ಸೆಪ್ಟಂಬರ್ 9 ರಂದು ನಡೆಯಲಿರುವ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಗೆ ಮಂಗಳವಾರ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಪ್ರಕಟಿತ ತಂಡದಲ್ಲಿ ಹಲವು ಸ್ಟಾರ್ ಆಟಗಾರರಿಗೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆಲವು ಆಟಗಾರರ ಹೆಸರುಗಳು ಮಿಸ್ ಆಗಿವೆ. ಆದರೂ ಟೀಮ್ ಇಂಡಿಯಾ ಬಲಾಢ್ಯವಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ತನ್ನ ಅಭಿಯಾನವನ್ನು ಸೆಪ್ಟಂಬರ್ 10 ರಂದು ಆರಂಭಿಸಲಿದೆ.
ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ಆಟಗಾರರಲ್ಲಿ ಅತಿ ಹೆಚ್ಚು ಜನ ಎಡಗೈ ಆಟಗಾರರು. ಅಲ್ಲದೆ ಯುವ ಪ್ರತಿಭೆಗಳು. ಈಗಾಗಲೇ ಈ ಆಟಗಾರರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿದ್ದು, ತಮ್ಮ ಕ್ಷಮತೆ ಸಾಬೀತು ಪಡಿಸಿದ್ದಾರೆ. ಈಗ ಬಿಗ್ ಟುರ್ನಿಯನ್ನು ಆಡಲು ತಾವು ಸಿದ್ಧ ಇರುವುದಾಗಿ ತೋರಿಸಿದ್ದಾರೆ. ಟಿ20 ವಿಶ್ವಕಪ್ ಬಳಿಕ ಟೀಮ್ ಇಂಡಿಯಾ, ಮೊದಲ ಬಿಗ್ ಈವೇಂಟ್‌ನಲ್ಲಿ ಆಡುತ್ತಿದೆ. ಅಷ್ಟೇ ಅಲ್ಲ ಟೀಮ್ ಇಂಡಿಯಾದ ಹಿರಿಯರು ಈಗಾಗಲೇ ಚುಟುಕು ಫಾರ್ಮೆಟ್‌ನಿಂದ ನಿವೃತ್ತರಾಗಿದ್ದಾರೆ. ಈಗ ಬರೀ ಯುವ ಆಟಗಾರರದ್ದೇ ಹಾವಳಿ.

ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದ ಆಟಗಾರರ ಸ್ಟ್ರೈಕ್ ರೇಟ್ ಯಾರದು ಹೆಚ್ಚಿದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಸಾಮಾನ್ಯವಾಗಿ ಅವರ ಆಟದ ಶೈಲಿಯನ್ನು ಕಂಡು ಅಭಿಮಾನಿಗಳು ಸೂರ್ಯಕುಮಾರ್ ಯಾದವ್ ಅವರ ಹೆಸರನ್ನು ಸೂಚಿಸುತ್ತಾರೆ. ಆದರೆ ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿಯಲ್ಲಿ ಟಿ20 ಕ್ರಿಕೆಟ್‌ನ ನಂಬರ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರಿಗೆ ಮೊದಲ ಸ್ಥಾನ. ಇವರ ಸ್ಟ್ರೈಕ್ ರೇಟ್ 193.85 ಆಗಿದೆ.
ಅತಿ ಹೆಚ್ಚು ಸ್ಟ್ರೈಕ್ ರೇಟ್ ಹೊಂದಿರುವ ಆಟಗಾರರ ಪಟ್ಟಿಯನ್ನು ನೋಡಿದರೆ, ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಎರಡನೇ ಸ್ಥಾನ. ಇವರು 167.08ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇನ್ನು ಮೂರನೇ ಸ್ಥಾನದಲ್ಲಿ ಫಿನಿಷರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ರಿಂಕು ಸಿಂಗ್ ಇದ್ದಾರೆ. ಇವರು 161.07ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ತಿಲಕ್ ವರ್ಮಾ ಈ ವಿಚಾರದಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇವರು 155.08 ಸ್ಟ್ರೈಕ್ ರೇಟ್ ಹೊಂದಿದ್ದಾರೆ.

ಟೀಮ್ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ (152.39) ಸಹ ಸ್ಟ್ರೈಕ್ ರೇಟ್ ವಿಚಾರದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಆಟಗಾರ. ಉಳಿದಂತೆ ಜಿತೇಶ್ ಶರ್ಮಾ 147.06, ಹಾರ್ದಿಕ್ ಪಾಂಡ್ಯ 141.68, ಶಿವಂ ದುಬೆ 140.11, ಶುಭಮನ್ ಗಿಲ್ 139.28 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಈ ಸ್ಟ್ರೈಕ್ ರೇಟ್ ವಿಚಾರದಲ್ಲಿ ಶುಭಮನ್ ಗಿಲ್ ಕೆಳಗಿದ್ದಾರೆ. ಆದರೆ ಇವರು ಒಂದೊಮ್ಮೆ ನೆಲಕಚ್ಚಿನಿಂತಲ್ಲಿ ಬಿಗ್ ಇನಿಂಗ್ಸ್ ಕಟ್ಟು ಪ್ಲೇಯರ್. ಹೀಗಾಗಿ ಏಷ್ಯಾ ಕಪ್ ಮುಗಿದ ಬಳಿಕ ಇವರ ಸ್ಟ್ರೈಕ್ ರೇಟ್ ಹೇಗಿರುತ್ತದೆ ಎಂಬುದು ಕುತೂಹಲ ಮೂಡಿಸಿದೆ.