿಮಿಷಗಳವರೆಗೆ ಮುಂದೂಡಬಹುದು. ಆದರೆ, ಭಾನುವಾರದಂದು ಪಂದ್ಯವು ಪೂರ್ಣಗೊಂಡಿಲ್ಲವಾದರೆ, ಸೋಮವಾರ ಆಟವು ಪುನರಾರಂಭವಾಗುತ್ತದೆ. ಆಟ ಎಲ್ಲಿಗೆ ನಿಂತಿರುತ್ತದೆಯೋ ಅಲ್ಲಿಂದ ಆರಂಭವಾಗಲಿದೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ ಜಿದ್ದಾಜಿದ್ದಿನ ಪಂದ್ಯವನ್ನು ಖಚಿತಪಡಿಸಿಕೊಳ್ಳಲು ಎಸಿಸಿ ತನ್ನ ಎಲ್ಲಾ ಅತ್ಯುತ್ತಮ ಪ್ರಯತ್ನವನ್ನು ಮಾಡುತ್ತಿದೆ. ಏಕೆಂದರೆ, ವಿಶ್ವದ ಕ್ರಿಕೆಟ್ ಅಭಿಮಾನಿಗಳು ಈ ಪಂದ್ಯದಲ್ಲಿ ಇತರರಿಗಿಂತ ಹೆಚ್ಚು ಆಸಕ್ತಿ ಹೊಂದಿದ್ದಾರೆ.

ಒಂದು ವೇಳೆ ಸೂಪರ್ 4ರಲ್ಲಿನ ಎಲ್ಲಾ ಪಂದ್ಯಗಳು ವಾಶ್ ಔಟ್ ಆದರೆ, ಸೆಪ್ಟೆಂಬರ್ 17ರಂದು ನಡೆಯುವ ಫೈನಲ್‌ಗೆ ಪಾಕಿಸ್ತಾನ ತಂಡ ಪ್ರವೇಶಿಸಲಿದೆ ಎಂಬುದನ್ನು ಗಮನಿಸಬೇಕು. ಬಾಬರ್ ಅಜಂ ನಾಯಕತ್ವದ ತಂಡವು ಎರಡನೇ ಸುತ್ತಿನಲ್ಲಿ ಬಾಂಗ್ಲಾದೇಶದ ವಿರುದ್ಧ ಗೆದ್ದು 2 ಅಂಕಗಳನ್ನು ಹೊಂದಿದ್ದಾರೆ.

1
10-2023

ಹೆಚ್ಚಿನ ಅಂಕಗಳನ್ನು ಹೊಂದಿರುವ ತಂಡಗಳು ಫೈನಲ್ ಪ್ರವೇಶಿಸುತ್ತವೆ. ಆದಾಗ್ಯೂ, ಉಳಿದಿರುವ ಎಲ್ಲಾ ಪಂದ್ಯಗಳು ವಾಶ್ ಔಟ್ ಆಗಿ ಸಮಾನ ಅಂಕಗಳನ್ನು ಗಳಿಸಿದ್ದರೆ, ಎರಡನೇ ಫೈನಲಿಸ್ಟ್ ಯಾರು ಎಂಬುದನ್ನು ನಿರ್ಧರಿಸಲು ನಿವ್ವಳ ರನ್‌ರೇಟ್ ವಿಧಾನ ಕಾರ್ಯರೂಪಕ್ಕೆ ಬರಬಹುದು.

Story first published: Saturday, September 9, 2023, 17:00 [IST]
Other articles published on Sep 9, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+