ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ಸಂಭಾವ್ಯ XI

India’s predicted XI for first T20I against West Indies

ನವದೆಹಲಿ, ಆಗಸ್ಟ್ 1: ಇಂಗ್ಲೆಂಡ್‌ನಲ್ಲಿ ನಡೆದ 2019ರ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ನಲ್ಲಿ ಸೋತು ಭಾರತ 3ನೇ ಟ್ರೋಫಿ ಕನಸನ್ನು ನುಚ್ಚು ನೂರಾಗಿಸಿಕೊಂಡಿತ್ತು. ಆ ಟೂರ್ನಿ ಬಳಿಕ ಟೀಮ್ ಇಂಡಿಯಾ ಮೊದಲ ಪ್ರವಾಸ ಸರಣಿಯಲ್ಲಿ ಪಾಲ್ಗೊಳ್ಳುತ್ತಿದೆ. ಆಗಸ್ಟ್ 3ರಿಂದ ಸರಣಿಯ ಪಂದ್ಯಗಳು ಆರಂಭಗೊಳ್ಳಲಿವೆ.

ಟೀಮ್ ಇಂಡಿಯಾ ಹೆಡ್‌ ಕೋಚ್‌ ಸ್ಥಾನಕ್ಕೆ ಬಂದ ಅರ್ಜಿಗಳೆಷ್ಟು ಗೊತ್ತಾ?!

ವಿರಾಟ್ ಕೊಹ್ಲಿ ನಾಯಕತ್ವದಲ್ಲಿರುವ ಭಾರತ ತಂಡದಲ್ಲಿ ಮಾಜಿ ನಾಯಕ ಎಂಎಸ್ ಧೋನಿ ಆಡುತ್ತಿಲ್ಲ. ಧೋನಿ ಈಗಾಲೇ ಭಾರತೀಯ ಆರ್ಮಿ ಸೇವೆಯಲ್ಲಿರುವುದರಿಂದ ಪ್ರವಾಸ ಸರಣಿಗೆ ಅಲಭ್ಯರಾಗಿರಲಿದ್ದಾರೆ. 3 ಟಿ20 ಪಂದ್ಯಗಳು, 3 ಏಕದಿನ ಪಂದ್ಯಗಳು ಮತ್ತು 2 ಟೆಸ್ಟ್ ಪಂದ್ಯಗಳನ್ನು ಸರಣಿ ಒಳಗೊಂಡಿದೆ.

ವಿಜಿ ಸಿದ್ಧಾರ್ಥ ಸಾವಿನ ಬಳಿಕ ಭಾವನಾತ್ಮಕ ಸಂದೇಶ ಬರೆದ ಆರ್ ಅಶ್ವಿನ್

ವೆಸ್ಟ್ ಇಂಡೀಸ್ ಪ್ರವಾಸ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳಲಿರುವ ಸಂಭಾವ್ಯ 11 ಆಟಗಾರರ ಪಟ್ಟಿ ಇಂತಿದೆ.

ರೋಹಿತ್ ಶರ್ಮಾ

ರೋಹಿತ್ ಶರ್ಮಾ

ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾದ ಬ್ಯಾಟಿಂಗ್ ಬಳಗದಲ್ಲಿ ಮಿಂಚಿದ್ದ ತಂಡದ ಉಪನಾಯಕ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್‌ನಲ್ಲಿ ಮಾತ್ರ ರೋಹಿತ್ ಬ್ಯಾಟಿಂಗ್ ವೈಫಲ್ಯ ತೋರಿಸಿದ್ದರು. ಆದರೆ ಅದೇ ಪಂದ್ಯದ ಸೋಲು ತಂಡದ ಪ್ರಶಸ್ತಿಯಾಸೆಯನ್ನು ಮಣ್ಣುಪಾಲಾಗಿಸಿತ್ತು.

ಶಿಖರ್ ಧವನ್

ಶಿಖರ್ ಧವನ್

ವಿಶ್ವಕಪ್‌ನಲ್ಲಿ ಶಿಖರ್ ಧವನ್ ಕೈ ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರ ಬಿದ್ದಿದ್ದರಿಂದ ರೋಹಿತ್-ಧವನ್ ಆರಂಭಿಕ ಜೋಡಿ ಅನಂತರದ ಪಂದ್ಯಗಳಲ್ಲಿ ಕಾಣಿಸಿರಲಿಲ್ಲ. ವಿಶ್ವಕಪ್‌ನ ಅನಂತರದ ಪಂದ್ಯಗಳಲ್ಲಿ ರೋಹಿತ್‌ಗೆ-ಕನ್ನಡಿಗ ಕೆಎಲ್ ರಾಹುಲ್ ಸಾಥ್ ನೀಡಿದ್ದರು. ಗಬ್ಬರ್ ಖ್ಯಾತಿಯ ಧವನ್ ಗಾಯದಿಂದ ಸಂಪೂರ್ಣ ಗುಣಮುಖರಾಗಿದ್ದು, ವಿಂಡೀಸ್ ಸರಣಿಯಲ್ಲಿ ರೋಹಿತ್‌ಗೆ ಜೊತೆಯಾಗಲಿದ್ದಾರೆ.

ಕೆಎಲ್ ರಾಹುಲ್

ಕೆಎಲ್ ರಾಹುಲ್

ಟೀಮ್ ಇಂಡಿಯಾ ಎಂದಿನ ಟೆಸ್ಟ್ ತಂಡದಲ್ಲಿ ರಾಹುಲ್ ಕಾಣಿಸಿಕೊಳ್ಳುತ್ತಾರೆ ಎನ್ನುವುದಕ್ಕೆ ಗ್ಯಾರಂಟಿಯಿಲ್ಲ. ಆದರೆ ಟಿ20 ಮಾದರಿಯಲ್ಲಿ ಮಾತ್ರ ಕೆಎಲ್ ರಾಹುಲ್ ತಂಡದಲ್ಲಿ ಖಂಡಿತಾ ಕಾಣಿಸಿಕೊಳ್ಳಲಿದ್ದಾರೆ. ಐಪಿಎಲ್‌ನಲ್ಲಿ ಭರ್ಜರಿ ಫಾರ್ಮ್ ತೋರಿಸುವ ರಾಹುಲ್ 3ನೇ ಕ್ರಮಾಂಕದಲ್ಲಿ ಬರಲಿದ್ದಾರೆ.

ವಿರಾಟ್ ಕೊಹ್ಲಿ

ವಿರಾಟ್ ಕೊಹ್ಲಿ

ಭಾರತ ತಂಡದ ಕಪ್ತಾನ ವಿರಾಟ್ ಕೊಹ್ಲಿ 4ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲಿದ್ದಾರೆ. ವಿಶ್ವಕಪ್‌ನಲ್ಲಿ ಕೊಹ್ಲಿ ಅದ್ಭುತ ಅನ್ನುವಂತ ಪ್ರದರ್ಶನವೇನೂ ನೀಡಿಲ್ಲ. ಹಾಗಂತ ತೀರಾ ಕಳಪೆ ಪ್ರದರ್ಶನವೂ ತೋರಿಸಿಲ್ಲ. ವೆಸ್ಟ್ ಇಂಡೀಸ್ ಸರಣಿಯಲ್ಲಿ ಕೊಹ್ಲಿ ಹೆಚ್ಚು ಮಿಂಚುವುದನ್ನು ನಿರೀಕ್ಷಿಸಬಹುದು.

ಮನೀಷ್ ಪಾಂಡೆ

ಮನೀಷ್ ಪಾಂಡೆ

ವಿಶ್ವಕಪ್‌ನಲ್ಲಿ ತಂಡದಲ್ಲಿ ಮನೀಷ್ ಪಾಂಡೆಯನ್ನು ಹೆಸರಿಸಲಾಗಿತ್ತಾದರೂ ಆಡುವ ಅವಕಾಶ ಮನೀಷ್‌ಗೆ ಸಿಕ್ಕಿರಲಿಲ್ಲ. ವಿಂಡೀಸ್ ಸರಣಿಯಲ್ಲಿ ಪಾಂಡೆ ಅದೃಷ್ಟ ಪರೀಕ್ಷೆ ಮಾಡಿಕೊಳ್ಳಲಿದ್ದಾರೆ. ಮನೀಷ್ ಪಾಂಡೆ 5ನೇ ಕ್ರಮಾಂಕದಲ್ಲಿ ಬರುವುದನ್ನು ನಿರೀಕ್ಷಿಸಲಾಗಿದೆ.

ರಿಷಬ್ ಪಂತ್

ರಿಷಬ್ ಪಂತ್

ತಂಡದ ಚುರುಕು ಬ್ಯಾಟ್ಸ್ಮನ್ ಅನ್ನಿಸಿಕೊಂಡಿರುವ ರಿಷಬ್ ಪಂತ್‌ಗೆ ಕೆರಿಬಿಯನ್ನರೆದುರು ಮಿಂಚಲು ಅವಕಾಶ ಲಭಿಸಿದೆ. ಎಂಎಸ್ ಧೋನಿ ತಂಡದಲ್ಲಿ ಇಲ್ಲದ್ದರಿಂದ ವಿಕೆಟ್ ಕೀಪಿಂಗ್‌ ಹೊಣೆಗಾರಿಕೆ ಪಂತ್ ಮೇಲಿದೆ. 6ನೇ ಕ್ರಮಾಂಕದಲ್ಲಿ ಪಂತ್ ಬರಲಿದ್ದಾರೆ.

ಕೃಣಾಲ್ ಪಾಂಡ್ಯ

ಕೃಣಾಲ್ ಪಾಂಡ್ಯ

ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಲಾಗಿರುವುದರಿಂದ ವಿಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಬದಲಾಗಿ ಪಾಂಡ್ಯ ಸಹೋದರ ಆಲ್ ರೌಂಡರ್ ಕೃನಾಲ್ ಪಾಂಡ್ಯ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೃಣಾಲ್ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬರಲಿದ್ದಾರೆ.

ಭುವನೇಶ್ವರ್ ಕುಮಾರ್

ಭುವನೇಶ್ವರ್ ಕುಮಾರ್

ಏಕದಿನ ಕ್ರಿಕೆಟ್‌ನ ನಂ.1 ವೇಗಿ ಜಸ್‌ಪ್ರೀತ್ ಬೂಮ್ರಾ ವಿಶ್ರಾಂತಿಯಲ್ಲಿರುವುದರಿಂದ ಬೂಮ್ರಾ ಜಾಗದಲ್ಲಿ ಮತ್ತೊಬ್ಬ ವೇಗಿ ಭುವನೇಶ್ವರ್ ಕುಮಾರ್ ತಂಡದಲ್ಲಿರಲಿದ್ದಾರೆ. ಆರಂಭಿಕ ಓವರ್ ಮತ್ತು ಡೆಯತ್ ಓವರ್ ಎರಡನ್ನೂ ನಿಭಾಯಿಸಬಲ್ಲ ಅನುಭವಿ ಭುವಿ 8ನೇ ಕ್ರಮಾಂಕದಲ್ಲಿ ಇರಲಿದ್ದಾರೆ.

ರಾಹುಲ್ ಚಾಹರ್

ರಾಹುಲ್ ಚಾಹರ್

ಭಾರತ ಟಿ20 ತಂಡದಲ್ಲಿ ರಿಸ್ಟ್ ಸ್ಪಿನ್ನರ್ ಚಾಹರ್ ಅವರನ್ನು ಹೆಸರಿಸಲಾಗಿತ್ತು. ಯುವ ಬೌಲರ್ ಚಾಹರ್ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರಭಾವ ಬೀರಿದ್ದರು. ವೆಸ್ಟ್ ಇಂಡೀಸ್ ಪ್ರವಾಸ ಚಾಹರ್‌ ಅದೃಷ್ಟ ಪರೀಕ್ಷೆಗೆ ಅವಕಾಶ ನೀಡಿದೆ.

ಖಲೀಲ್ ಅಹ್ಮದ್

ಖಲೀಲ್ ಅಹ್ಮದ್

ಗಾಯಕ್ಕೀಡಾಗಿದ್ದ ಖಲೀಲ್ ಅಹ್ಮದ್ ಚೇತರಿಸಿಕೊಂಡಿದ್ದು, ವಿಂಡೀಸ್ ಸರಣಿಗೆ ಪ್ರಕಟಿತ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲ ಟಿ20 ಪಂದ್ಯದಲ್ಲಿ ಖಲೀಲ್ ಮೈದಾನಕ್ಕಿಳಿಯುವ ನಿರೀಕ್ಷೆ ಹೆಚ್ಚಿದೆ. ಖಲೀಲ್ ಕೂಡ ಐಪಿಎಲ್‌ನಲ್ಲಿ ಗಮನ ಸೆಳೆದಿದ್ದವರು.

ದೀಪಕ್ ಚಾಹರ್

ದೀಪಕ್ ಚಾಹರ್

ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜಿನಲ್ ಪಾರ್ಕ್ ಕ್ರೀಡಾಂಗಣ ಟರ್ಫ್ ಸ್ಟೇಡಿಯಂನಲ್ಲಿ ವೇಗದ ಬೌಲರ್ ನವದೀಪ್ ಸೈನಿಗಿಂತ ದೀಪಕ್ ಚಾಹರ್ ಸ್ವಿಂಗ್ ಎಸೆತ ಹೆಚ್ಚು ಪರಿಣಾಮಕಾರಿ. ಹೀಗಾಗಿ 11ನೇ ಕ್ರಮಾಂದಲ್ಲಿ ದೀಪಕ್ ಚಾಹರ್ ಅವರನ್ನು ನಿರೀಕ್ಷಿಸಲಾಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Thursday, August 1, 2019, 16:31 [IST]
Other articles published on Aug 1, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more