World Cup 2023 Tickets: ಭಾರತ vs ಪಾಕಿಸ್ತಾನ ಪಂದ್ಯದ ಟಿಕೆಟ್ ಬೆಲೆ ಕೇಳಿದ್ರೆ ಹೃದಯಾಘಾತ ಗ್ಯಾರಂಟಿ!
ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲಿ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಎಲ್ಲಾ ಹತ್ತು ತಂಡಗಳೂ ತಯಾರಿ ನಡೆಸಿದ್ದು, ತಮ್ಮ ಬಲಿಷ್ಠ ತಂಡದ ಆಯ್ಕೆಯಲ್ಲಿ ತೊಡಗಿವೆ.
ಇದೇ ವೇಳೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಮಂಗಳವಾರ, ಸೆಪ್ಟೆಂಬರ್ 5ರಂದು ಬಹು ನಿರೀಕ್ಷಿತ 2023ರ ಏಕದಿನ ವಿಶ್ವಕಪ್‌ಗಾಗಿ ತನ್ನ 15 ಸದಸ್ಯರ ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ.
ಇನ್ನು ಐಸಿಸಿ ಪಂದ್ಯಾವಳಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುವುದನ್ನು ವೀಕ್ಷಿಸಲು ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವು ಕ್ರಿಕೆಟ್ ಜಗತ್ತಿನ ಅತ್ಯಂತ ದೊಡ್ಡ ಪ್ರದರ್ಶನಗಳಲ್ಲಿ ಒಂದಾಗಿರಲಿದೆ.

ಈ ಹಣಾಹಣಿ ಬಹು-ರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಮಾತ್ರ ಸಂಭವಿಸುತ್ತಿರುವ ಕಾರಣ, ಪಂದ್ಯ ವೀಕ್ಷಣೆಯ ತುಡಿತ, ಬೇಡಿಕೆ ಮತ್ತು ನಿರೀಕ್ಷೆಗಳು ವಾಯುಮಂಡಲ ತಲುಪುತ್ತವೆ.
ಅಧಿಕೃತ ಟಿಕೆಟಿಂಗ್ ಪಾಲುದಾರ BookMyShowನಲ್ಲಿ ಟಿಕೆಟ್‌ಗಳು ಮಾರಾಟವಾದ ನಂತರ, ಮತ್ತೊಂದು ಪ್ಲಾಟ್‌ಫಾರ್ಮ್‌ನಲ್ಲಿ ಬೆಲೆಗಳು ಕೂಡ ರಾಕೆಟ್‌ನಂತೆ ಕ್ಷಣದಿಂದ ಕ್ಷಣಕ್ಕೆ ಏರಿಕೆಯಾಗುತ್ತಿದೆ.
ಶನಿವಾರ, ಅಕ್ಟೋಬರ್ 14ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಹೈ-ವೋಲ್ಟೇಜ್ ಪಂದ್ಯ ನಡೆಯಲಿದೆ.

ಆದರೆ, ಆಶ್ಚರ್ಯಕರ ಬೆಳವಣಿಗೆಯಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ವಿಶ್ವಕಪ್ ಪಂದ್ಯದ ಒಂದು ಟಿಕೆಟ್ ಬೆಲೆ ಕೇಳಿದರೆ, ತಲೆ ತಿರುಗಿ ಬೀಳುವುದು ಗ್ಯಾರಂಟಿ. ಹೌದು, Viagogo ಎಂಬ ಪ್ಲಾಟ್‌ಫಾರಂನಲ್ಲಿ ಒಂದು ಟಿಕೆಟ್ ಅನ್ನು 57, 62,676 ರೂಪಾಯಿಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
ಇದು ನರೇಂದ್ರ ಮೋದಿ ಸ್ಟೇಡಿಯಂನ ಮೇಲಿನ ಸ್ಟ್ಯಾಂಡ್‌ನ ಒಂದೇ ಟಿಕೆಟ್‌ನ ಬೆಲೆ ಆಗಿದೆ. ಪಂದ್ಯದ ಆರಂಭಿಕ ಟಿಕೆಟ್ ದರವೇ ಪ್ರತಿ ಪಾಸ್‌ಗೆ 57,198 ರೂಪಾಯಿ ಇದೆ.
ಇದಲ್ಲದೆ, ಭಾರತ ತಂಡದ ಇತರ ಪಂದ್ಯಗಳ ಟಿಕೆಟ್‌ಗಳು ಭಾರಿ ಬೆಲೆಗೆ ಮಾರಾಟವಾಗುತ್ತಿವೆ. ಅಕ್ಟೋಬರ್ 29ರಂದು ಲಕ್ನೋದಲ್ಲಿ ನಡೆಯಲಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯದ ಟಿಕೆಟ್‌ಗಳು ರೋ ಎಫ್‌ನಲ್ಲಿನ ಈಸ್ಟ್ ಅಪ್ಪರ್ ಬ್ಲಾಕ್ 4ಕ್ಕೆ 2.85 ಲಕ್ಷ ರೂಪಾಯಿಗಳಿಗೆ ಮಾರಾಟವಾಗಿದೆ.
Viagogo ಪ್ಲಾಟ್‌ಫಾರಂನಲ್ಲಿ ಈ ಪಂದ್ಯದ ಆರಂಭಿಕ ಬೆಲೆಯೇ 27,285 ರೂಪಾಯಿ ಇದೆ. ಇನ್ನು ಅಕ್ಟೋಬರ್ 8ರಂದು ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯದ ಗರಿಷ್ಠ ಬೆಲೆ 2,09,551 ರೂಪಾಯಿ ಆಗಿದೆ ಎಂದರೆ ನೀವು ನಂಬಲೇಬೇಕು.
ಗಮನಾರ್ಹವಾಗಿ, ಬುಕ್‌ಮೈಶೋನಲ್ಲಿ ಭಾರತ ತಂಡದ ಎಲ್ಲಾ ಪಂದ್ಯಗಳ ಟಿಕೆಟ್‌ಗಳು ಕ್ಷಣಾರ್ಧದಲ್ಲಿ ಮಾರಾಟವಾಗಿವೆ. ಭಾರತ ತಂಡ ತಮ್ಮ ವಿಶ್ವಕಪ್ ಪಂದ್ಯಗಳನ್ನು ಒಂಬತ್ತು ವಿವಿಧ ತಾಣಗಳಲ್ಲಿ ಆಡಲಿದೆ ಮತ್ತು ಅಧಿಕೃತ ಟಿಕೆಟ್ ಪಾಲುದಾರರಲ್ಲಿ ಯಾವುದೇ ಟಿಕೆಟ್‌ಗಳು ಲಭ್ಯವಿಲ್ಲ.
Viagogo ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಇದು "ಲೈವ್ ಸ್ಪೋರ್ಟ್, ಸಂಗೀತ ಮತ್ತು ಮನರಂಜನಾ' ಟಿಕೆಟ್‌ಗಳಿಗಾಗಿ ಜಾಗತಿಕ ಆನ್‌ಲೈನ್ ಪ್ಲಾಟ್‌ಫಾರ್ಮ್ ಆಗಿದೆ.
ಪ್ರಪಂಚದಾದ್ಯಂತದ ಈವೆಂಟ್‌ಗಳಿಗೆ ಟಿಕೆಟ್ ಖರೀದಿದಾರರಿಗೆ ಸಾಧ್ಯವಾದಷ್ಟು ಹೆಚ್ಚಿನ ಟಿಕೆಟ್‌ಗಳನ್ನು ಒದಗಿಸುವ ಗುರಿಯನ್ನು Viagogo ಹೊಂದಿದೆ. ಇದಲ್ಲದೆ, ಪ್ಲಾಟ್‌ಫಾರ್ಮ್‌ನಲ್ಲಿ ಜೋಡಿ ಟಿಕೆಟ್‌ಗಳನ್ನು ಮಾರಾಟ ಮಾಡಲು ಸಹ ಅವಕಾಶವಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications