ಟೀಮ್ ಇಂಡಿಯಾಕ್ಕೆ ಮುಂಬೈಯಲ್ಲಿ 14 ದಿನಗಳ ಕ್ವಾರಂಟೈನ್

ಮುಂಬೈ: ಶ್ರೀಲಂಕಾಕ್ಕೆ ಪ್ರವಾಸ ಹೋಗಲಿರುವ ಭಾರತ ಸೀಮಿತ ಓವರ್‌ಗಳ ತಂಡ ಮುಂಬೈಯಲ್ಲಿ 14 ದಿನಗಳ ಕ್ವಾರಂಟೈನ್ ಪಾಲಿಸಲಿದೆ. ಜೂನ್ 14ರಿಂದ 28ರ ವರೆಗೆ ಶಿಖರ್ ಧವನ್ ಪಡೆ ಕ್ವಾರಂಟೈನ್ ಪಾಲಿಸಲಿದೆ. ಜೊತೆಗೆ ಆರು ಬಾರಿ ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಗಾಗಲಿದೆ.
ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಶ್ರೀಲಂಕಾಕ್ಕೆ ಹೋಗಲಿರುವ ಭಾರತ ತಂಡ ಜುಲೈ 13ರಿಂದ ಜುಲೈ 25ರ ವರೆಗೆ ಸೀಮಿತ ಓವರ್‌ಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಸರಣಿ ಆರಂಭಕ್ಕೂ ಮುನ್ನ ಒಂದು ಟಿ20 ಮತ್ತು ಎರಡು ಏಕದಿನ ಅಭ್ಯಾಸ ಪಂದ್ಯವನ್ನಾಡಲಿದೆ.
ಸದ್ಯ ಯುನೈಟೆಡ್ ಕಿಂಗ್ಡಮ್‌ನಲ್ಲಿರುವ ಭಾರತದ ಇನ್ನೊಂದು ತಂಡಕ್ಕೂ ಇದೇ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ನೀಡಲಾಗಿತ್ತು. ಶ್ರೀಲಂಕಾಕ್ಕೆ ಹೋಗುತ್ತಿರುವ ತಂಡಕ್ಕೂ ಅದೇ ರೀತಿಯ ಕೋವಿಡ್-ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸಲಾಗುತ್ತಿದೆ.
'ಇಂಗ್ಲೆಂಡ್‌ಗೆ ಹೋದ ತಂಡದಂತೆಯೇ ಎಲ್ಲಾ ನಿಯಮಗಳು ಒಂದೇ ಆಗಿರಲಿದೆ. ಮುಂಬೈಗಿಂತ ಹೊರಗಿರುವ ಕೆಲ ಆಟಗಾರರಲ್ಲಿ ಒಂದಿಷ್ಟು ಮಂದಿ ಚಾರ್ಟರ್ಡ್ ಫ್ಲೈಟ್‌ನಲ್ಲಿ, ಮತ್ತೊಂದಿಷ್ಟು ಮಂದಿ ವಾಣಿಜ್ಯ ವಿಮಾನದ ಬ್ಯುಸಿನೆಸ್ ಕ್ಲಾಸ್‌ನಲ್ಲಿ ಬರಲಿದ್ದಾರೆ,' ಎಂದು ಬಿಸಿಸಿಐ ಮೂಲವೊಂದು ಪಿಟಿಐಗೆ ಮಾಹಿತಿ ನೀಡಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications