Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ-ಪಾಕ್‌ ಉದ್ವಿಗ್ನತೆ ಮುಂದುವರೆದ್ರೆ ಧೋನಿ, ಸಚಿನ್‌ ಬಾರ್ಡರ್‌ಗೆ ಹೋಗ್ತಾರಾ?

ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನತೆ ಮುಂದುವರೆದಿದೆ. ಏಪ್ರಿಲ್‌ 22 ರಂದು ಪಹಲ್ಗಾಮ್‌ನಲ್ಲಿ 26 ಅಮಾಯಕಿರ ಪ್ರಾಣವನ್ನು ಉಗ್ರರರು ತೆಗೆದಿದ್ದಕ್ಕೆ, ಭಾರತ ಪ್ರತಿಕಾರ ತೀರಿಸಿಕೊಂಡಿದೆ. ಅಂದರೆ ಪಾಕ್‌ನ 9 ಕಡೆಗಳಲ್ಲಿ ಮಿಸೈಲ್‌ ದಾಳಿ ನಡೆಸಿದೆ. ಇದಕ್ಕೂ ಸುಮ್ಮನಾಗದ ಪಾಕ್‌ ಮತ್ತೆ ಭಾರತದ ಗಡಿ ರಕ್ಷಣಾ ರೇಖೆಯನ್ನು ದಾಟಿ ದಾಳಿ ನಡೆಸಿದಾಗ, ಅಲ್ಲೋಲ ಕಲ್ಲೋಲ ಸೃಷ್ಟಿಯಾಯಿತು. ಇದರಿಂದ ಸೇನೆ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸದಿದ್ದರೆ, ಪ್ರಾದೇಶಿಕ ಸೇನೆಯನ್ನು ಸಹ ಸನ್ನದ್ಧರಾಗಿರಲು ಕೇಳಲಾಗಿದೆ ಎಂಬ ದೊಡ್ಡ ಸುದ್ದಿ ಹೊರಬಿದ್ದಿದೆ.

ಗುರುವಾರ ರಾತ್ರಿ ಪಾಕಿಸ್ತಾನ ಭಾರತದ ಪಂಜಾಬ್ ರಾಜಸ್ಥಾನ, ಜಮ್ಮ ಕಾಶ್ಮೀರ್‌ದ ಮೇಲೆ ದಾಳಿ ನಡೆಸಲು ವಿಫಲ ಯತ್ನವನ್ನು ಮಾಡಿತು. ಇದಕ್ಕೆ ಪ್ರತಿಯಾಗಿ ಭಾರತ ಪ್ರತಿ ಉತ್ತರ ನೀಡಿ ಪಾಕ್‌ ಮಿಸೈಲ್‌ಗಳನ್ನು ಆಗಸದಲ್ಲೇ ಹೊಡೆದು ಉರುಳಿಸಿದೆ. ಇದರ ಭೀತಿ ಐಪಿಎಲ್‌ ಮೇಲೂ ಬಿದ್ದಿದ್ದು, ಈ ಶ್ರೀಮಂತ ಲೀಗ್‌ನ್ನು ರದ್ದುಗೊಳಿಸಲಾಗಿದೆ. ಈ ಬಗ್ಗೆ ಶುಕ್ರವಾರ ಬಿಸಿಸಿಐ ಹಾಗೂ ಐಪಿಎಲ್‌ ಮಂಡಳಿ ಸಭೆ ನಡೆಸಿದ ಬಳಿಕ ಮಹತ್ವದ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈಗ ಸೇನೆ ಪ್ರಾದೇಶಿಕ ಸೇನೆಗೆ ಸನ್ನದ್ಧರಾಗಲು ತಿಳಿಸಿದೆ. ಒಂದು ವೇಳೆ ಈ ಪರಿಸ್ಥಿತಿ ಮುಂದುವರೆದರೆ ಧೋನಿ, ಸಚಿನ್‌ ಸಹ ತಮ್ಮ ಕರ್ತವ್ಯಕ್ಕೆ ಸಿದ್ಧರಾಗಬೇಕಾಗುತ್ತದೆ.

India-Pakistan Tensions Rise Could Dhoni and Sachin Be Sent to the Frontlines

ಅಂದಹಾಗೆ ಕೂಲ್‌ ಕ್ಯಾಪ್ಟನ್ ಖ್ಯಾತಿಯ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸೇನೆಯ ಭಾಗವಾಗಿದ್ದಾರೆ. ಇವರಿಗೆ ಲೆಫ್ಟಿನಿಂಎಟ್‌ ಕರ್ನಲ್‌ ಗೌರವ ಬಿರುದನ್ನು ನೀಡಲಾಗಿದೆ. ಇನ್ನು ಸಚಿನ್ ತೆಂಡೂಲ್ಕರ್‌ ಸಹ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ಗೌರವ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಿಳಿಗೊಳ್ಳದೇ ಇದ್ದಲ್ಲಿ ಈ ಇಬ್ಬರೂ ಆಟಗಾರರು ಗಡಿಯತ್ತ ಮುಖ ಮಾಡಬೇಕಾಗುತ್ತದೆ.

ಪ್ರಾದೇಶಿಕ ಸೈನ್ಯ ಎಂದರೇನು?

ಈ ಸೇನೆಯ ಸೈನಿಕರು ನೇರವಾಗಿ ಸೈನ್ಯದಲ್ಲಿ ಇರುವುದಿಲ್ಲ. ಇವರಿಗೆ ಸೇನೆ ಟ್ರೇನಿಂಗ್ ಆಗಿರುತ್ತದೆ. ಯುದ್ಧದ ಸಮಯ ಬಂದಾಗ ಇವರಿಗೆ ಈ ತುಕುಡಿಯನ್ನು ನಿಯೋಜಿಸಲಾಗುತ್ತದೆ. ಪ್ರದೇಶಿಕ ಸೈನಿಕರಿಗೆ ಸೇನೆಯಿಂದಲೇ ತರಬೇತಿ ನೀಡಲಾಗುತ್ತದೆ. ಬಿಕ್ಕಟ್ಟಿನ ಸಮಯದಲ್ಲಿ ಈ ಸೇನೆ ಆಂತರಿಕ ಭದ್ರತೆಯನ್ನು ಒದಗಿಸುವುದು ಕೂಡಾ ಆಗಿದೆ.

India-Pakistan Tensions Rise Could Dhoni and Sachin Be Sent to the Frontlines

ಐಪಿಎಲ್‌ ಮುಂದಿನ ವೇಳಾ ಪಟ್ಟಿಯ ಬಗ್ಗೆ ಇನ್ನೇನು ಮಾಹಿತಿ ಹೊರ ಬೀಳಬೇಕಿದೆ. ಈ ವೇಳೆಗೆ ವಿದೇಶಿ ಹಾಗೂ ದೇಶಿಯ ಆಟಗಾರರಿಗೆ ತವರಿಗೆ ತೆರಳುವಂತೆ ಸೂಚಿಸಲಾಗಿದೆ. ಪರಿಸ್ಥಿತಿ ತಿಳಿಗೊಂಡ ಬಳಿಕ ಐಪಿಎಲ್‌ ಮುಂದಿನ ಪಂದ್ಯಗಳನ್ನು ಎಲ್ಲಿ ಆಯೋಜಿಸಲಾಗುತ್ತದೆ ಎಂಬ ಬಗ್ಗೆ ಬಿಸಿಸಿಐ ಸ್ಪಷ್ಟ ಸಂದೇಶವನ್ನು ನೀಡಲಿದೆ. ಇನ್ನು ಈ ಬಾರಿಯ ಐಪಿಎಲ್‌ನಲ್ಲಿ 16 ಪಂದ್ಯಗಳು ಬಾಕಿ ಇದ್ದವು. ಲೀಗ್‌ ಪಂದ್ಯ ಕೊನೆಯ ಹಂತಕ್ಕೆ ಬಂದು ನಿಂತ್ತಿತ್ತು. ಇನ್ನು ಪ್ಲೇ ಆಫ್‌, ಕ್ವಾಲಿಫೈರ್‌, ಫೈನಲ್‌ ಪಂದ್ಯಗಳು ನಡೆಯುವುದು ಬಾಕಿದೆ. ಈ ಪಂದ್ಯಗಳ ವೇಳಾಪಟ್ಟಿಗಳನ್ನು ಬಿಸಿಸಿಐ ಪರಿಸ್ಥಿತಿಯನ್ನು ಅವಲೋಕಿಸಿ ತೀರ್ಮಾನವನ್ನು ತೆಗೆದುಕೊಳ್ಳಲಿದೆ.

Story first published: Friday, May 9, 2025, 20:36 [IST]
Other articles published on May 9, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+