India-Pakistan T20: ಈ ಹಿಂದೆ ಎಂದೂ ನಿರ್ಮಾಣವಾಗದ ದಾಖಲೆ ಈ ಬಾರಿ ಆಗುತ್ತಾ?
ಭಾರತ ಹಾಗೂ ಪಾಕಿಸ್ತಾನ ತಂಡದ ನಡುವಿನ ಕಾಳಗ ಇದೇ ಭಾನುವಾರ ದುಬೈನಲ್ಲಿ ನಡೆಯಲಿದೆ. ಸುಮಾರು ಆರು ತಿಂಗಳ ಬಳಿಕ ಮತ್ತೆ ಸಂಪ್ರದಾಯಿಕ ಎದುರಾಳಿಗಳು ಬೇರೆ ಫಾರ್ಮೆಟ್‌ನಲ್ಲಿ ಎದುರಾಗುತ್ತಿದ್ದಾರೆ. ಈ ಮೊದಲು ಉಭಯ ದೇಶಗಳು 2025 ಚಾಂಪಿಯನ್ಸ್ ಟ್ರೋಫಿ ಏಕದಿನ ಪಂದ್ಯದಲ್ಲಿ ಕಾದಾಟ ನಡೆಸಿದ್ದವು. ಈಗ ಎರಡೂ ದೇಶಗಳು ಮತ್ತೊಮ್ಮೆ ಅಖಾಡದಲ್ಲಿ ಬಿಗ್ ಫೈಟ್ ನಡೆಸಲಿವೆ. ಈ ಕದಾಟವನ್ನು ನೋಡಲು ಇಡೀ ವಿಶ್ವವೇ ಕಾದು ಕುಳಿತಿದೆ.
ಸೆ.14 ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ಟಿ20 ಫಾರ್ಮೆಟ್‌ನಲ್ಲಿ ಮತ್ತೆ ಎದುರಾಗಲಿವೆ. ಈ ವೇಳೆ ಎಲ್ಲರ ಚಿತ್ತ ಸ್ಟಾರ್ ಆಟಗರರ ಮೇಲೆ ನೆಟ್ಟಿದೆ. ಈ ಎರಡೂ ತಂಡಗಳು ಮೈದಾನದಲ್ಲಿ ಕಾದಾಟ ನಡೆಸಿದಾಗ ಹಲವು ದಾಖಲೆಗಳು ಸೃಷ್ಟಿಯಾಗಿವೆ. ಆದರೆ ಆ ಒಂದು ದಾಖಲೆಯನ್ನು ಇನ್ನು ಯಾರೂ ನಿರ್ಮಿಸಿಲ್ಲ. ಹೀಗಾಗಿ ಈ ಬಾರಿಯಾದರೂ ಆ ದಾಖಲೆ ನಿರ್ಮಾಣವಾಗುತ್ತದಾ ಎಂಬ ಬಯಕೆ ಅಭಿಮಾನಿಗಳದ್ದಾಗಿದೆ. ಆ ದಾಖಲೆ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಟಿ20 ಫಾರ್ಮೆಟ್‌ನಲ್ಲಿ ಒಟ್ಟು 13 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ ಭಾರತ 10 ಹಾಗೂ ಪಾಕ್ 3 ಪಂದ್ಯಗಳಲ್ಲಿ ಜಯ ಸಾಧಿಸಿದೆ. ಆದರೆ ಈ ಎರಡೂ ತಂಡದ ಪರ ಟಿ20 ಫಾರ್ಮೆಟ್‌ನಲ್ಲಿ ಯಾವೊಬ್ಬ ಪ್ಲೇಯರ್ ಶತಕ ಬಾರಿಸಿಲ್ಲ. ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ, 2022ರ ಮೆಲ್ಬೋರ್ನ್‌ನಲ್ಲಿ ಬಾರಿಸಿದ್ದ ಅಜೇಯ 82 ರನ್ ಉಭಯ ದೇಶಗಳ ನಡುವಣ ಕಾದಾಟದಲ್ಲಿ ಬಿಗ್ ಸ್ಕೋರ್ ಆಗಿದೆ. ಹೀಗಾಗಿ ಈ ಬಾರಿಯಾದರೂ ಉಭಯ ದೇಶಗಳ ನಡುವಣ ಕಾದಾಟದಲ್ಲಿ ಶತಕ ಸಾಧನೆ ಆಗುತ್ತದಾ ಕಾದು ನೋಡಬೇಕಿದೆ.
ಭರ್ಜರಿ ಫಾರ್ಮ್
ಉಭಯ ತಂಡದಲ್ಲೂ ಸ್ಟಾರ್ ಆಟಗಾರರು ಇದ್ದಾರೆ. ಆದರೆ ಟಿ20 ಫಾರ್ಮೆಟ್‌ನಲ್ಲಿ ತಮ್ಮ ಬಿರುಸಿನ ಆಟದಿಂದ ಹೆಸರು ಮಾಡಿದ ಆಟಗಾರರು ಅಭಿಷೇಕ್ ಶರ್ಮಾ, ಸೂರ್ಯಕುಮಾರ್ ಯಾದವ್ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಇಬ್ಬರೂ ಆಟಗಾರರು ಟಿ20 ಫಾರ್ಮೆಟ್‌ನಲ್ಲಿ ಶತಕದ ಸಾಧನೆಯನ್ನು ಮಾಡಿದ್ದಾರೆ. ಹೀಗಾಗಿ ಈ ಪ್ಲೇಯರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಅಲ್ಲದೆ ಈ ಇಬ್ಬರೂ ಆಟಗಾರರು ಭರ್ಜರಿ ಫಾರ್ಮ್‌ನಲ್ಲಿದ್ದಾರೆ.
ಸೆ.9 ರಿಂದ ಆರಂಭವಾದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಶುಭಾಂರಭ ಮಾಡಿದೆ. ಆಡಿದ ಮೊದಲ ಪಂದ್ಯದಲ್ಲಿ ಭಾರತ 9 ವಿಕೆಟ್‌ಗಳಿಂದ ಯುಎಇ ವಿರುದ್ಧ ಭರ್ಜರಿ ಜಯ ದಾಖಲಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications