Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇಂಡೋ-ಪಾಕ್ ಕದನ, ಹೊಸ ದಾಖಲೆ ನಿರ್ಮಾಣ

ಮುಂಬೈ, ಫೆ.26: 'ಮದರ್ ಆಫ್ ಆಲ್ ಬ್ಯಾಟಲ್' ಎಂದು ಕರೆಸಿಕೊಳ್ಳುವ ಇಂಡೋ ಪಾಕ್ ಕ್ರಿಕೆಟ್ ಕದನ ಈ ಬಾರಿ ಕೂಡಾ ನಿರೀಕ್ಷೆಯಂತೆ ಟೆಲಿವಿಷನ್ ಲೋಕದಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕ್ರಿಕೆಟ್ ಪ್ರೇಮಿಗಳ ಮೈಯಲ್ಲಿ ಮಿಂಚಿನ ಸಂಚಾರ ಹುಟ್ಟಿಸುವ ಬಹು ನಿರೀಕ್ಷಿತ ಕಾಳಗ ಭರ್ಜರಿ ಬೆಲೆ ತಂದು ಕೊಟ್ಟಿದೆ.

ಫೆ.15ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಅಡಿಲೇಡ್ ನಲ್ಲಿ ನಡೆದ ವಿಶ್ವಕಪ್ ಪಂದ್ಯ ವೀಕ್ಷಿಸಿದವರ ಸಂಖ್ಯೆ ಹೊಸ ಇತಿಹಾಸ ಸೃಷ್ಟಿಸಿದೆ. ಭಾರತದ ಟಿವಿ ಇತಿಹಾಸದಲ್ಲೇ ಅತಿ ಹೆಚ್ಚಿನ ವೀಕ್ಷಣೆ ಕಂಡಿದೆ. 288 ಮಿಲಿಯನ್ ಪ್ರೇಕ್ಷಕರು ಭಾರತ-ಪಾಕಿಸ್ತಾನ ಪಂದ್ಯವನ್ನು ವೀಕ್ಷಿಸಿದ್ದಾರೆ ಎಂದು ಕಿರುತೆರೆ ಲೋಕದ ಟಿಆರ್ ಪಿ ದಾಖಲೆಗಳು ಹೇಳುತ್ತಿವೆ. [ಟೀಂ ಇಂಡಿಯಾ ಬಗ್ಗೆ ಪೂರ್ಣ ಗೈಡ್]

India-Pakistan World Cup match creates Indian TV history

ನಾಲ್ಕು ವರ್ಷಗಳ ನಂತರ ವಿಶ್ವಕಪ್ ಪಂದ್ಯದಲ್ಲಿ ಮತ್ತೊಮ್ಮೆ ಪಾಕಿಸ್ತಾನವನ್ನು ಟೀಂ ಇಂಡಿಯಾ ಮಣಿಸಿದ್ದು ಹೆಚ್ಚಿನ ವೀಕ್ಷಕರನ್ನು ಸೆಳೆಯಿತು. ಬದ್ಧವೈರಿಗಳ ನಡುವಿನ ಕದನಕ್ಕೆ 14.8 ಟಿವಿಆರ್ (ಟಿಎಎಂ ಡಾಟಾ ಎಂ15+ ಎಬಿಸಿ), ಸ್ಟಾರ್ ನೆಟ್ವರ್ಕ್ ಹಾಗೂ ದೂರದರ್ಶನ (ಡಿಡಿ) ಪ್ರಸಾರದಿಂದ ಬಂದಿದೆ.

ಸ್ಟಾರ್ ನೆಟ್ವರ್ಕ್ ನಿಂದ 11.9 ಟಿವಿಆರ್ (ಟಿಎಎಂ ಡಾಟಾ ಎಂ 15 + ಎಬಿಸಿ) ಹಾಗೂ ಡಿಡಿಯಿಂದ 2.9 ಟಿವಿಆರ್ (ಟಿಎಎಂ ಡಾಟಾ ಎಂ 15 + ಎಬಿಸಿ) ಲಭಿಸಿದೆ. ಮಾ.30ರಂದು ನಡೆದ ಭಾರತ-ಪಾಕಿಸ್ತಾನ ನಡುವಿನ 2011 ವಿಶ್ವಕಪ್ ನ ಪಂದ್ಯವನ್ನು ವಿಶ್ವದೆಲ್ಲೆಡೆ ಸುಮಾರು 988 ಮಿಲಿಯನ್ ಮಂದಿ ವೀಕ್ಷಿಸಿದ್ದರು.

ಸ್ಟಾರ್ ಸ್ಫೋರ್ಟ್ ಪ್ರಚಾರ ನಡೆಸಲು ಬಳಸಿದ 'ಮೌಕಾ' ಜಾಹೀರಾತು ಸೂಪರ್ ಹಿಟ್ ಆಗಿದ್ದು, ಫ್ಯಾನ್ಸ್ ಗಳು ಪಟಾಕಿ ಸಿಡಿಸುವ ಬಗ್ಗೆ ಬರುವ ಆಡ್ 17 ಮಿಲಿಯನ್ ಗೂ ಅಧಿಕ ಆನ್ ಲೈನ್ ವೀಕ್ಷಣೆ ಕಂಡಿದೆ. [ನ್ಯಾಯಾಲಯದ ಮೆಟ್ಟಿಲೇರಿದ ಪಾಕ್ ಕಳಪೆ ಪ್ರದರ್ಶನ]

ಸ್ಟಾರ್ ಟಿವಿ ಹಿಂದಿ ಚಿತ್ರರಂಗದ ದಿಗ್ಗಜ ಅಮಿತಾಬ್ ಬಚ್ಚನ್ ಅವರನ್ನು ಕರೆಸಿಕೊಂಡು ಕಾಮೆಂಟ್ರಿ ಮಾಡಿಸುವ ಮೂಲಕ ಪ್ರೇಕ್ಷಕರಿಗೆ ಕಿಚ್ಚು ಹಚ್ಚಿದರು. ಕಪಿಲ್ ದೇವ್, ಶೋಯಿಬ್ ಅಖ್ತರ್, ರಾಹುಲ್ ದ್ರಾವಿಡ್ ಹಾಗೂ ಸಂಜಯ್ ಮಂಜೇಕ್ರರ್ ಅವರ ವೀಕ್ಷಕ ವಿವರಣೆ ಹಿಟ್ ಆಗಿದೆ. (ಪಿಟಿಐ)

Story first published: Wednesday, January 3, 2018, 10:02 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+