Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

66 ವರ್ಷದ ಭಾರತದ ಮಾಜಿ ಕ್ರಿಕೆಟಿಗನಿಗೆ, 38 ವರ್ಷದ ಬುಲ್‌ ಬುಲ್ ಜೊತೆ ಮದುವೆ

Arun Lal

ಭಾರತದ ಮಾಜಿ ಕ್ರಿಕೆಟಿಗ ಅರುಣ್ ಲಾಲ್ ತಮ್ಮ ದಾಂಪತ್ಯ ಜೀವನದ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. 66 ವರ್ಷದ ಕ್ರಿಕೆಟಿಗ ತನ್ನ ಬಹುಕಾಲದ ಗೆಳತಿ ಬುಲ್‌ಬುಲ್‌ ಸಾಹ ಜೊತೆಗೆ ಮೇ 2, 2022ರಂದು ಹಸೆಮಣೆ ಏರಲಿದ್ದಾರೆ.

ಕಳೆದ ಭಾನುವಾರ (ಏಪ್ರಿಲ್ 24) ಹಳದಿ ಶಾಸ್ತ್ರ ಕಾರ್ಯಕ್ರಮವು ನಡೆದಿದ್ದು, ಈಗಾಗಲೇ ಅರುಣ್ ಹಾಗೂ ಬುಲ್‌ಬುಲ್ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮದುಮಗ ಹಾಗೂ ಮದುಮಗಳಿಗೆ ಹಳದಿ ಹಚ್ಚುವ ಕಾರ್ಯಕ್ರಮದಲ್ಲಿ ಉಭಯ ಕುಟುಂಬದ ಸದಸ್ಯರು ಭಾಗಿಯಾಗಿದ್ರು.

ಅರುಣ್ ಲಾಲ್ ತಮ್ಮ ಎರಡನೇ ಮದುವೆಯಾಗಲು, ಮೊದಲ ಪತ್ನಿಯಿಂದ ಒಪ್ಪಿಗೆ ಪಡೆದ ನಂತರವಷ್ಟೇ ಈ ವಿವಾಹಕ್ಕೆ ಮುಂದಾಗಿದ್ದಾರೆ. ಮೊದಲ ಪತ್ನಿಗೆ ಈಗಾಗಲೇ ಡಿವೋರ್ಸ್ ನೀಡಿದ್ದರೂ ಸಹ, ಅನಾರೋಗ್ಯದ ಕಾರಣ ಅವರು ಅರುಣ್ ಲಾಲ್‌ ಮನೆಯಲ್ಲಿಯೇ ಇದ್ದಾರೆ.

ಮೇ 2ರಂದು ಸಂಜೆ 7 ಗಂಟೆಗೆ ಮದುವೆಯಾಗುತ್ತಿರುವ ಅರುಣ್ ಲಾಲ್ ಹಾಗೂ ಬುಲ್‌ಬುಲ್ ಸಾಹಾ ಮದುವೆಯ ಆಮಂತ್ರಣ ಪತ್ರಿಗೆ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬುಲ್‌ಬುಲ್ ವೃತ್ತಿಪರ ಶಿಕ್ಷಕಿ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ವೆಸ್ಟ್‌ ಬೆಂಗಾಲ್‌ ಕೋಚ್ ಆಗಿರುವ ಅರುಣ್ ಲಾಲ್
ಟೀಂ ಇಂಡಿಯಾ ಪರ 1982 ರಿಂದ 1989ರ ಅವಧಿಯಲ್ಲಿ 16 ಟೆಸ್ಟ್ ಹಾಗೂ 13 ಏಕದಿನ ಪಂದ್ಯಗಳನ್ನ ಆಡಿರುವ ಅರುಣ್ ಲಾಲ್, ಏಳು ಅರ್ಧಶತಕಗಳನ್ನು ದಾಖಲಿಸಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ರೆಕಾರ್ಡ್ ಹೊಂದಿರುವ ಈತ ನಿವೃತ್ತಿ ಬಳಿಕ ವೀಕ್ಷಕ ವಿವರಣೆಗಾರ ಕೆಲಸವನ್ನು ಮಾಡಿದ್ದಾರೆ. ಲಾಲ್ ಅವರಿಗೆ ದವಡೆಯ ಕ್ಯಾನ್ಸರ್ ಇರುವುದು ಪತ್ತೆಯಾಯಿತು, ಇದು ಅವರನ್ನು ಸ್ವಲ್ಪ ಕಾಲ ಕಾಮೆಂಟರಿ ಹಂತದಿಂದ ದೂರವಿಟ್ಟಿತು. ಆದ್ರೆ ಅದರಿಂದ ಹುಷಾರಾದ ಬಳಿಕ ಅವರು ಬಂಗಾಳದ ಕೋಚ್‌ ಆಗಿ ಸೆಲೆಕ್ಟ್ ಆದರು.

ಅರುಣ್ ಲಾಲ್ ಕೋಚಿಂಗ್ ಅವಧಿಯಲ್ಲಿ ಬೆಂಗಾಲ್ ತಂಡ ಉತ್ತಮ ದೇಶೀಯ ಟೂರ್ನಮೆಂಟ್ ಆಡಿದೆ. ಲಾಲ್ ಅವರು ಅಧಿಕಾರ ವಹಿಸಿಕೊಂಡ ನಂತರ ಬಂಗಾಳದ ಭಾಗದಲ್ಲಿ ಗಮನಾರ್ಹ ಬೆಳವಣಿಗೆಗಳನ್ನು ಮಾಡಿದ್ದಾರೆ. 2019-2020 ರ ರಣಜಿ ಟ್ರೋಫಿಯ ಫೈನಲ್‌ಗೆ ಬೆಂಗಾಲ್ ತಲುಪಿದ್ದು, ಸೌರಾಷ್ಟ್ರ ವಿರುದ್ಧ ಕಾದಾಟ ನಡೆಸಿತು. ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ ನಿಕಟ ಮುನ್ನಡೆಯಿಂದ ಗೆದ್ದಿದ್ದರಿಂದ ಬಂಗಾಳವು ಸಿಕ್ಕ ಅವಕಾಶ ಕಳೆದುಕೊಂಡಿತು.

Story first published: Tuesday, April 26, 2022, 16:43 [IST]
Other articles published on Apr 26, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+