Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಏಷ್ಯಾ ಕಪ್‌ಗೂ ಮುನ್ನ ಗುರುಮಂತ್ರ ಬೋಧಿಸಿದ ಗೌತಮ್ ಗಂಭೀರ್

ಇನ್ನೇನು ಎರಡು ದಿನಗಳಲ್ಲಿ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಯನ್ನು ಭಾರತ ಆಯೋಜಿಸುತ್ತಿದ್ದು, ಪ್ರಸಕ್ತ ಸಾಲಿನ ಟೂರ್ನಿಯನ್ನು ಟಿ20 ಮಾದರಿಯಲ್ಲಿ ಆಡಿಸಲಾಗುತ್ತಿದೆ. ಟೀಮ್ ಇಂಡಿಯಾ ಈ ಟೂರ್ನಿಯಲ್ಲಿ ಕಪ್‌ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಸೆ. 9 ರಂದು ಯುಇನಲ್ಲಿ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ ಆರಂಭವಾಗಲಿದೆ. ಈ ಟೂರ್ನಿಗಾಗಿ ಟೀಮ್ ಇಂಡಿಯಾ ಯುಎಇಗೆ ಆಗಮಿಸಿದ್ದು, ಶುಕ್ರವಾರ ಅಭ್ಯಾಸ ನಡೆಸಿತು.

ಟೀಮ್ ಇಂಡಿಯಾ ಈ ವರ್ಷದ ಆರಂಭದಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿಯ ಬಳಿಕ ಭಾಗವಹಿಸುತ್ತಿರುವ ಎರಡನೇ ಬಿಗ್ ಇವೆಂಟ್ ಇದಾಗಿದೆ. ಈ ಟೂರ್ನಿಗಾಗಿ ಟೀಮ್ ಇಂಡಿಯಾ ಮುಖ್ಯ ಕೋಚ್ ತಂಡದಲ್ಲಿ ಉತ್ಸಾಹ ತುಂಬವ ಕೆಲಸವನ್ನು ಮಾಡಿದ್ದಾರೆ. ಟಗಾರರು ಶುಕ್ರವಾರ ಮೊದಲ ಅಭ್ಯಾಸ ಅವಧಿಯಲ್ಲಿ ಭಾಗವಹಿಸಿದ್ದರು.

India s T20 Asia Cup Challenge Suryakumar Yadav Shivam Dube Ready to Shine

ಬಿಸಿಸಿಐ ಟೀಮ್ ಇಂಡಿಯಾದ ಒಂದು ವಿಡಿಯೋವನ್ನು ಬಿಡುಗಡೆ ಮಾಡಿದೆ. ಈ ವೇಳೆ ಆಲ್‌ರೌಂಡರ್‌ ಶಿವಂ ದುಬೆ ಇಡೀ ತಂಡದಲ್ಲಿ ಉತ್ಸಾಹ ತುಂಬಲು ಕೋಚ್‌ ಹೇಳಿದ ಮಾತುಗಳನ್ನು ಪುನರಾವರ್ತಿಸಿದ್ದಾರೆ. "ತಂಡದಲ್ಲಿ ವಾತಾವರಣ ಚೆನ್ನಾಗಿದೆ. ಹೀಗಾಗಿ ಪ್ರತಿಯೊಬ್ಬ ಆಟಗಾರ ಖುಷಿಯಿಂದ ಇದ್ದಾನೆ. ತಂಡಕ್ಕೆ ಮತ್ತೆ ಸೇರಿಕೊಂಡ ಬಳಿಕ ಮಿಂಚಲು ತಯಾರಿ ನಡೆಸಿದ್ದೇವೆ. ದೇಶಕ್ಕಾಗಿ ಆಡುವಾಗಲೆಲ್ಲಾ, ನಿಮಗೆ ಹೊಸದನ್ನು ಮಾಡುವ ಅವಕಾಶ ಇದೆ ಎಂದು ಕೋಚ್‌ ಯಾವಾಗಲು ನಮಗೆ ತಿಳಿಸುತ್ತಿರುತ್ತಾರೆ ಎಂದು ದುಬೆ ತಿಳಿಸಿದ್ದಾರೆ.

ಸೂರ್ಯ ಹೇಳಿದ್ದೇನು?

ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸುತ್ತಿರುವ ಸೂರ್ಯಕುಮಾರ್ ಯಾದವ್ ಸಹ ಈ ತಂಡದಿಂದ ದೊಡ್ಡ ಸಾಧನೆಯನ್ನು ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಸೂರ್ಯ, ನಮ್ಮ ತಂಡದಲ್ಲಿ ಅನೇಕ ಶ್ರೇಷ್ಠ ಆಟಗಾರರು ಇದ್ದಾರೆ. ಅವರು ಮೈದಾನದಲ್ಲಿ ಅಭ್ಯಾಸ ಮಾಡುವುದನ್ನು ನೋಡಲು ಯಾವಾಗಲೂ ನನಗೆ ಖುಷಿ ನೀಡುತ್ತದೆ. ಆಟಗಾರರು ಫಿಟ್ನೆಸ್‌ ಬಗ್ಗೆಯೂ ಹೆಚ್ಚಿನ ಗಮನ ಹರಿಸಿದ್ದಾರೆ. ಏಷ್ಯಾ ಕಪ್‌ನಲ್ಲಿ ಪ್ರತಿ ಆಟಗಾರನಿಗೂ ತನ್ನ ಜವಾಬ್ದಾರಿಯ ಅರಿವಿದೆ ಎಂದು ಸೂರ್ಯಕುಮಾರ್ ಯಾದವ್ ಹೇಳಿದ್ದಾರೆ.

India s T20 Asia Cup Challenge Suryakumar Yadav Shivam Dube Ready to Shine

ಟೀಮ್ ಇಂಡಿಯಾ ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಸೆ.10 ರಂದು ತನ್ನ ಅಭಿಯಾನವನ್ನು ಯುಎಇ ವಿರುದ್ಧ ಆರಂಭಿಸಲಿದೆ. ಇನ್ನು ಏಷ್ಯಾ ಕಪ್ ಟಿ20 ಕ್ರಿಕೆಟ್‌ ಟೂರ್ನಿಯ ಬಿಗ್ ಮ್ಯಾಚ್ ಭಾರತ-ಪಾಕ್‌ ಪಂದ್ಯ ಸೆ.14 ರಂದು ನಡೆಯಲಿದೆ. ಸೆಪ್ಟೆಂಬರ್ 19 ರಂದು ಭಾರತ, ಓಮನ್ ವಿರುದ್ಧ ಲೀಗ್‌ ಹಂತದ ಕೊನೆಯ ಪಂದ್ಯವನ್ನು ಆಡಲಿದೆ. ಎರಡು ಗುಂಪುಗಳಲ್ಲಿ ಮೊದಲೆರೆಡು ಸ್ಥಾನ ಪಡೆದ ತಂಡಗಳು, ಸೂಪರ್ 4 ಹಂತಕ್ಕೆ ಕ್ವಾಲಿಫೈ ಆಗಲಿವೆ. ಇನ್ನು ಸೂಪರ್ 4 ಹಂತದಲ್ಲಿ ಅಗ್ರ ಎರಡು ತಂಡಗಳು, ಫೈನಲ್‌ಗೆ ಅರ್ಹತೆ ಪಡೆಯಲಿವೆ. ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ನೂತನ ಚಾಂಪಿಯನ್ ಯಾರು ಎಂಬ ಪ್ರಶ್ನೆಗೆ ಸೆಪ್ಟೆಂಬರ್ 29 ರಂದು ಉತ್ತರ ಲಭಿಸಲಿದೆ.

Story first published: Sunday, September 7, 2025, 8:15 [IST]
Other articles published on Sep 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+