ಟಿ20 ವಿಶ್ವಕಪ್‌ನ ಅತಿ ನಿರೀಕ್ಷಿತ ಪಂದ್ಯಗಳಲ್ಲಿ ಒಂದಾಗಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಭಾನುವಾರ (ಫೆ.15) ಭಾರತ, ಪಾಕ್ ಫೈಟ್‌ಗೆ ಕೊಲಂಬೊ ಮೈದಾನ ಸಾಕ್ಷಿಯಾಗಲಿದೆ. ಈ ಮಹತ್ವದ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಕೆಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿಯಲಿದೆ. ಹಾಗಿದ್ದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹೇಗಿರಲಿದೆ ಎಂಬ ಬಗ್ಗೆ ವಿವರ ಇಲ್ಲಿದೆ.
ಟಿ20 ವಿಶ್ವಕಪ್‌ನಲ್ಲಿ ಭಾರತ ಹಾಗೂ ಪಾಕ್ ತಂಡಗಳು 9ನೇ ಬಾರಿ ಮುಖಾಮುಖಿಯಾಗಲಿವೆ. ಈ ಸೆಣಸಾಟದಲ್ಲಿ ಟೀಮ್ ಇಂಡಿಯಾ ಪ್ರಾಬಲ್ಯ ಮೆರೆದಿದೆ. ಸೂರ್ಯ ಪಡೆ 8ನೇ ಗೆಲುವು ದಾಖಲಿಸುವ ಕನಸು ಕಾಣುತ್ತಿದೆ. ಆದರೆ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಎಚ್ಚರಿಕೆಯಿಂದ ಆಡುವ ಅನಿವಾರ್ಯತೆ ಇದೆ. ಕಳೆದ ಪಂದ್ಯದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವಲ್ಲಿ ಕೊಂಚ ಎಡವಿತ್ತು. ಈ ಸವಾಲನ್ನು ಭಾರತ ಮೆಟ್ಟಿನಿಲ್ಲುವ ಅವಶ್ಯಕತೆ ಇದೆ. ಭಾರತ ಈ ಪಂದ್ಯಕ್ಕಾಗಿ ಯಾರನ್ನೆಲ್ಲಾ ಕಣಕ್ಕೆ ಇಳಿಸಬಹುದು ಎಂಬ ಬಗ್ಗೆ ವರದಿ.

ಅಭಿಷೇಕ್ ಶರ್ಮಾ ಗಾಯಕ್ಕೆ ತುತ್ತಾಗಿದ್ದು, ಇವರು ಸಂಪೂರ್ಣ ಫಿಟ್ ಆಗಿದ್ದಲ್ಲಿ, ಇವರು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆಯಲಿದ್ದಾರೆ. ಒಂದು ವೇಳೆ ಇವರು ಪೂರ್ಣ ಪ್ರಮಾಣದಲ್ಲಿ ಫಿಟ್ ಆಗದಿದ್ದಲ್ಲಿ ಇವರ ಸ್ಥಾನವನ್ನು ಸಂಜು ಸ್ಯಾಮ್ಸನ್ ತುಂಬಲಿದ್ದಾರೆ. ಇವರೊಂದಿಗೆ ವಿಕೆಟ್ ಕೀಪರ್ ಇಶಾನ್ ಕಿಶನ್ ಕಣಕ್ಕೆ ಇಳಿಯಬಹುದು. ಇನ್ನು ಟೀಮ್ ಇಂಡಿಯಾ ಅಚ್ಚರಿಯ ಆರಂಭಿಕ ಆಟಗಾರನನ್ನು ಕಣಕ್ಕೆ ಇಳಿಸಬಹುದಾಗಿದೆ.
ಮೂರನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಆಡಲಿದ್ದು, ಇವರು ತಮ್ಮ ನೈಜ ಆಟವನ್ನು ಆಡಬೇಕಿದೆ. ಇನ್ನು ಇವರು ಪರಿಸ್ಥಿತಿಗೆ ಅನುಗುಣವಾಗಿ ಆಡಬೇಕಿದೆ. ನಾಲ್ಕನೇ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡುವ ಕ್ಷಮತೆಯನ್ನು ಹೊಂದಿದ್ದಾರೆ. ಇವರು ಪಾಕ್ ಬೌಲರ್‌ಗಳನ್ನು ಕಾಡುವ ಅನಿವಾರ್ಯತೆ ಇದೆ. ಅಂದಾಗ ಮಾತ್ರ ಗೆಲವಿನ ಆಸೆ ಫಲಿಸುತ್ತದೆ. ಫಿನಿಷರ ಪಾತ್ರದಲ್ಲಿ ರಿಂಕು ಸಿಂಗ್ ಕಣಕ್ಕೆ ಇಳಿಯಲಿದ್ದು, ಬಿಗ್ ಹಿಟ್‌ಗಳ ಮೂಲಕ ತಂಡಕ್ಕೆ ನೆರವಾಗಬಲ್ಲರು.
ಆಲ್‌ರೌಂಡರ್ ರೂಪದಲ್ಲಿ ಹಾರ್ದಿಕ್ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆಯುವುದು ಫಿಕ್ಸ್. ಇನ್ನು ಇನ್ನೊಬ್ಬ ಆಲ್‌ರೌಂಡರ್ ರೂಪದಲ್ಲಿ ಶಿವಂ ದುಬೆ, ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಇವರು ಇಬ್ಬರೂ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ತಂಡಕ್ಕೆ ಆಧಾರವಾಗಬೇಕಿದೆ.
ಟೀಮ್ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರಿತ್ ಬುಮ್ರಾ ನುರಿತ ವೇಗದ ಬೌಲರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರು ಪವರ್ ಪ್ಲೇ ಹಾಗೂ ಡೆತ್ ಓವರ್‌ಗಳಲ್ಲಿ ಎದುರಾಳಿ ಬ್ಯಾಟರ್‌ಗಳನ್ನು ಕಾಡಬಲ್ಲರು.
ಟಿ20 ಕ್ರಿಕೆಟ್‌ನ ನಂಬರ್ 1 ಬ್ಯಾಟರ್ ವರುಣ್ ಚಕ್ರವರ್ತಿ ಸ್ಪಿನ್ ಪಿರ್ಕಿ ಮೂಲಕ ಎದುರಾಳಿಗಳನ್ನು ಕಾಡಬಲ್ಲರು. ಚೈನಾಮನ್ ಬೌಲರ್ ಖ್ಯಾತಿಯ ಕುಲ್‌ದೀಪ್ ಸಹ ತಂಡದಲ್ಲಿ ಸ್ಥಾನ ಪಡೆಯಬಹುದಾಗಿದೆ. ಈ ಇಬ್ಬರೂ ಸ್ಪಿನ್ ಬೌಲರ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಬೌಲರ್‌ಗಳ ಬೌಲ್ ಗುರುತಿಸುವುದು ಪಾಕ್ ಬ್ಯಾಟರ್‌ಗಳಿಗೆ ಸವಾಲಾಗಲಿದೆ. ಆಲ್‌ರೌಂಡರ್ ರೂಪದಲ್ಲಿ ಸ್ಥಾನ ಪಡೆಯುವ ಅಕ್ಷರ್ ಪಟೇಲ್ ಸಹ ಸ್ಪಿನ್ ಬೌಲಿಂಗ್ ನಡೆಸಿ ಎದುರಾಳಿಗಳನ್ನು ಕಾಡಬಲ್ಲರು. ಇವರು ಇತ್ತೀಚಿಗೆ ತಮ್ಮ ಬೌಲಿಂಗ್‌ನಲ್ಲಿ ಹೊಸ ವೇರಿಯೇಷನ್ ಸೇರಿಸಿಕೊಂಡಿದ್ದು, ಇದರಿದ ಯಶ ಕಾಣುತ್ತಿದ್ದಾರೆ.
ಟೀಮ್ ಇಂಡಿಯಾ ಪಾಕ್ ವಿರುದ್ಧದ ಪಂದ್ಯದಲ್ಲಿ ಯಾವೆಲ್ಲಾ ತಂತ್ರದೊಂದಿಗೆ ಕಣಕ್ಕೆ ಇಳಿಯಲಿದೆ ಎಂಬುದು ಟಾಸ್ ಸಮಯದಲ್ಲಿ ತಿಳಿಯಲಿದೆ.
ಪಾಕ್ ವಿರುದ್ಧದ ಪಂದ್ಯಕ್ಕೆ ಹೇಗಿರಲಿದೆ ಭಾರತದ ಪ್ಲೇಯಿಂಗ್ ಇಲೆವೆನ್?