Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟಿ20: ಪಾಕ್-ಭಾರತ ರನ್ ಹೊಳೆ ಹರಿಸಲು ಪಿಚ್ ರೆಡಿ!

ಧರ್ಮಶಾಲ, ಫೆ. 16: ಕ್ರಿಕೆಟ್ ಅಭಿಮಾನಿಗಳು ಅತ್ಯಂತ ಕಾತುರದಿಂದ ಎದುರು ನೋಡುತ್ತಿರುವ ಐಸಿಸಿ ವಿಶ್ವಟಿ20 ಟೂರ್ನಿಗೆ ಪಿಚ್ ಗಳು ಸಿದ್ಧವಾಗುತ್ತಿವೆ. ಎಲ್ಲರ ಗಮನ ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುವ ಧರ್ಮಶಾಲದ ಪಿಚ್ ನತ್ತ ನೆಟ್ಟಿದೆ. ಮೈದಾನ ಕ್ಯೂರೇಟರ್ ಪ್ರಕಾರ ಈ ಪಿಚ್ ನಲ್ಲಿ ರನ್ ಹೊಳೆ ಹರಿಯಲಿದೆಯಂತೆ.

ಶ್ರೀಲಂಕಾ ವಿರುದ್ಧ ಪುಣೆಯಲ್ಲಿ ನಡೆದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಹಸಿರು ಪಿಚ್ ನಲ್ಲಿ ಪರದಾಡಿದ್ದು ನೆನಪಿರಬಹುದು. ಧರ್ಮಶಾಲದಲ್ಲಿ ಕೂಡಾ ಹಸಿರು ಪಿಚ್ ಇದ್ದರೆ ಗತಿ ಏನು? ಹೊಡಿ ಬಡಿ ಕ್ರಿಕೆಟ್ ಮಜಾ ಎಲ್ಲಿರುತ್ತೆ? ಎಂಬ ಕ್ರಿಕೆಟ್ ಅಭಿಮಾನಿಗಳ ಕೊರಗಿದೆ ಎಚ್ ಪಿಸಿಎ ಸ್ಟೇಡಿಯಂನ ಕ್ಯೂರೇಟರ್ ಉತ್ತರಿಸಿದ್ದಾರೆ. [ವಿಶ್ವ ಟಿ20 ಸಂಪೂರ್ಣ ವೇಳಾಪಟ್ಟಿ]

India-Pakistan match

ಮಾರ್ಚ್ 19ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ಪಂದ್ಯಕ್ಕೆ ಧರ್ಮಶಾಲ ಮೈದಾನದ ಸಜ್ಜಾಗಿದ್ದು, ಹೆಚ್ಚುವರಿ 5,000 ಆಸನಗಳನ್ನು ಅಳವಡಿಸಲಾಗಿದೆ. ಪಂದ್ಯದ ಎರಡು ಇನ್ನಿಂಗ್ಸ್ ನಲ್ಲೂ ರನ್ ಹೊಳೆ ಹರಿಯುವಂತೆ ಪಿಚ್ ರೂಪಿಸಲಾಗಿದೆ. ಹಿಮಾಲಯದ ತಪ್ಪಲಿನ ಈ ಪಿಚ್ ನಲ್ಲಿ ಹೆಚ್ಚಿನ ಸ್ಕೋರ್ ಕಾಣಬಹುದು ಎಂದು ಎಚ್ ಪಿ ಸಿಎ ಮುಖ್ಯ ಕ್ಯೂರೇಟರ್ ಸುನಿಲ್ ಚೌಹನ್ ಅವರು ಐಎಎನ್ಎಸ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. [ವಿಶ್ವ ಟಿ20 ಸಮರಕ್ಕೆ ಸಜ್ಜಾದ ತಂಡಗಳ ಪಟ್ಟಿ]

ಔಟ್ ಫೀಲ್ಡ್ ವೇಗವಾಗಿರಲಿದೆ. 40 ಓವರ್ ಗಳ ಕಾಲ ಬ್ಯಾಟ್ಸ್ ಮನ್ ಸ್ನೇಹಿ ಪಿಚ್ ಇದಾಗಲಿದೆ. ಸದ್ಯಕ್ಕೆ ಪಿಚ್ ನಲ್ಲಿರುವ ಹಸಿರು ಹೊದಿಕೆ ತೆಗೆಯಲಾಗಿದೆ ಫೆಬ್ರವರಿ 28ರ ನಂತರ ಅಸಲಿ ಪಿಚ್ ಚಿತ್ರಣ ನಿಮಗೆ ಸಿಗಲಿದೆ ಎಂದಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯವಲ್ಲದೆ ಮಾರ್ಚ್ 9 ರಿಂದ 13 ರ ತನಕ ನಡೆಯುವ ಅಭ್ಯಾಸ ಪಂದ್ಯಗಳಿಗೂ ಧರ್ಮಶಾಲ ಮೈದಾನವನ್ನು ಒದಗಿಸಲಿದೆ.(ಐಎಎನ್ಎಸ್)

Story first published: Wednesday, January 3, 2018, 10:03 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+