For Quick Alerts
ALLOW NOTIFICATIONS  
For Daily Alerts
 

ICC ಮ್ಯಾಚ್‌ ರೆಫ್ರಿಯಾದ ಮೊದಲ ಮಹಿಳೆ ಭಾರತದ ಜಿ.ಎಸ್‌ ಲಕ್ಷ್ಮೀ!

Indias GS Lakshmi becomes first female ICC match referee

ದುಬೈ, ಮೇ 14: ಭಾರತದ ಜಿಎಸ್‌ ಲಕ್ಷ್ಮೀ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ಇಂಟರ್‌ನ್ಯಾಷನ್‌ ಪ್ಯಾನಲ್‌ ಆಫ್‌ ಮ್ಯಾಚ್‌ ರೆಫ್ರೀಸ್‌ಗೆ ಸೇರ್ಪಡೆಯಾದ ಪ್ರಪ್ರಥಮ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದು, ಈ ಕೂಡಲೇ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾರ್ಯೋನ್ಮುಖರಾಗಲು ಅನುಮತಿ ಪಡೆದುಕೊಂಡಿದ್ದಾರೆ.

ಕಳೆದ ತಿಂಗಳು ಕ್ಲೇರ್‌ ಪೊಲೊಸಾಕ್‌ ಪುರುಷರ ಕ್ರಿಕೆಟ್‌ಗೆ ಅಂಪೈರ್‌ ಕಾರ್ಯ ನಿರ್ವಹಿಸಿದ ಮೊತ್ತ ಮೊದಲ ಬಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

2008-09ರಲ್ಲಿ ಮೊದಲ ಬಾರಿ ದೇಶಿ ಟೂರ್ನಿಯಲ್ಲಿ ಮಹಿಳಾ ಕ್ರಿಕೆಟ್‌ಗೆ ಮ್ಯಾಚ್‌ ರೆಫ್ರಿಯಾಗಿ ಕಾರ್ಯ ನಿರ್ವಹಿಸಿದ್ದ 51 ವರ್ಷದ ಲಕ್ಷ್ಮೀ ಜಿ.ಎಸ್‌ ಅವರು ಮಹಿಳಾ ಏಕದಿನ ಮತ್ತು ಮಹಿಳಾ ಅಂತಾರಾಷ್ಟ್ರೀಯ ಟಿ20 ಟೂರ್ನಿಗಳಲ್ಲಿ ತಲಾ ಮೂರು ಪಂದ್ಯಗಳಿಗೆ ಮ್ಯಾಚ್‌ ರೆಫ್ರಿ ಜವಾಬ್ದಾರಿ ನಿಭಾಯಿಸಿದ್ದಾರೆ.

"ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ(ಐಸಿಸಿ)ಯ ಅಂತಾರಾಷ್ಟ್ರೀಯ ಪ್ಯಾನಲ್‌ಗೆ ಆಯ್ಕೆಯಾಗಿರುವುದು ದೊಡ್ಡ ಗೌರವ, ಇದರಿಂದ ಮತ್ತಷ್ಟು ವಿಶಾಲವಾದ ಮಾರ್ಗಗಗಳು ತೆರೆದುಕೊಂಡಿವೆ. ಭಾರತದಲ್ಲಿ ಒಬ್ಬ ಕ್ರಿಕೆಟರ್‌ ಆಗಿ ಮತ್ತು ಮ್ಯಾಚ್‌ ರೆಫ್ರಿಯಾಗಿ ಸುದೀರ್ಘಾವಧಿಯ ವೃತ್ತಿ ಜೀವನ ಹೊಂದಿದ್ದೇನೆ. ಆಟಗಾರ್ತಿಯಾಗಿ ಮತ್ತು ಮ್ಯಾಚ್‌ ರೆಫ್ರಿಯಾಗಿ ಗಳಿಸಿರುವ ಅನುಭವವನ್ನು ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಿಕೊಂಡು ಉತ್ತಮ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ,'' ಎಂದು ಐಸಿಸಿ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಲಕ್ಷ್ಮೀ ಹೇಳಿಕೆ ನೀಡಿದ್ದಾರೆ.

ಲೌರೆನ್‌ ಅಗೆನ್‌ಬ್ಯಾಗ್‌, ಕಿಮ್‌ ಕಾಟನ್‌, ಶಿವಾನಿ ಮಿಶ್ರಾ, ಸೂ ರೆಡ್‌ಫರ್ನ್‌, ಮೇರಿ ವಾಲ್ಡೋರ್ನ್‌ ಮತ್ತು ಜಾಕ್ವೆಲಿನ್‌ ವಿಲಿಯಮ್‌ ಐಸಿಸಿ ಪ್ಯಾನಲ್‌ನಲ್ಲಿರುವ ಮಹಿಳಾ ಅಧಿಕಾರಿಗಳಾಗಿದ್ದಾರೆ. ಮಹಿಳಾ ಅಭಿವೃದ್ಧಿ ಪ್ಯಾನಲ್‌ ಮೂಲಕ ಬೆಳಕಿಗೆ ಬಂದ ಪ್ರಪ್ರಥಮ ಮಹಿಳಾ ಅಂಪೈರ್‌ ಕ್ಯಾಥೀ ಕ್ರಾಸ್‌ ಕಳೆದ ವರ್ಷ ನಿವೃತ್ತಿ ಹೊಂದಿದ್ದರು.

ಇದೇ ವೇಳೆ ಐಸಿಸಿಯ ಹಿರಿಯ ನಿರ್ವಾಹಕರಾದ ಏಡ್ರಿಯನ್‌ ಗ್ರಿಫಿತ್‌, ಲಕ್ಷ್ಮೀ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. "ಲಕ್ಷ್ಮೀ ಅವರನ್ನು ನಮ್ಮ ಪ್ಯಾನಲ್‌ಗೆ ಸ್ವಾಗತಿಸುತ್ತೇವೆ. ಮಹಿಳಾ ಅಧಿಕಾರಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ. ಅವರ ಈ ಪ್ರಗತಿ ಕಂಡು ಸಂತಸವಾಗಿದೆ. ಭವಿಷ್ಯದಲ್ಲಿ ಮತ್ತಷ್ಟು ಮಹಿಳಾ ಅಧಿಕಾರಿಗಳು ಸೇರಲಿದ್ದಾರೆ ಎಂಬ ವಿಶ್ವಾಸವಿದೆ. ಲಿಂಗ ಸಮಾನತೆ ಒದಗಿಸುವಲ್ಲಿ ನಾವು ಬದ್ಧರಾಗಿದ್ದೇವೆ.'' ಎಂದು ಹೇಳಿದ್ದಾರೆ.

Story first published: Tuesday, May 14, 2019, 17:34 [IST]
Other articles published on May 14, 2019
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+